ad

ಐಶರ್ ವಾಹನವನ್ನ ಅಬ್ಬೇಸಿಸಿದ ಭೂಪ! ಆಗುಂಬೆ ಬಳಿ ಪಾತಾಳಕ್ಕೆ ಮುಖಮಾಡಿದ ಬಸ್- Eicher vehicle crushed by landslide! Bus plunges into abyss near Agumbe

 SUDDILIVE || THIRTHAHALLI

ಐಶರ್ ವಾಹನವನ್ನೇ ಅಬ್ಬೇಸಿಸಿದ ಭೂಪ! ಆಗುಂಬೆ ಬಳಿ ಪಾತಾಳಕ್ಕೆ ಮುಖಮಾಡಿದ ಬಸ್-Eicher vehicle crushed by landslide! Bus plunges into abyss near Agumbe

Agumbe, Eicher

ಆಗುಂಬೆ ಬಳಿ ಎರಡು ಘಟನೆ ನಡೆದಿದೆ. ಒಂದು ತೀರ್ಥಹಳ್ಳಿಯಲ್ಲಿ ಕದ್ದ ಐಶರ್ ಗಾಡಿಯನ್ನ ಪೊಲೀಸರು ಪತ್ತೆ ಮಾಡಿದರೆ, ಮತ್ತೊಂದು ಘಟನೆಯಲ್ಲಿ ಆಗುಂಬೆಯ ಬಳಿ ಬಸ್ ನ ಸ್ಟೇರಿಂಗ್ ಕಟ್ ಆಗಿ ಪ್ರಪಾತಕ್ಕೆ ಮುಖಮಾಡಿ ನಿಂತಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಯಾವುದೇ ಅವಘಡಕ್ಕೆ ಸಿಲುಕದೆ ಪಾರಾಗಿದ್ದಾರೆ. 

ಮೊದಲಿಗೆ, ತೀರ್ಥಹಳ್ಳಿಯ ಪಟ್ಟಣದಲ್ಲಿ ವಾಶ್ ಗೆ ಬಿಟ್ಟ ಲಾರಿಯನ್ನೇ ಕಳ್ಳತನ ಮಾಡಿದ ವ್ಯಕ್ತಿ ನಂತರ ಆಗುಂಬೆ ಪೊಲೀಸ್ ರ ಕೈಗೆ ಸಿಕ್ಕಿ ಬಿದ್ದಿದ್ದಾನೆ. 

ನಿನ್ನೆ ನಿಖಿಲ್ ಕುಲಾಲ್ ಎಂಬುವರು ತಮ್ನ ಕೆಎ 15 6186 ಕ್ರಮ‌ಸಂಖ್ಯೆಯ ಐಷರ್ ವಾಹನವನ್ನ ಕುರುವಳ್ಳಿಯ ಉಬೇದ್ ಎಂಬುವರ ಬಳಿ ವಾಶ್ ಗೆ ಬಿಟ್ಟಿದ್ದರು. ವಾಶ್ ಗೆ ಬಿಟ್ಟ ಐಶರ್ ವಾಹನವನ್ನೇ ವ್ಯಕ್ತಿಯೊಬ್ಬ ಕಳುವು ಮಾಡಿಕೊಂಡು ಆಗುಂಬೆ ಕಡೆ ಚಲಿಸಿದ್ದಾನೆ. 

ಈ ಬಗ್ಗೆ ಉಬೇದ್ ಮತ್ತು ವಾಹನ ಮಾಲೀಕ ಕುಲಾಲ್ ತೀರ್ಥಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧಾರದ ಮೇರೆಗೆ ಆಗುಂಬೆಯ ಕೌರಿಹಕ್ಲು ಬಳಿ ವಾಹನ ಸಮೇತ ಸಿಲುಕಿಕೊಂಡಿದ್ದಾನೆ. ವಾಹನ ಮತ್ತು ವಾಹನವನ್ನ‌ಕದ್ದ ವ್ಯಕ್ತಿಯನ್ನ ಆಗುಂಬೆ ಪಿಎಸ್ಐ ತೀರ್ಥಹಳ್ಳಿ ಪೊಲೀಸ್ ಠಾಣೆಗೆ ವಾಪಾಸ್ ಹಸ್ತಾಂತರಿಸಿದ್ದಾರೆ. ವಾಹನ ಕದ್ದವನನ್ನ ನಂದೀಶ್ ಎಂದು ಗುರುತಿಸಲಾಗಿದೆ.‌

ಇನ್ನೂ ಆಗುಂಬೆಯ ಮೂರನೇ ತಿರುವಿನಲ್ಲಿ ಉಡುಪಿಗೆ ಪ್ರವಾಸಕ್ಕೆ ಹೊರಟಿದ್ದ ಟೂರಿಸ್ಟ್ ಬಸ್ ವೊಂದು ಸ್ಟೇರಿಂಗ್ ಕಟ್ ಆಗಿ ರಸ್ತೆ ದಾಟಿ ಪಾತಾಳಕ್ಕೆ ಮುಖಮಾಡಿ ನಿಂತಿದೆ. ಧಾರವಾಡದಿಂದ ಉಡುಪಿ ಮಠಕ್ಕೆ ಹೊರಟಿದ್ದ ಟೂರಿಸ್ಟ್ ಮಿನಿಬಸ್ ವೊಂದು ಸ್ಟೇರಿಂಗ್ ಕಟ್ ಆದ ಪರಿಣಾಮ ಪಾತಾಳಕ್ಕೆ ಮುಖ ಮಾಡಿ ನಿಂತಿದೆ. ಬಸ್ ನಲ್ಲಿದ್ದ 20 ಕ್ಕೂ ಹೆಚ್ಚು ಪ್ರಯಾಣಿಕರು ಸಧ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.  

Eicher vehicle crushed by landslide! Bus plunges into abyss near Agumbe

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close