SUDDILIVE || SHIVAMOGGA
ರೂಪೇಶ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಜೈ ಸಿನಿಮಾ ಇದೇ ನವಂಬರ್ 14 ರಾಜ್ಯಾದ್ಯಂತ ಬಿಡುಗಡೆಯಾಗಲಿದೆ-Jai, the movie starring and directed by Rupesh Shetty, will be released across the state on November 14th.
ಈ ಚಿತ್ರದ ಕುರಿತು ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಇದೊಂದು ಪೊಲಿಟಿಕಲ್ ಡ್ರಾಮಾ ಹಾಗೂ ಸೋಶಿಯಲ್ ಕಾಮಿಡಿಯನ್ನು ಒಳಗೊಂಡಿರುವ ಚಿತ್ರ . ಇದರಲ್ಲಿ ಜನರು ತಾವು ಆಯ್ಕೆ ಮಾಡಿದ ರಾಜಕೀಯ ನಾಯಕರು ಮಾಡಿದ ಎಲ್ಲ ತಪ್ಪುಗಳಿಗೆ ಜೈ ಅನ್ನದೇ ಅದನ್ನು ಪ್ರಶ್ನಿಸುವ ಧೈರ್ಯವನ್ನು ಬೆಳೆಸಿಕೊಳ್ಳಬೇಕು ಎಂಬ ಎಳೆ ಯನ್ನೇ ಹಿಡಿದುಕೊಂಡು ಕಥೆಯನ್ನು ಮಾಡಿದ್ದೇವೆ.
ಈ ಚಿತ್ರ ಉತ್ತಮವಾಗಿ ಮೂಡಿಬಂದಿದ್ದು ಈಗಾಗಲೇ ಆರು ದೇಶಗಳಲ್ಲಿ ಇಂಟರ್ನ್ಯಾಷನಲ್ ಪ್ರೀಮಿಯರ್ ಶೋವನ್ನು ಮಾಡಿದ್ದೇವೆ. ಅಲ್ಲಿ ಕೂಡ ಜನರಿಂದ ಉತ್ತಮ ಅಭಿಪ್ರಾಯ ಬರುತ್ತಿದೆ. ಒಂದು ಚಿತ್ರ ರಿಲೀಸ್ ಆಗುವ ಮುನ್ನ ಪ್ರೇಮಿಯರ್ ಶೋ ಬಿಟ್ಟಾಗ ಜನರಿಗೆ ಬೇಗ ರೀಚ್ ಆಗುತ್ತದೆ ಎಂಬುದು ನಮ್ಮ ನಂಬಿಕೆ. ಹಾಗೆಯೇ ಇಂದು ಶಿವಮೊಗ್ಗದ ಭಾರತ್ ಸಿನಿಮಾಸ್ ಅಲ್ಲಿ 3 ಪ್ರೀಮಿಯರ್ ಶೋ ಅನ್ನು ಬಿಡುತ್ತಿದ್ದು ಎಲ್ಲರೂ ಬಂದು ಪ್ರೋತ್ಸಾಹಿಸಿ ಎಂದರು.
ನಟಿ ಅಧ್ವಿತಿ ಶೆಟ್ಟೆ ಮಾತನಾಡಿ ಇದು ನನ್ನು ಮೊದಲ ತುಳು ಸಿನಿಮಾ . ಈ ಸಿನಿಮಾದಲ್ಲಿ ನಾನು ರಿಪೋರ್ಟರ್ ಆಗಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಎಂದರು.
Jai, the movie starring and directed by Rupesh Shetty, will be released across the state on November 14th
