SUDDILIVE || SHIVAMOGGA
ಅಕ್ರಮ ಮಣ್ಣು ಸಾಗಾಣಿಕೆ ಹಾಗೂ ಮೂರು ಇಲಾಖೆಗಳ ಪತ್ರ ವ್ಯವಹಾರಗಳು-Illegal soil transportation and correspondence between three departments
ಶಿವಮೊಗ್ಗ ತಾಲೂಕು ಕೊಮ್ಮನಾಳು ಗ್ರಾಮದ ಸರ್ವೆ ನಂಬರ 7 ರಲ್ಲಿರುವ ಖರಾಬು ಗುಡ್ಡದಲ್ಲಿ ಅಕ್ರಮ ಮಣ್ಣು ಸಾಗಾಣಿಕೆ ಮತ್ತೆ ಮುಂದುವರೆದಿದೆ. ಇಲಾಖೆಗಳಾದ ಗಣಿ, ಪೊಲೀಸ್ ಮತ್ತು ತಹಶೀಲ್ದಾರ್ ಕಚೇರಿಗಳು ಪರಸ್ಪರ ಪತ್ರ ವ್ಯವಹಾರದಲ್ಲಿ ಮುಳುಗಿವೆ ವಿನಃ ಯಾವುದೇ ಕ್ರಮ ಜರುಗಿಸುವಲ್ಲಿ ವಿಫಲವಾಗುತ್ತಿರುವುದು ಪತ್ರಗಳಿಂದ ಬಹಿರಂಗವಾಗಿದೆ.
ಅಕ್ರಮ ಮಣ್ಣು ಸಾಗಾಣಿಕೆಕೋರನ್ನ ನಿರ್ಬಂಧಿಸಲು ಕಾನೂನು ಇದ್ದರೂ ಮೂರು ಇಲಾಖೆಗಳು ವಿಫಲವಾಗಿದೆಯಾ ಅನುಮಾನಕ್ಕೆ ಕಂದಾಯ ಅಧಿಕಾರಿಗಳ ವರದಿ ಮತ್ತು ಗ್ರಾಮಸ್ಥರ ಮರುದೂರುಗಳು ಪುಷ್ಠಿ ನೀಡುತ್ತಿದೆ.
ಈ ಹಿಂದೆ ಕೊಮ್ಮನಾಳು ಗುಡ್ಡದಿಂದ ಅಕ್ರಮ ಮಣ್ಣು ಸಾಗಾಣಿಕೆ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು 2024 ರಲ್ಲಿ ಮತ್ತು 2025 ರಲ್ಲಿ ದಾಳಿ ನಡೆಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2025 ರಲ್ಲಿ ನಡೆದ ದಾಳಿಯ ವರದಿಯಲ್ಲಿ 17 ಲಕ್ಷ ರೂ.ಗೂ ಅಧಿಕ ಮಣ್ಣು ತೆಗೆದು ಸರ್ಕಾರದ ಬೊಕ್ಕಸಕ್ಕೆ ನಷ್ಟುಂಟು ಮಾಡಿದ್ದರು ಎಂದು ಗಣಿ ಮತ್ತು ಭೂವಿಜ್ಞಾನಿ ಇಲಾಖೆ ಅಧಿಕಾರಿಗಳು ತಹಶೀಲ್ದಾರ್ ಅವರಿಗೆ ಪತ್ರ ಬರೆದಿದ್ದರು.
ಗ್ರಾಮಸ್ಥರು ಗುಡ್ಡದಿಂದ ಅಕ್ರಮ ಮಣ್ಣು ಸಾಗಾಣಿಕೆ ನಡೆಯುತ್ತಿದೆ ಎಂದು ದೂರು ನೀಡಿದ್ದರ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು ತಹಸಿಲ್ದಾರ್ ಅವರಿಗೆ ಪತ್ರ ಬರೆದು ಹಿಟಾಚಿ ಟ್ರ್ಯಾಕ್ಟರ್ ಗಳನ್ನು ಬಳಸಿ ಗುಡ್ಡದ ಮಣ್ಣನ್ನು ಅಕ್ರಮವಾಗಿ ಸಾಧಿಸಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ನಷ್ಟವಾಗುತ್ತಿದೆ ಎಂದು ಪತ್ರಬರೆದಿದ್ದರು. ಈಗ ಮತ್ತೆ ಅದೇ ಜಾಗದಲ್ಲಿ ಅಕ್ರಮಮಣ್ಣು ಸಾಗಾಣಿಕೆ ಹೆಚ್ಚಾಗಿದೆ.
ಅಕ್ರಮ ಮಣ್ಣು ಸಾಗಾಣಿಕೆ ವಿಷಯದಲ್ಲಿ ಹೆಚ್ಚಿನ ಪೊಲೀಸ್ ಗಸ್ತು ಗಳನ್ನು ಮಾಡಲು ರಾಜಸ್ವ ಇಲಾಖೆ ವರದಿ ನೀಡಿತ್ತು. ಆದರೆ ಈ ಗಸ್ತುಗಳು ನಾಪತ್ತೆಯಾದ ಪರಿಣಾಮ ಪ್ರಯೋಜನಕ್ಕೆ ಬಂದಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತಿದೆ. ತಹಶೀಲ್ದಾರ್ ಅವರು ಭೂ ಮತ್ತು ಗಣಿಗಾರಿಕೆ ಇಲಾಖೆಗೆ 20 ದಿನಗಳ ಹಿಂದೆ ಬರೆದ ಪತ್ರದಲ್ಲಿ ಇದು ಸಾಬೀತಾಗಿದೆ.
ತಹಶೀಲ್ದಾರ್ ಅವರು ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಪದೇ ಪದೇ ಅದೇ ಜಾಗದಲ್ಲಿ ಮಣ್ಣುತೆಗೆಯಲಾಗುತ್ತಿದೆ. ಅಂತಹವರನ್ನ ಪತ್ತೆಹಚ್ಚುವುದು ಗಣಿ ಮತ್ತು ಭೂವಿಜ್ಞಾನ ಮತ್ತು ಪೊಲೀಸ್ ಇಲಾಖೆಯ ಕೆಲಸವಾಗಿದೆ. ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ತುರ್ತಾಗಿ ಆಗಬೇಕಿರುವುದರಿಂದ ಹೆಚ್ಚಿನ ಕೆಲಸವಿರುತ್ತದೆ ಎಂದು ಪತ್ರ ಬರೆದಿದ್ದಾರೆ. ಒಟ್ಟಿನಲ್ಲಿ ಪತ್ರ ವ್ಯವಹಾರದಲ್ಲಿಯೇ ಇಲಾಖೆಗಳು ಮುಳುಗಿರುವುದರಿಂದ ಅಕ್ರಮ ಮಣ್ಣು ಸಾಗಾಣಿಕೆ ವಿರುದ್ಧ ಕ್ರಮಜರುಗುತ್ತಿಲ್ಲವೆಂಬುದು ಸ್ಷಷ್ಟವಾಗಿದೆ.
ಇಲ್ಲಿ ಹುಣಸೋಡು ಸ್ಪೋಟದಂತಹ ಯಾವುದೇ ಸ್ಪೋಟಗಳು ಬಳಕೆಯಾಗದೆ ಇರುವ ಕಾರಣ ಅನಾಹುತಗಳಿಗೆ ಅವಕಾಶವಿಲ್ಲ. ಅಪಘಾತ ಸಂಭವಿಸಬೇಕಷ್ಟೆ, ಹಾಗಾಗಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರು ಯಾವುದೇ ರಾಜಕೀಯ ಪಕ್ಷದ ಕೃಪಾಕಟಾಕ್ಷವಿಲ್ಲದೆ ನಡೆಯೋದು ಇಲ್ಲವೆಂಬುದು ಎಲ್ಲರಿಗೂ ತಿಳಿದ ವಿಷಯ. ಈ ಮೂರು ಇಲಾಖೆಗಳ ಅಧಿಕಾರಿಗಳು ರಾಜಕೀಯ ಕೃಪಾಪೋಷಿತರಿಂದಲೇ ಡ್ಯೂಟಿ ಹಾಕಿಸಿಕೊಳ್ಳುವುದರಿಂದ ಇಲಾಖೆಯ ಪತ್ರಗಳು ಕಸದಬುಟ್ಟಿಗೆಬೀಳುತ್ತದೆ ವಿನಃ ಯಾವುದೇ ಕ್ರಮ ಜರುಗುವುದಿಲ್ಲ ಎಂಬುದು ಸ್ಪಷ್ಟಗೊಳ್ಳುತ್ತದೆ.
ಯಾವ ಕಾನೂನು ಸಹ ಯಾವ ಅಕ್ರಮ ಮರಳು ಮತ್ತು ಮಣ್ಣು ಸಾಗಾಣಿಕೆಯಕೋರರಿಗೆ ಅನ್ವಯವಾಗದೆ ಇರುವುದು ಇಲ್ಲಿ ಸ್ಪಷ್ಟವಾಗಿದೆ. ಇಲಾಖೆಗಳು ಪತ್ರ ವ್ಯವಹಾರದಲ್ಲಿಯೇ ಮುಳುಗಿರುವುದರಿಂದ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದೆ. ಇದು ಮೇಲ್ನೋಟಕ್ಕೆ ಕಾಣುವ ಒಂದು ಉದಾಹರಣೆಗಳಿವು. ಉಳಿದವು ಇನ್ನೂ ಹೇಗೆ ಹೇಗೆ ಇರುತ್ತದೆ ಎಂಬುದನ್ನ ಓದುಗರಿಗೆ ಬಿಟ್ಟಿದ್ದು.
Illegal soil transportation and correspondence between three departments

