ad

ಹೋರಿ ಹಬ್ಬದ ಅವಾಂತರ-ಹಲವು ಯುವಕರಿಗೆ ಗಾಯ- Hori festival chaos - many youths injured

SUDDILIVE || SHIKARIPURA

ಹೋರಿ ಹಬ್ಬದ ಅವಾಂತರ-ಹಲವು ಯುವಕರಿಗೆ ಗಾಯ- Hori festival chaos - many youths injured

Hori, festival



ಶಿವಮೊಗ್ಗದಲ್ಲಿ ಹೋರಿ ಹಬ್ಬ ತಂದ ಅವಾಂತರ  ತಡವಾಗಿ ಬೆಳಕಿಗೆ ಬಂದಿದೆ. ಹೋರಿ ಹಬ್ಬದಲ್ಲಿ ಮಾಜಿ ಶಾಸಕ ಮಹಾಲಿಂಗಪ್ಪ ಗೆ ತಿವಿದ ಪ್ರಕರಣ  ಮತ್ತು ಹಾವೇರಿಯಲ್ಲಿ ಹೋರಿ ತಿವಿದು ಮೂವರು ಸಾವನ್ನಪ್ಪಿರುವ ಘಟನೆ ಇನ್ನೂ ಮಾಸುವ ಮುನ್ನವೇ ಎರಡು ತಾಲೂಕಿನಲ್ಲಿ ಸರಣಿ ಅವಘಡ ಸಂಭವಿಸಿದೆ. 

ಶಿಕಾರಪುರಿ ಮತ್ತು ಶಿವಮೊಗ್ಗ ತಾಲೂಕಿನಲ್ಲಿ ಪ್ರತ್ಯೇಕ ಘಟನೆಗಳು ನಡೆದಿದೆ. ಸರಣಿ ಘಟನೆಗಳಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಒಂದು ವಾರದ ಹಿಂದೆ ನಡೆದ ಪ್ರತ್ಯೇಕ ಹೋರಿ ಬೆದರಿಸುವ ಹಬ್ಬ ಶಿಕಾರಿಪುರದ ದೊಡ್ಡ್ಡಕೇರಿ ಹಾಗೂ ಶಿವಮೊಗ್ಗ ತಾಲೂಕಿನ ರಾಮೇನಕೊಪ್ಪದಲ್ಲಿ ನಡೆದ ಹೋರಿ ಹಬ್ಬದಲ್ಲಿ ಹೋರಿ ಬೆದರಿಸಲು ಅಖಾಡಕ್ಕಿಳಿದವರಿಗೆ ಗಂಭೀರ ಗಾಯಗಳಾಗಿವೆ. 

ರಾಮೇನಕೊಪ್ಪದಲ್ಲಿ ನಡೆದ ಹೊರಿ ಹಬ್ಬದಲ್ಲಿ ನೋಡಲು ಬಂದ ಯುವಕನಿಗೆ ಗಾಯಗಳಾಗಿವೆ. ಹೋರಿ ಹಬ್ಬ ನೋಡಲು ಬಂದ ಕುಮಾರ್ ಎಂಬ ಯುವಕನಿ ಗಾಯವಾಗಿದೆ. ಕುಮಾರ್ ಗೆ ಮುಖದ ಭಾಗಕ್ಕೆ ಹೋರಿ  ತಿವಿದ ಪರಿಣಾಮ ಮೂರು ಹಲ್ಲುಗಳು ಉರಿದಿವೆ. 

ಶಿಕಾರಿಪುರದ ದೊಡ್ಡಕೇರಿಯಲ್ಲಿ ನಡೆದ ಮತ್ತೊಂದು ಹೋರಿ ಹಬ್ಬದಲ್ಲೂ ಹಲವು ಯವಕರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

Hori festival chaos - many youths injured

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close