ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ-ಚೆನ್ನಿ ಆಕ್ರೋಶ-Law and order situation in Shivamogga has deteriorated - Chenni expresses anger

 SUDDILIVE || SHIVAMOGGA

ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ-ಚೆನ್ನಿ ಆಕ್ರೋಶ-Law and order situation in Shivamogga has deteriorated - Chenni expresses anger

Law, order


ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಇಂದು ಶಾಸಕರು ಬಂದು ದೂರುಕೊಡಿಸುವಂತಾಗಿದೆ.  ಆರ್ ಎಂ ಎಲ್ ನಗರದಲ್ಲಿ ನಡೆದ ಘಟನೆ ಕುರಿತು ಶಾಸಕ ಚೆನ್ನ ಬಸಪ್ಪ ನವರೆ ದೂರುದಾರರನ್ನ ಕರೆದುಕೊಂಡು ಬಂದು ದೂರು ನೀಡಿದ್ದಾರೆ.

ದೂರು ಕೊಡುವ ವೇಳೆ ಸರಿಸುಮಾರು ಒಂದು ಗಂಟೆಗೂ ಅಧಿಕ ದೊಡ್ಡಪೇಟೆ ಪಿಐ ರವಿಸಂಗನಗೌಡ ಮತ್ತು ಡಿವೈಎಸ್ಪಿ ಬಾಬು ಅಂಜನಪ್ಪನವರೊಂದಿಗೆ ಮಾತನಾಡಿ, ಆರ್ ಎಂ ಎಲ್ ನಗರ, ಮಾರ್ನಮಿಬೈಲಿನಲ್ಲಿ ದುರುಳರ ಅಟ್ಟಹಾಸ ಹೆಹೆಚ್ಚಾಗಿದೆ. ಇದನ್ನ ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಶನಿವಾರ ನಡೆದ ಘಟನೆ ಒಂದೇ ಅಲ್ಲ, ಅಲ್ಲಿನ ಅಂಗಡಿಗಳಲ್ಲಿ, ಅಲ್ಲಿ ಮಹಿಳೆಯರು ದೂರು ನೀಡಲು ಬಂದರೆ ಊರು ಬಿಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.‌


ಘಟನೆ ಏನು?

ಶನಿವಾರ ರಾತ್ರಿ 11-15 ನಿಮಿಷಕ್ಕೆ ಹರೀಶ್ ಎಂಬುವರು ತಮ್ಮ ಸಂಬಂಧಿಯನ್ನ ಬಸ್ ನಿಲ್ದಾಣಕ್ಕೆ ಬಿಟ್ಟು ಆರ್ ಎಂಎಲ್ ನಗರದಲ್ಲಿರುವ ಮನೆಗೆ ನಡೆದುಕೊಙಡು ಹೋಗುವಾಗ ಅಲ್ಲಿದ್ದ ಗೂಡಂಗಡಿಯ ಬಳಿಯಿದ್ದ ನಾಲ್ಕಾರು ಜನ ಉರ್ದುವಿನಲ್ಲಿ ನಿಲ್ಲಲು ತಿಳಿಸಿದ್ದಾರೆ. ನಿಂತಾಗ ಜೇಬಿನಲ್ಲಿರುವುದನ್ನ ತೆಗೆಯಲು ತಿಳಿದ್ದಾರೆ. 

ಜೇಬಿನಲ್ಲಿ ಏನು ಇಲ್ಲ ಎಂದು ಹರೀಶ್ ಹೇಳುತ್ತಿದ್ದಂತೆ ಹಿಂದೂನ ಅಥವಾ ಮುಸ್ಲೀ ಜನಾಂಗದವನ ಎಂದು ಕೇಳಿದ್ದಾರೆ ಹಿಂದೂ ಎನ್ನುತ್ತಿದ್ದಂತೆ ಆತನ ಹಿಂಬದಿಯಿಂದ ಹಲ್ಲೆ ನಡೆಸಲಾಗಿದೆ. ಘಟನೆ ನಡೆದ 100 ಮೀಟರ್ ದೂರದಲ್ಲಿ ಮನೆಯಿದ್ದಿದ್ದರಿಂದ ಹರೀಶ್ ತಪ್ಪಿಸಿಕೊಂಡು ಓಡಲು ಯತ್ನಿಸಿದರ ಪರಿಣಾಮ ಆತನ ಮೇಲೆ ಹಲ್ಲೆ ನಡೆದಿದೆ. ಇದು ಸಿಸಿ ಟಿವಿ ಫೂಟೇಜ್ ನಲ್ಲಿ ಪತ್ತೆಯಾಗಿದೆ. 

ಇದರ ಜೊತೆಗೆ ಅಲ್ಲಿರುವ ಎರಡು ಅಂಗಡಿಗಳಿಗೆ ದುರುಳರ ಅಟ್ಟಹಾಸ ಹೆಚ್ಚಾಗಿದ್ದು ಅವರೂ ಸಹ ದೂರು ನೀಡಲು ಬಂದಿದ್ದಾರೆ. ಅಲ್ಲಿರುವ ಮತ್ತೊರ್ವ ಮಹಿಳೆಯು ರಾತ್ರಿ 9 ಗಂಟೆಯ ನಂತರ ಓಡಾಡಿದ ರೀತಿಯಲ್ಲಿದೆ ಎಂದು ದೂರಿದ್ದಾರೆ. ಇವರನ್ನೆಲ್ಲಾ ಕರೆದುಕೊಂಡು ಬಂದ ಶಾಸಕರು ನಿಮಗೆ ರಕ್ಷಣೆ ಕೊಡಲು ಆಗದಿದ್ದರೆ ನಮಗೆ ನಾವೇ ರಕ್ಷಣೆ ಪಡೆದುಕೊಳ್ಳಲು ಬರುತ್ತದೆ ಎಂದು ಗರಂ ಆಗಿದ್ದಾರೆ. 

ಶಿವಮೊಗ್ಗದಲ್ಲಿ ಒಬ್ಬ ಶಾಸಕ ಠಾಣೆಗೆ  ದೂರುಕೊಡಿಸಲು ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದರೆ ಕಾನೂನು ಸುವವ್ಯಸ್ಥೆ ಹದಗೆಟ್ಟಿದೆ. ನಾಗರೀಕ ಸಮಾಜ ಹೆದರಿಕೊಂಡು ಬದುಕುತ್ತಿದೆ. ಇಲಾಖೆ ಕೈಕಟ್ಟಿಕುಳಿತಿದ್ದೀರಿ ಎಂದು ದೂರಿದರು. 

ನಂತರ ಮಾಧ್ಯಮಗಳಿಗೆ ಮಾತನಾಡಿದ ಶಾಸಕ ಚೆನ್ನಬಸಪ್ಪ, ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಸತ್ತೋಗಿದೆ. ಹೊಡೆತ ತಿಂದ ಹುಡುಗ ದೂರುಕೊಡಲು ಹೆದರುವ ಸ್ಥಿತಿಯಿದೆ. ರಾತ್ರಿ 9 ಗಂಟೆಯಲ್ಲಿ ಮನೆಯಿಂದ ಹೊರಗಡೆ ಬರೊಲು ಸಾಧ್ಯವಿಲ್ಲ ಇಲಾಖೆಗೆ ಬದುಕಿದೆಯೋಸತ್ತಿದಿಯೋ ಎಂದು ಕೇಳಲು ಬಂದಿರುವೆ ಎಂದು ಗರಂ ಆದರು. 

ಹಿಂದೂಗಳ ಮನೆಯೇ ಟಾರ್ಗೆಟ್

ಸಣ್ಣ ಸಣ್ಣ ಅಂಗಡಿ ಇಟ್ಟುಕೊಂಡವರಿಗೆ ಭಯವಿದೆ. ಎಲ್ಲ ಸಂಗತಿಗಳನ್ನ ಪಿಐ ಎದುರು ಹೇಳಿಕೊಂಡಿದ್ದಾರೆ. ನಾಗರೀಕರಿಗೆ ರಕ್ಷಣೆ ಇಲ್ಲ. ಕಂಪ್ಲೇಂಟ್ ಕೊಟ್ಟು ಹೋದವರನ್ನೇ ಅಲ್ಲಿನ ದುರುಳರು ಟಾರ್ಗೆಟ್ ಮಾಡುತ್ತಾರೆ. ಇಲ್ಲಿ ಇಲಾಖೆಗೆ ಸಿವಿಲ್ ಡಿಸ್ಪೂಟ್  ಬಗ್ಗೆ ಆಸಕ್ತಿಯಿದೆ. ಬಸ್ ನಿಲ್ದಾಣದ ಎದುರೇ ಪೊಲೀಸರಿಗೆ ಹಲ್ಲೆ ನಡೆದಿದೆ.

ಅನೇಕ ಹಿಂದೂಗಳು ಮನೆ ಖಾಲಿ ಮಾಡಿದ್ದಾರೆ. ದೂರು ಕೊಟ್ಟುಬಂದರೆ ಅವರನ್ನೇ ಟಾರ್ಗೆಟ್ ಮಾಡಲಾಗುತ್ತದೆ. ಶಿವಮೊಗ್ಗದಲ್ಲಿ ಲಾ ಎಂಡ್ ಅರ್ಡರ್ ಸತ್ತಿದೆ. ಗೃಹಸಚಿವ ಡಾ ಪರಮೇಶ್ವರ್ ಗೆ ಹಲವು ಬಾರಿಶಿವಮೊಗ್ಗದ ಪರಿಸ್ಥಿತಿಹೇಳಿದ್ದೆ. ಬಂದು ಪರಿಶೀಲಿಸಿ ಎಂದಿದ್ದೆ. ಬರಲಿಲ್ಲ ಹೊಸಮನೆ, ಬಾಪೂಜಿ ನಗರ ಆರ್ ಎಂ ಎಲ್ ನಗರದಲ್ಲಿ ನಾಗರೀಕ ದೂರು ನೀಡಲು ಭಯವಿದೆ. 

ದೂರು ಕೊಟ್ಟರೆ ಮರುದಿನ ಅವರ ಮನೆ ಗಾಜು, ಪಾಟುಗಳು ಪುಡಿಪುಡಿ

ಶಾಸಕರೇ ಪೊಲೀಸ್ ಠಾಣೆಗೆ ಬಂದು ದೂರುನೀಡುವ ಸ್ಥಿತಿಯಿದೆ. ಕಂಪ್ಲೇಂಟ್ ಕೊಟ್ಟು ಬಂದ ಮರುದಿನವೇ ಆ ವ್ಯಕ್ತಿಯ ಮನೆಯ ಗಾಜುಗಳು ಪಾಟುಗಳು ಪುಡಿಯಾಗಲಿದೆ. ಸುಳ್ಳು ಹೇಳಿ ರಾಜಕಾರಣ ಮಾಡಲು ಸಾಧ್ಯವಿಲ್ಲ. ಗೃಹ ಇಲಾಖೆ ಸತ್ತಿದೆಯೋ ಬದುಕಿದೆಯೊ ಗೊತ್ತಿಲ್ಲ. ಮಾಹಿತಿ ಬಂದು ಎರಡು ದಿನವಾದರೂ ಆಕ್ಷನ್ ಆಗಿಲ್ಲ. ಇಲ್ಲಿನ ಪೊಲೀಸರು ಕಾನೂನು ಪುಸ್ತಕಗಳ ಕಥೆ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಅಚ್ಚರಿ ಹೇಳಿಕೆ ನೀಡಿದ ಶಾಸಕರು

ಇಲಾಖೆಯ ನಿರ್ಲಕ್ಷ ತೋರಿದೆ ಯಾವುದು ಮಾಡೇಕೋ ಅದನ್ನ ಬಿಟ್ಟು ಉಳಿದ ಕೆಲಸ ಮಾಡುತ್ತಿದ್ದಾರೆ. ರಕ್ಷಣೆ ಬಗ್ಗೆ ತಲೆಕೆಡೆಸಿಕೊಳ್ಳದ ಇಲಾಖೆ ಸಿವಿಲ್ ಡಿಸ್ಪೂಟ್ ಬಗ್ಗೆ ಆಸಕ್ತಿ ತೋರುತ್ತದೆ. ಗಾಂಜಾ ಡ್ರಗ್ಸ್ ತಾಂಡವಾಡುತ್ತಿದೆ. ಕೇಳಿದರೆ ಹಿಡಿದಿದ್ದೇವೆ ಎನ್ನುತ್ತಾರೆ. ಪ್ರಕರಣ ಮಾತ್ರ ಕಡಿಮೆಯಾಗಿಲ್ಲ. ಗೃಹಸಚಿವರು ಹೋಗ ಬೇಕಾದರೆ ಶಿವಮೊಗ್ಗಕ್ಕೆ ಒಳ್ಳೆಯ ಕೆಲಸ ಮಾಡಲಿ ಎಂದು ವ್ಯಂಗ್ಯವಾಡುವ ಮೂಲಕ ಅವರ ನುರ್ಗಮನದ ಬಗ್ಗೆ ಅಚ್ಚರಿಮೂಡಿಸಿದರು. 

Law and order situation in Shivamogga has deteriorated - Chenni expresses anger

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close