SUDDILIVE || SHIVAMOGGA
ಯುನೆಸ್ಕೋ ಅನುದಾನಕ್ಕೆ ಸರ್ಕಾರ ಶ್ವೇತಪತ್ರ ಹೊರಡಿಸಲಿ-ಮಾರುತಿ ಶ್ರಿಗಳು- Government should issue a white paper on UNESCO funds - Maruti Sri
ಶರಾವತಿ ಪಂಪ್ಡ್ ಸ್ಟೋರೇಜ್ ನಿಂದ ಜಲಕ್ಕೇನೆ ಕಂಟಕ ಬಂದಿದೆ ಎಂದು ಮಾಜಿ ಶಾಸಕ ಎಟಿ ರಾಮಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 8 ವೈವಿಧ್ಯ ತಾಣದಲ್ಲಿ ಪಶ್ಚಿಮ ಘಟ್ಟವೂ ಒಂದಾಗಿದೆ. ಇದು ನಮ್ಮ ಭ ಭಾಗ್ಯವೂ ಹೌದು. ಹೆಚ್ಚು ಮಳೆಯಿಂದಾಗಿ ಹಸಿರನ್ನಾಗಿಸಿವೆ. ಈ ಘಟ್ಟ ಮಳೆಯ ಕಾಡಾಗಿದೆ. ಕೃಷಿ ಕೈಗಾರಿಕೆಗೆ ನೀರು ನೀಡಿ ಬದುಕಿಗೆ ಆಧಾರವಾಗಿದೆ. ಈ ಕಾಡನ್ನ ರೈನ್ ಟವರ್ ಎಂದೇ ಕರೆಯಲಾಗಿದೆ.
ನೀರು ಕಡಿಮೆಗೆ ಅರಣ್ಯ ನಾಶದಿಂದಾಗಿದೆ. ಜಾಗತಿಕ ತಾಪಮಾನಪರಿಸರ ವೈಪರೀತ್ಯಕ್ಕೂ ಇದೇ ಕಾರಣವಾಗಿದೆ. ಈಘಟ್ಟಗಳನ್ನ ನಾವು ರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು. ಇಂತಹ ಸನ್ನಿವೇಶದಲ್ಲಿ ಶರಾವತಿ ಕಣಿವೆಯಲ್ಲಿ ಪಂಪ್ಡ್ ಸ್ಟೋರೇಜ್ ನಂತಹ ಯೋಜನೆ ಜಾರಿ ಮಾಡಲಾಗುತ್ತಿದೆ. ಭೂಕುಸಿತವಾಗೊಲ್ಲ ಎಂದು ವರದಿಯನ್ನ ಹವಮಾನ ವೈಪರೀತ್ಯ ಇಲಾಖೆ ನೀಡಿದೆ. ಆದರೆ ಇದೇ ಸಂಸ್ಥೆ ಐದಾರು ಪಶ್ಚಿಮಕ್ಕೆ ಘಟ್ಟದ ಜಾಗಗಳನ್ನ ಗುರುತಿಸಿ ಇಲ್ಲಿ ಭೂಕುಸಿತವಾಗಲಿದೆ ಎನ್ನುತ್ತಾರೆ. ಇಂತಹ ಗೊಂದಲ ಹೇಳಿಕೆಯಿಂದ ಸಮಸ್ಯೆ ಉಂಟಾಗಿದೆ ಎಂದು ದೂರಿದರು.
ಪರಿಸರ ಉಲ್ಲಂಘನೆಯಾಗಿದೆ. ಕಾನೂನು ರಕ್ಷಣೆಕೊಡುವವರಿಗೆ ಕಾನೂನು ಅನ್ವಯವಾಗೊಲ್ವ? ಇವರು ಕಾನೂನಿಗಿಂತ ದೊಡ್ಡವರಾದರಾ? ಪ್ರಗತಿಯ ಹೆಸರಿನಲ್ಲಿ ಪರಿಸರ ಹಾನಿ ಸೂಕ್ತವಲ್ಲ. ಆಡಳಿತ ನಡೆಸುವವರಿಗೆ ಮೆಗಾ ಕಂಪನಿ ಬೇಕಾಗಿದೆ. ವಿವಿಧ ಇಲಾಖೆಗಳ ಅನುಮತಿ ದೊರೆತಿಲ್ಲ. ಯೋಜನೆ ಜಾರಿ ತರಲು ಹಪಾಹಪಿಯಾಗಿದ್ದಾರೆ. ಮುಂದಿನ ಚುನಾವಣೆಗೆ ಸ್ಪರ್ಧಿಸುವವರ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಆಕ್ಷೇಪಿಸಿದರು.
ಅಸಂಸ್ಕೃತರ ಕೈಗೆ ಸಿಕ್ಕಿ ಈ ಘಟ್ಟದ ನಿವಾಸಿಗಳು ಸಂಕಷ್ಟಕ್ಕೊಳಗಾಗಿದ್ದೇವೆ. ಪಶ್ವಿಮ ಘಟ್ಟ ಹಾಳಾದರೆ ಮುಂದಾಗುವ ತೊಂದರೆ ಪ್ರಶ್ನಾತೀತವಾಗಿದೆ. ಪ್ರಜಾಪ್ರಭುತ್ವದಲ್ಲಿ ಜನರ ಅಭಿಪ್ರಾಯವನ್ನ ಸರ್ಕಾರ ಗೌರವಿಸುತ್ತಿಲ್ಲ. ಶರಾವತಿ ಪಂಪ್ಡ ಸ್ಟೋರೇಜ್ ಯೋಜನೆ ರದ್ದಾಗಬೇಕು. ಇಂತಹ ಯೋಜನೆಗಳು ಪಶ್ಚಿಮಘಟ್ಟದಲ್ಲಿ ಮಾಡಬಾರದು ಎಂದು ಆಗ್ರಹಿಸಿದರು.
ನಿವೃತ್ತ ನ್ಯಾಯಮುರ್ತಿ ಗೋಪಾಲಗೌಡ ಮಾತನಾಡಿ, ಯಾವುದೇ ಪ್ರಗತಿ ಮತ್ತು ಅಭಿವೃಧ್ಧಿ ಅಡ್ಡಿಗೆ ನಾವಿಲ್ಲ. ಪರಿಸರಕ್ಕೆ ಅಡ್ಡಿಯಾದಾಗ ಅದನ್ನ ನಾವು ಖಂಡಿಸಿತ್ತೇವೆ. ಏರ್ ಪೊಲೂಷನ್ ಕಾಯ್ದೆ, ಅರಣ್ಯ ಸಂರಕ್ಷಣ ಕಾಯ್ದೆಯಿದೆ. ಈ ಕಾಯ್ದೆಗಳು ಪರಿಸರ ಹಾಳುಮಾಡಲಿದೆಯಾ. ರಕ್ಷಣೆಗಿದೆಯ ಎಂಬುದೇ ಗೊಂದಲವಾಗಿದೆ. ಈ ಯೋಜನೆ ಪರಿಸರಕ್ಕೆ ಹಾನಿಯಾಗಲಿದೆಯಾ ಅಥವಾ ಇಲ್ಲವಾ ಎಂಬುದನ್ನ ಜನರಿಗೆ ಬಿಡಲಾಗಿದೆ. ಅಭಿವೃದ್ದಿ ಹೆಸರಿನಲ್ಲಿ ಜನವಿರೋಧಿಯಾದರೆ ನಮ್ಮ ವಿರೋದವಿದೆ. ಪವರ್ ಜನರೇಷನ್ ಗೆ ಜನವಿರೋಧಿ ಯೋಜನೆಯಾಗಿದೆ ಕೆಪಿಸಿಎಲ್ ನವರು ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಅದರಿಂದ ಜಾಗೃತಿ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಯೋಜನೆಗೆ 54 ಎಕರೆ ಮಾತ್ರವಲ್ಲ 347 ಎಕರೆ ಜಮೀನು ಬಳಕೆಯಾಗುತ್ತಿದೆ. 18 ಸಾವಿರ ಟನ್ ಟನಲ್ ಕಟ್ಟಲು ಸ್ಪೋಟಕ ವಸ್ತುಗಳ ಬಳಕೆಯಾಗುತ್ತಿದೆ. ಕಾನೂನು ಬಾಹಿರವಾಗಿ ಮಾಹಿತಿಕೊಟ್ಟು ಯೋಜನೆಯ ಬಗ್ಗೆ ಸುಳ್ಳು ಜಾಗೃತಿ ಮಾಡಲಾಗಿದೆ. ಪರಿಸರ ಕ್ಲಿಯರೆನ್ಸ್ ಬಗ್ಗೆ ಕೇಂದ್ರ ಸಿಕ್ಕಿಲ್ಲ. ಈ ಯೋಜನೆಗೆ ನಮ್ಮ ವಿರೋಧವಿದೆ. ಸೆಕ್ಷನ್ 2 ರ ಅಡಿ ಭಾರತ ಸರ್ಕಾರ ಪರಿಸರ ಕ್ಲಿಯರೆನ್ಸ್ ಗೆ ಅನುಮತಿ ನೀಡಿಲ್ಲ. ಕ್ಲಾರಿಫಿಕೇಷನ್ ನ್ನ ರಾಜ್ಯ ಸರ್ಕಾರದಿಂದ ಕೇಳಿದೆ ಎಂದರು.
ಮಾಜಿ ಲೋಕಾಯುಕ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ಮಾತನಾಡಿ, ಪಂಪ್ಡ್ ಸ್ಟೋರೇಜ್ ಯೋಜನೆಗೆ ಕೆಪಿಸಿಎಲ್ 21 ಕಿಮಿ ಟನಲ್ ನಿರ್ಮಿಸಲು ಮುಂದಾಗಿದೆ. 1600 ಮೀಟರ್ ಕೆಳಗೆ ಹೋಗಲು ಸ್ಪೋಟಕ ಬಳಸಬೇಕಿದೆ. 15 ಸಾವಿರ ಮರ ನಾಶವಾಗಲಿದೆ. ಮರವಿಲ್ಲದೆ ಇದ್ದರೆ ಮಳೆಗೆ ಅಭಾವವವಾಗಲಿದೆ. ಟನಲ್ ಮೇಲೆ ಮರ ಬೆಳೆಯಲ್ಲ. ಮರವಿಲ್ಲದೆ ಪರಿಸರ ಹಾನಿಯಾಗಲಿದೆ. ಇದರ ಖರ್ಚು 10420 ಕೋಟಿ ರೂ. ವೆಚ್ಚವಾಗಲಿದೆ ಎಂದು ದೂರಿದರು.
ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ ನಿಂದ ಗಾಳಿ ಮತ್ತು ಸೋಲಾರ್ ಮೂಲಕ ಉತ್ಪಾದಿಸಬಹುದು. ಘಟ್ಟಗಳ ಹಾನಿ ಸರ್ಕಾರದಿಂದಲೇ ಆದರೆ ಪರಿಸರವನ್ನ ಮುಂದಿನ ಪೀಳಿಗೆಗೆ ನೀಡಲಾಗುತ್ತದಾ ಎಂದು ಪ್ರಶ್ನಿಸಿದ ಅವರು. ಇದು ಜನರ ಹಿತಾಸಕ್ತಿಯಿಂದ ಅಲ್ಲ. ಇದನ್ನ ಈಗ ತಡೆಯದಿದ್ದರೆ ಮುಂದೆವರೆಯಲಿದೆ. ನನಗೆ 86 ವರ್ಷ ನನ್ನ ಲಾಭಕ್ಕಾಗಿ ಹೋರಾಡುತ್ತಿಲ್ಲ. ಮುಂದಿನ ಮಕ್ಕಳಿಗಾಗಿ ಪರಿಸರ ಉಳಿಸಬೇಕಿದೆ. ಈ ಯೋಜನೆ ನಿಲ್ಲದಿದ್ದರೆ ಕೆಲವರ ಲಾಭಕ್ಕಾಗಿ ಹಲವರ ಬದುಕು ದುಸ್ಥಿರವಾಗಲಿದೆ ಎಂದು ಕಟುವಾಗಿ ನುಡಿದರು.
ಬಂಗಾರುಮಕ್ಕಿ ವೀರಾಂಜನೇಸ್ವಾಮಿ ಮಠದ ಮಾರುತಿ ಶ್ರೀಗಳು ಮಾತನಾಡಿ, ಯುನೆಸ್ಕೋ ಹೆರಟೇಜ್ ಸ್ಥಳವಾಗಿ ಪಶ್ಚಿಮಘಟ್ಟವನ್ನ ಗುರುತಿಸಲಾಗಿದೆ. ಇಲ್ಲಿನ ಜೀವವೈವುದ್ಯತೆ ಮಹತ್ವಾಗಿದೆ. ಬಹಳಷ್ಟು ಕಾಲದಿಂದ ಬೇರೆ ಬೇರೆ ಯೋಜನೆಗಳು ಬರ್ತಾನೆ ಇವೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನ ವಿರೋಧಿಸುತ್ತಿರುವಾಗಲೆ 12 ಯೋಜನೆಗಳು ಪಶ್ಚಿಮ ಘಟ್ಟದಲ್ಲಿ ಘೋಷಣೆಯಾದವು. ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶ ಮಾತ್ರವಲ್ಲ ಇಲ್ಲಿಂದ ನೀರನ್ನ ಬೆಂಗಳೂರಿಗೆ ಕೊಂಡೊಯ್ಯುವ ಹುನ್ನಾರವೂ ಇದೆ. ಬೆಂಗಳೂರಿಗೆ ಕರೆದೊಯ್ಯಲು ಮತ್ತು ಪಂಪ್ಟ್ ಸ್ಟೋರೇಜ್ ನಿಂದ 21 ಲಕ್ಷ ಮರ ಕಡಿತಲೆಯಾಗಲಿದೆ. ಇದನ್ನ ಪರಿವೇಜ್ ಪೋರ್ಟಲ್ ನಲ್ಲಿ ಪರಿಶೀಲಿಸಬಹುದು ಎಂದರು.
ಕಲೂಷಿತ ಪರಿಸರದ ನಡುವೆ ಪರಿಶುದ್ಧ ಗಾಳಿ ಮಾಡುವಂತಾಗಿದೆ. ಜಲವಿದ್ಯುತ್ ಬದಲು ಬ್ಯಾಟರಿ ಆಧಾರಿತ ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ ಗುಜರಾತ್ ನಲ್ಲಿ ಅಳವಡಿಸಲಾಗಿದೆ. ಇಲ್ಲಿಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಶ್ರೀಗಳು ವಿಶ್ವವೇ ಬೆರಗಸಗುವಂತೆ ವಿದ್ಯುತ್ ಉತ್ಪಾದನೆಯನ್ನಬ್ಯಾಟರಿ ಮೂಲಕ ಮಾಡಬಹುದಾದರೂ ಇಂತಹ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಯೋಜನೆಯಾಕೆ ಮಾಡಿದರು ಎಂದು ಪ್ರಶ್ನಿಸಿದರು.
ಕೇಂದ್ರ ಭೂಪೇಂದ್ರ ಯಾದವ್ ನವರು ತಂಡವನ್ನ ಕಳುಹಿಸಿದೆ. ಆದರೆ ತಡೆ ನೀಡಿಲ್ಲ. ಈ ಯೋಜನೆಗೆ ಎಲ್ಲಿಯವರೆಗೆ ಕೈಬಿಡಲಾಗಿದೆ ಎಂದು ನೋಟಿಫಿಕೇಷನ್ನ ಹೊರಡಿಸುವುದಿಲ್ಲವೋ ಅಲ್ಲಿಯ ವರೆಗೆ ಹೋರಾಟ ನಡೆಯಲಿದೆ. ವರದ, ಶರಾವತಿ ನದಿಗಳ ತಿರುವನ್ನ ಹೋರಟಿದ್ದೀರಿ. ಇದನ್ನ ಮುಟ್ಟುವ ಹಕ್ಕು ಯಾರಿಗೂ ಇಲ್ಲ. ಅದರ ಜೊತೆ ಬದುಕಲು ನಮ್ಮನ್ನಬಿಡಿ. ಯುನೆಸ್ಕೋಪಶ್ಚಿಮ ಘಟ್ಟದ ರಕ್ಷಣೆಗಾಗಿ 12000 ಕೋಟಿ ಹಣವನ್ನ ಕೊಡುತ್ತದೆ. ಅದರ ಬಗ್ಗೆಯೂ ರಾಜ್ಯ ಸರ್ಕಾರ ಶ್ವೆತಪತ್ರ ಹೊರಡಿಸಬೇಕಿದೆ ಎಂದರು.
ಕಪ್ಪದಗುಡ್ಡದ ಶಿವಮೂರ್ತಿಶ್ರೀಗಳು,ಅಭಿನವ ಚೆನ್ನಬಸವ, ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ, ಧರ್ಮಗುರು ರೋಷನ್ ಪಿಂಟೋ, ಮಾಜಿ ಶಾಸಕರಾದ ಮಹಿಮಾಪಾಟೀಲ್, ಹರತಾಳಹಾಲಪ್ಪ, ರೈತಮುಖಂಡ ಜೆ.ಟಿ.ಗಂಗಾಧರ್, ದಿನೇಶ್ ಶಿರವಾಳ, ಅಖಿಲೇಶ್ ಚಿಪ್ಪಲಿ, ಕುಮಾರ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.
Government should issue a white paper on UNESCO funds - Maruti Sri
