ad

ರಸ್ತೆ ಅಪಘಾತ,ಓರ್ವ ಗಂಭೀರ ಗಾಯ- Road accident, one seriously injured

 SUDDILIVE || SHIVAMOGGA

ರಸ್ತೆ ಅಪಘಾತ,ಓರ್ವ ಗಂಭೀರ ಗಾಯ- Road accident, one seriously injured   

Road, accident


ಕಾರು ಮತ್ತು ಬೈಕ್‌ ನಡುವೆ ಉಂಟಾದ ಡಿಕ್ಕಿಯಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಶಿವಮೊಗ್ಗ – ಸವಳಂಗ ರಸ್ತೆಯಲ್ಲಿ ಅಬ್ಬಲಗೆರೆ ಸಮೀಪ ಇಂದು ಮಧ್ಯಾಹ್ನ ರಸ್ತೆ ಅಪಘಾತ ಸಂಭವಿಸಿದೆ. ತಾಲೂಕಿನ ಕೊಮ್ಮನಾಳು ಗ್ರಾಮದ ಚಂದನ್ (26) ಗಾಯಗೊಂಡಿದ್ದಾರೆ.

ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ಹಾಗೂ ಕಾರು ಭಾಗಶಃ ಜಖಂಗೊಂಡಿದೆ. ಕೂಡಲೆ ಸ್ಥಳೀಯರು ಮತ್ತು ದಾರಿಯಲ್ಲಿ ಸಾಗುತ್ತಿದ್ದವರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Road accident, one seriously injured 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close