ಡೆತ್ ನೋಟ್ ಬರೆದು ಯುವತಿ ಆತ್ಮಹತ್ಯೆ-Young woman commits suicide by writing a death note

 SUDDILIVE || THIRTHAHALLI

ಡೆತ್ ನೋಟ್ ಬರೆದು ಯುವತಿ ಆತ್ಮಹತ್ಯೆ-Young woman commits suicide by writing a death note

Young, wonan


ಪದವಿ ವಿದ್ಯಾರ್ಥಿನಿಯೊಬ್ಬರು ಮನೆ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ತೀರ್ಥಹಳ್ಳಿ ತಾಲೂಕು ಬೆಜ್ಜವಳ್ಳಿ ಸಮೀಪದ ದಬ್ಬಣಗದ್ದೆ ಸಮೀಪದ ಬಚ್ಚನಕೊಡಿಗೆ ಘಟನೆ ಸಂಭವಿಸಿದೆ.

ರಮೇಶ್‌ ಆಚಾರ ಅವರ ಪುತ್ರಿ ಪ್ರಾಪ್ತಿ (21) ಮೃತಳಾಗಿದ್ದಾಳೆ.  ಇಂದು ಬೆಳಗಿನ ಜಾವ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಾಪ್ತಿ ಪತ್ತೆಯಾಗಿದ್ದಾಳೆ. ಬಾಳೆಬೈಲಿನ ಪದವಿ ಕಾಲೇಜಿನಲ್ಲಿ ಪ್ರಾಪ್ತಿ ತೃತೀಯ ವರ್ಷದ ಬಿಬಿಎ ಪದವಿ ಓದುತ್ತಿದ್ದರು.

ಮಾಳೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಯುವತಿ ಡೆತ್ ನೋಟ್ ಸಹ ಬರೆದು ನನಗೆ ಆರೋಗ್ಯದ ಸಮಸ್ಯೆಯಿಂದ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಉಲ್ಲೇಖಿಸಿದ್ದಾರೆ. 

Young woman commits suicide by writing a death note

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close