SUDDILIVE || SHIVAMOGGA
ಸಚಿವ ಪ್ರಿಯಾಂಕ್ ಖರ್ಗೆಗೆ ಉತ್ತರ ನೀಡುದ್ರಾ RSS ನ ಪ್ರಾಂಥ್ಯಕಾರ್ಯಕಾರಿಗಳು? Will the RSS regional workers respond to Minister Priyank Kharge?
ಸಂಘ ಶುರುವಾಗಿದ್ದು ವಿಜಯದಶಮಿಯ ದಿನ ಸಂಘ ಮತ್ತು ಸಂಘಟನೆ ಉದ್ದೇಶ ಒಂದೇಆಗಿದೇ ಇದು ಶಕ್ತಿಯ ಸಂದೇಶವನ್ನು ನೀಡುತ್ತದೆ ಎಂದು ಉತ್ತರ ಪ್ರಾಂಥ್ಯಕಾರ್ಯಕಾರಿ ಸದಸ್ಯ ಡಾ|| ರವೀಂದ್ರ ಹೇಳಿದರು
ಸಂಘದ ಹಿರಿಯರು ಎಂಟು ರೀತಿಯ ಕಾಯಕ್ರಮ ಮಾಡಲು ಆದೇಶ ನೀಡಿದ್ದಾರೆ ರಾಜ್ಯದ ಎಲ್ಲಾ ತಾಲ್ಲೂಕಿನಲ್ಲೂ ಫಥ ಸಂಚಲನ ನಡೆಯಲಿದೆ, ಇದುವರೆಗೂ ರಾಜ್ಯದಲ್ಲಿ 250 ಫಥ ಸಂಚಲನ ನಡೆದಿದೆ ಈ ದೇಶದಲ್ಲಿ ಸಹ ಸಂಚಲನ ನಡೆಲಿದೆ. ಸಂಚಲನ ಪ್ರದಶನವಲ್ಲ ದರ್ಶನವದು, ದಿನ ನಿತ್ಯ ಹೊಸಬರು ಸ್ವಯಂಸೇವಕರಾಗಿ ¸ಸಂಘಕ್ಕೆ ಸೇರುತ್ತಿದ್ದಾರೆ
ಪಟ್ಟಣದಲ್ಲಿ ಆರ್‌ಎಸ್‌ಎಸ್ ಶತಮಾನೋತ್ಸವ ಪ್ರಯುಕ್ತ ಭವ್ಯ ಪಥಸಂಚಲನ ಹಾಗೂ ಸಾರ್ವಜನಿಕ ಸಭೆ ನಡೆಯಿತು. ಪ್ರತಿ ದಿನ ಸಂಘದ ವಿಚಾರದಲ್ಲಿ ನಡೆಯುತ್ತಿರುವ ವಿದ್ಯಮಾನಕ್ಕೆ ಯಾಕೆ ಉತ್ತರ ಕೊಡುತ್ತಿಲ್ಲ ಎಂದು ಕೆಲವರು ಅಂದುಕೊಂಡರು ನಾವು ಉತ್ತರ ಕೊಡುತ್ತೇವೆ. ಆದರೆ ಸೈಲ್ ಬೇರೆ ಸಂಘಕ್ಕೆ ಶತೃಗಳಿದ್ದಾರೆ ಆದರೆ ನಮಗೆ ಶತೃಗಳಿಲ್ಲ ನಾವು ಪ್ರಚಾರ ಮಾಧ್ಯಮಕ್ಕಿಂತ ಮನೆ ಮನೆ ಪ್ರಚಾರಕ್ಕೆ ಹೆಚ್ಚು ಸಂಪÀðಕ ಹೊಂದಿದ್ದೇವೆ ವಿಜಯನಗರ ಅರಸರ ಕಾಲದಲ್ಲಿ ವಿಜಯದಶಮಿ ಪ್ರಾರಂಭವಾಯಿತು ನಮ್ಮ ಎಲ್ಲಾ ದೇವರ ಕೈಯಲ್ಲಿ ಆಯುಧಗಳಿವೆ ಕಾರಣ ಶಕ್ತಿಬೇಕು ಆಯುಧ ಪೂಜಿಸಲು ಎಂದರು
ಇತ್ತೀಚಿಗೆ “ಸಚಿವ ಪ್ರಿಯಾಂಕ ಖರ್ಗೆಯವರು ದಂಡದ ಬಗ್ಗೆ ಮಾಡಿದ ಹೇಳಿಕೆಗೆ ಸ್ಪಷ್ಟನೆ ನೀಡಬೇಕಾಗಿದೆ. ಭಾರತದ ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ ದಂಡವನ್ನು ಶಸ್ತ್ರವಾಗಿ ಪರಿಗಣಿಸಲಾಗುವುದಿಲ್ಲ. ಪೊಲೀಸ್ ಹಾಗೂ ಸಶಸ್ತ್ರ ಪಡೆಯವರು ಕರ್ತವ್ಯ ನಿರ್ವಹಣೆಯಲ್ಲಿ ಬಳಸುವಂತೆ ಸ್ವಯಂಸೇವಕರು ಸಹ ಸಂಸ್ಕಾರದ, ಶಿಸ್ತು ಮತ್ತು ಆತ್ಮರಕ್ಷಣೆಯ ಪ್ರತೀಕವಾಗಿ ಬಳಸುತ್ತಾರೆ,” ಎಂದು ಹೇಳಿದರು.
ಆರ್‌ಎಸ್‌ಎಸ್ ರಾಜಕೀಯ ಸಂಘಟನೆ ಅಲ್ಲ. ಇದು ಸಾಂಸ್ಕೃತಿಕ, ರಾಷ್ಟ್ರಭಕ್ತಿಯ ಮೌಲ್ಯಗಳನ್ನು ಬೆಳೆಸುವ ಸಂಸ್ಥೆ. ಮೂರು ಬಾರಿ ನಿಷೇಧಿಸಿದರೂ ಜನಬೆಂಬಲದಿಂದ ಸಂಘ ಮತ್ತಷ್ಟು ಬಲವಾಗಿ ನಿಂತಿದೆ. ಯಾವ ಪಕ್ಷವೇ ಆಡಳಿತದಲ್ಲಿದ್ದರೂ ಅದು ನಮ್ಮದೇ ಸರ್ಕಾರ. ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೂ ಸಂಘದ ಪ್ರಚಾರಕರನ್ನು ನೀಡಲು ನಾವು ಸಿದ್ಧ,” ಎಂದು ಹೇಳಿದರು.
ಭಾರತೀಯರ ಗುರುತಿನ ಬಗ್ಗೆ ಮಾತನಾಡಿದ ಅವರು, “ಭೌಗೋಳಿಕವಾಗಿ ಭಾರತೀಯರೆಲ್ಲರೂ ಹಿಂದುಗಳು. ಪೂಜಾ ವಿಧಾನಗಳು ಬೇರೆಬೇರೆ ಇರಬಹುದು, ಆದರೆ ಸಂಸ್ಕೃತಿ, ಮಣ್ಣು ಮತ್ತು ತತ್ವ ಒಂದೇ. ಸಚಿವ ಎಂ.ಬಿ. ಪಾಟೀಲ್ ಅವರೂ ಇದೇ ವಿಚಾರವನ್ನು ಒಪ್ಪಿಕೊಂಡಿದ್ದಾರೆ,” ಎಂದು ಉದಾಹರಿಸಿದರು.
ಅಯೋಧ್ಯ ದಸರೆಯ ವೈಶಿಷ್ಟ್ಯವನ್ನು ಉಲ್ಲೇಖಿಸಿ, “ಈ ಬಾರಿ ಇಂಡೋನೇಷಿಯಾದ ಮುಸ್ಲಿಂ ಕಲಾವಿದರನ್ನು ಆಹ್ವಾನಿಸಿ ಸೀತಾಕಲ್ಯಾಣ ನಾಟಕ ಪ್ರದರ್ಶಿಸಲಾಯಿತು. ಇದು ಹಿಂದೂ ಸಮಾಜಕ್ಕಿರುವ ಜಾಗತಿಕ ಗೌರವಕ್ಕೆ ಉದಾಹರಣೆ,” ಎಂದು ಹೇಳಿದ ಅವರು.“ಜಾತ್ಯಾತೀತ ಭೇದಗಳು ನೀಗಿದಾಗ ಮಾತ್ರ ನಿಜವಾದ ಹಿಂದುತ್ವ ಸಾಧನೆ. ಸ್ವದೇಶಿ ಉತ್ಪನ್ನಗಳ ಬಳಕೆ, ಪ್ರಕೃತಿ ಸಂರಕ್ಷಣೆ, ಹಾಗೂ ನಾಗರಿಕ ನಿಯಮ ಪಾಲನೆ ಪ್ರತಿಯೊಬ್ಬರ ಜವಾಬ್ದಾರಿ,” ಎಂದು ಕರೆ ನೀಡಿದರು.
ಪಥಸಂಚಲನದಲ್ಲಿ ಎರಡು ಘಟಕಗಳಾಗಿ ಸಾವಿರಾರು ಗಣವೇಶಧಾರಿ ಸ್ವಯಂಸೇವಕರು ಪಾಲ್ಗೊಂಡರು. ಶಿಕಾರಿಪುರ ಶಾಸಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರಂಭದಿಂದ ಅಂತ್ಯವರೆಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದರು. ಮಾಜಿ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪದ್ಮನಾಭ ಭಟ್, ಕೆ.ಎಸ್. ಗುರುಮೂರ್ತಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್, ಮೇಘರಾಜ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿತ್ತು. ಪಟ್ಟಣದ ಮುಖ್ಯಬೀದಿಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ, ಸಂಚಾರ ನಿಯಂತ್ರಣ ಮತ್ತು ನಿಗಾವ್ಯವಸ್ಥೆ ಕೈಗೊಳ್ಳಲಾಗಿತ್ತು. ಸಾರ್ವಜನಿಕರ ಸಹಕಾರದಿಂದ ಕಾರ್ಯಕ್ರಮ ಶಾಂತಿಯುತವಾಗಿ ನೆರವೇರಿತು.
Will the RSS regional workers respond to Minister Priyank Kharge?
