ಜೂಜಿನ ಹಣಕೊಡು ಎಂದು ಹಿಂಸೆ ನೀಡಿ, ಆತನ ಆತ್ಮಹತ್ಯೆಗೆ ಕಾರಣನಾದ ಆರೋಪಿಗೆ ಶಿಕ್ಷೆ ಪ್ರಕಟ

SUDDILIVE || BHADRAVATHI

ಜೂಜಿನ ಹಣಕೊಡು ಎಂದು ಹಿಂಸೆ ನೀಡಿ, ಆತನ ಆತ್ಮಹತ್ಯೆಗೆ ಕಾರಣನಾದ ಆರೋಪಿಗೆ ಶಿಕ್ಷೆ ಪ್ರಕಟ-Sentence announced for the accused who tortured a man to commit suicide for gambling money

Sentence, gambling



ಯುವಕನ ಸಾವಿಗೆ ಕಾರಣಬಾದವನಿಗೆ ಘನ 4ನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ) 1 ಲಕ್ಷ ರೂ. ದಂಡ, 10 ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. 

ಭದ್ರಾವತಿ ತಾಲೂಕಿನ ಅಗರದಹಳ್ಳಿ ಕ್ಯಾಂಪ್ ನ ನಿವಾಸಿ ಶ್ರೀಮತಿ ಪಿ ಮುನಿಯಪ್ಪ  ದಿನಾಂಕ:28-04-2019 ರಂದು ನೀಡಿದ ದೂರಿನಲ್ಲಿ ಅವರ ಮಗನಾದ   ಶ್ರೀಧರ ಪಿ.ಎಂ (21)ನಿಗೆ ಅದೇ ಗ್ರಾಮದ ಆರೋಪಿತನಾದ ಚಂದ್ರಪ್ಪ (50) ಈತನು ಓಸಿ ಮಟ್ಕಾ ಜೂಜಾಟವನ್ನು ಕಲಿಸಿ ತಪ್ಪು ದಾರಿಗೆ ತಂದು ಜೂಜಾಟದಿಂದ ಬಂದ ಹಣವನ್ನು ನೀಡುವಂತೆ ಹಿಂಸೆ ಮಾಡುತ್ತಿದ್ದನು.

 ಈ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡ ಯುವಕ ಹಿಂಸೆ ತಾಳಲಾರದೇ ಕ್ರಿಮಿನಾಶಕವನ್ನು ಸೇವನೆ ಮಾಡಿ ದಿನಾಂಕ:12-01-2019 ರಂದು ಬೆಳಗ್ಗೆ 09.35 ಗಂಟೆಗೆ ಮೃತಪಟ್ಟಿದ್ದು, ಘಟನೆ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಶ್ರೀ ಮೋಹನ್‌ ಜಿ ಪಿ.ಎಸ್.‌ಐ ರವರು ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದಾರೆ, ಘನ 4ನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ) ಯಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿ ಚಂದ್ರಪ್ಪನ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ಆರೋಪಿಗೆ 10 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 1,00,000/- ರೂ ದಂಡ ವಿಧಿಸಿ ಆದೇಶಿಸಿರುತ್ತಾರೆ.

Sentence announced for the accused who tortured a man to commit suicide for gambling money

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close