ಘನತ್ಯಾಜ್ಯ ನಿರ್ವಹಣೆ ಸಂಬಂಧ ಕಾರ್ಯಗಾರ-Workshop on Solid Waste Management

SUDDILIVE || SHIVAMOGGA

ಘನತ್ಯಾಜ್ಯ ನಿರ್ವಹಣೆ ಸಂಬಂಧ ಕಾರ್ಯಗಾರ-Workshop on Solid Waste Management     

Workshop, management

ರಾಜ್ಯ  ನಗರಾಭಿವೃದ್ದಿ ಇಲಾಖೆ ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಸ್ವಚ್ಚ ಭಾರತ್  ಮಿಷನ್೨.೦ ಅಡಿಯಲ್ಲಿ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿಗಳಿಗೆ ಘನತ್ಯಾಜ್ಯ ನಿರ್ವಹಣೆ ಸಂಬಂಧ ಇಲ್ಲಿನ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಒಂದು ದಿನದ ಕಾರ್ಯಾಗಾರ ನಡೆಸಲಾಯಿತು.

ಈ ಸಂದರ್ಭದಲ್ಲಿ  ಮಹಾನಗರಪಾಲಿಕೆ ಒಳಚರಂಡಿ ವಿಭಾಗದ  ಮುಖ್ಯಸ್ಥರೂ, ಪಾಲಿಕೆ ಪೌರಸೇವಾ  ನೌಕರರ ಸಂಘದ ಅಧ್ಯಕ್ಷರೂ ಆದ ಎನ್. ಗೋವಿಂದ ಅವರನ್ನು ಸನ್ಮಾನಿಸಲಾಯಿತು.

ಮಹಾನಗರ ಪಾಲಿಕೆ ಆಯುಕ್ತ ರಾದ ಕೆ. ಮಾಯಣ್ಣಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಡಿಯುಡಿಸಿ ಯೋಜನಾ ನಿರ್ದೇಶಕರಾದ  ರಂಗಸ್ವಾಮಿ. ಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಡಿ ಶಿರೋಳ್ಕರ್, ಪಾಲಿಕೆ ಸಹಾಯಕ ಅಭಿಯಂತರ(ಪರಿಸರ) ಶ್ರೀಮತಿ ತ್ರಿವೇಣಿ ಬಿ.ಜಿ ,  ಪಾಲಿಕೆ ಪೌರಸೇವಾ ನೌಕರರ ಸಂಘದ ಪದಾಧಿಕಾರಿಗಳಾದ ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

Workshop on Solid Waste Management

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close