ರಸ್ತೆ ಅಪಘತದಲ್ಲಿ ಅರಣ್ಯ ಕಾವಲುಗಾರ ಸಾವು

SUDDILIVE || THIRTHAHALLI

ರಸ್ತೆ ಅಪಘತದಲ್ಲಿ ಅರಣ್ಯ ಕಾವಲುಗಾರ ಸಾವು-Forest guard dies in road accident

Road, accident


ಶಿವಮೊಗ್ಗ – ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಬೆಜ್ಜವಳ್ಳಿಯಲ್ಲಿ ಶುಕ್ರವಾರ ಸಂಜೆ ಟ್ಯಾಂಕರ್, ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿದೆ. ದ್ವಿಚಕ್ರ ವಾಹನ ಸವಾರ ವೆಂಕಟೇಶ್ (55) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡುವಳ್ಳಿ ಗ್ರಾಮದ ಹಿರೇಬೈಲು ವಾಸಿ ವೆಂಕಟೇಶ್, ಮಂಡಗದ್ದೆ ವಲಯಾರಣ್ಯ ವಿಭಾಗದಲ್ಲಿ ಅರಣ್ಯ ಕಾವಲುಗಾರರಾಗಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Forest guard dies in road accident

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close