ಕುವೆಂಪು ವಿವಿಯ ನಗರ ಕಚೇರಿ ಎದುರು ಪ್ರತಿಭಟನೆ- Protest in front of Kuvempu University's city office

 SUDDILIVE || SHIVAMOGGA

ಕುವೆಂಪು ವಿವಿಯ ನಗರ ಕಚೇರಿ ಎದುರು ಪ್ರತಿಭಟನೆ- Protest in front of Kuvempu University's city office   

Kuvempu, university

ಕುವೆಂಪು ವಿವಿಯ ಡಿಜಿಟಲ್ ಮೌಲ್ಯಮಾಪನವನ್ನು ಬೇಜವಾಬ್ದಾರಿತನದಿಂದ ನಡೆಸಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ NSUI   ಇಂದು ನಗರದ ಎಂಆರ್ ಎಸ್ ಬಳಿಯಿರುವ ಕುವೆಂಪು ವಿವಿಯ ನಗರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. 

ಇತ್ತೀಚೆಗೆ ನಡೆದ ಕುವೆಂಪು ವಿಶ್ವವಿದ್ಯಾಲಯದ  ಪರೀಕ್ಷೆಯ ಮೌಲ್ಯಮಾಪನವನ್ನು ಡಿಜಿಟಲ್ ರೂಪದಲ್ಲಿ ನಡೆಸಿದ್ದು, ಫಲಿತಾಂಶದಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ವಿವಿಯ ಆಡಳಿತ ಡಿಜಿಟಲ್ ಮೌಲ್ಯಮಾಪನಕ್ಕೆ ಸಾಕಷ್ಟು ತಯಾರಿ ನಡೆಸದೇ ಇರುವುದರಿಂದ ಬೇಕಾಬಿಟ್ಟಿ ಫಲಿತಾಂಶಗಳು ಬಂದಿದ್ದು, ವಿವಿಯ ನಿರ್ಲಕ್ಷ ಹಾಗೂ ಬೇಜವಾಬ್ದಾರಿ ತನವನ್ನು ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ತೀವ್ರವಾಗಿ ಖಂಡಿಸಿದೆ. 

ಅದಾಗ್ಯೂ ದಿನಾಂಕ 04/11/25  ದಿನಾಂಕದಂದು ವಿಶ್ವ ವಿದ್ಯಾಲಯದಲ್ಲಿ ಕುಲಪತಿಗಳಿಗೆ ಹಾಗೂ ಕುಲಸಚಿವರಿಗೆ ಪರೀಕ್ಷಾಂಗ ಇವರಿಗೆ ಮನವಿಯನ್ನು ನೀಡಿದಾಗ 14/11/25 ರೊಳಗೆ ಸರಿಪಡಿಸುವ ಭರವಸೆಯನ್ನು ನೀಡಿ ಯಾತಾ ಸ್ಥಿತಿ ಮುಂದುವರಿಸಿರುವದನ್ನು ಜಿಲ್ಲಾ N S U I ಖಂಡಿಸಿತ್ತು. 

ಮ್ಯಾನ್ಯುಯಲ್ ಮೌಲ್ಯಮಾಪನದಿಂದ ನಡೆಯುತ್ತಿದ್ದ ಅವ್ಯವಹಾರ ತಡೆಯುವ ನೆಪದಲ್ಲಿ ಕುವೆಂಪು ವಿವಿ ಡಿಜಿಟಲ್ ಮೌಲ್ಯಮಾಪನದ ಮೊರೆ ಹೋಗಿದೆ. ಆದರೆ, ಈ ಮೌಲ್ಯಮಾಪನದಿಂದ ಪ್ರತಿ ಕಾಲೇಜುಗಳಲ್ಲಿಯೂ ಶೇ. 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಮರುಮೌಲ್ಯಮಾಪನ ಮಾಡಿದಾಗ ಕೇವಲ 0 5 6 ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿಯನ್ನ ಉತ್ತೀರ್ಣಗೊಳಿಸಲಾಗುತ್ತಿದೆ.

ಈ ಎಲ್ಲಾ ಬೆಳವಣಿಗೆಗಳು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಪರೀಕ್ಷಾ ಶುಲ್ಕ, ಮರುಮೌಲ್ಯಮಾಪನ ಶುಲ್ಕ ಎಂದು ವಿದ್ಯಾರ್ಥಿಗಳಿಂದ ವಸೂಲಿ ಮಾಡುತ್ತಿರುವ ವಿಶ್ವವಿದ್ಯಾಲಯ, ವಿದ್ಯಾರ್ಥಿಗಳ ಫಲಿತಾಂಶದ ಜೊತೆ ಆಟವಾಡುತ್ತಾ ಅವರನ್ನು ಅತಂಕಕ್ಕೆ ದೂಡುತ್ತಿದೆ.

ಕೂಡಲೇ ವಿವಿಯ ಕುಲಪತಿಗಳು ಈ ಬಗ್ಗೆ ಗಮನ ಹರಿಸಬೇಕು. ಡಿಜಿಟಲ್ ಮೌಲ್ಯಮಾಪನದಲ್ಲಿ ಆಗಿರುವ ಗೊಂದಲಗಳನ್ನು ಬಗೆಹರಿಸಬೇಕು. ವ್ಯವಸ್ಥಿತ ಪೂರ್ವಸಿದ್ಧತೆಯಿಲ್ಲದೇ ಡಿಜಿಟಲ್ ಮೌಲ್ಯಮಾಪನ ನಡೆಸಲು ಕಾರಣರಾದವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಯಾವುದೇ ಶುಲ್ಕ ಪಡೆಯದೇ ಎಲ್ಲಾ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮರುಮೌಲ್ಯಮಾಪನ ಮಾಡಬೇಕು. ಇಲ್ಲವಾದಲ್ಲಿ ಎನ್.ಎಸ್.ಯು.ಐ. ವತಿಯಿಂದ ವಿವಿ ಬಂದ್‌ ನೆಡೆಸಿ ತೀವ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಈ ಮೂಲಕ ತಿಳಿಸುತ್ತಿದ್ದೇವೆ.

 ಈ ಸಂದರ್ಭದಲ್ಲಿ NSUI ಜಿಲ್ಲಾಧ್ಯಕ್ಷ ವಿಜಯ ಕಾರ್ಯಧ್ಯಕ್ಷ ರವಿಕಟಿಕೆರೆ, ಚಂದ್ರಾಜಿ ರಾವ್ ಆದಿತ್ಯ, ಸುಭಾನ್, ಫರಾಜ್ ಅಂಜನ್, ಲೋಹಿತ್, ವರುಣ್, ಫರಜ್, ಸಿಂಚನ, ದೀಕ್ಷಾ, ಸ್ಪೂರ್ತಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Protest in front of Kuvempu University's city office

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close