ಸಿಮ್ಸ್ ಕಾಲೇಜಿನ ಎಫ್ ಡಿ ಎ ಮನೆಯ ಮೇಲೆ ಲೋಕಾಯುಕ್ತ ದಾಳಿ-Lokayukta raids FDA house at SIMS College

 SUDDILIVE || SHIVAMOGGA

ಸಿಮ್ಸ್ ಕಾಲೇಜಿನ ಎಫ್ ಡಿ ಎ ಮನೆಯ ಮೇಲೆ ಲೋಕಾಯುಕ್ತ ದಾಳಿ-Lokayukta raids FDA house at SIMS College

Lokayukta, raid


ಶಿವಮೊಗ್ಗದ ಸಿಮ್ಸ್ ಕಾಲೇಜಿನ ನಿರ್ದೇಶಕರ ಪಿಎ (ಎಫ್ ಡಿಎ) ಲಕ್ಷ್ಮೀಪತಿ ಮನೆಯ ಮೇಲೆ ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಮೇರೆಗೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ದಾಳಿ ನಡೆದಿದೆ.  

ದೂರು ಆಧಾರದ ಮೇರೆಗೆ ನಗರದ ನಾಲ್ಕು ಕಡೆ ದಾಳಿ ನಡೆದಿದೆ. ಲಕ್ಚ್ಮೀಪತಿಗಳ ಜೆಹೆಚ್ ಪಟೇಲ್ ಮನೆಯ ಮೇಲೆ, ಸಿಮ್ಸ್ ಕಾಲೇಜಿನ ಕಚೇರಿ, ಜಗಳೂರಿನ ಮನೆಯ ಮೇಲು ದಾಳಿ ನಡೆದಿದೆ. ಸಿಮ್ಸ್ ಕಾಲೇಜಿನ ಡೀನ್  ಡಾ.ವಿರೂಪಾಕ್ಷಪ್ಪ ಅವರ   ಮನೆಗಳ ಮೇಲೂ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಮೆಗ್ಗಾನ್ ಕ್ವಾಟ್ರಸ್ ನಲ್ಲಿರುವ ನಿರ್ದೇಶಕರ ಮನೆ ಮತ್ತು ಸಾಗರ ರಸ್ತೆಯಲ್ಲಿರುವ ಗೋಲ್ಡನ್ ಸಿಟಿಯ ಮನೆಯ ಮೇಲೂ ದಾಳಿ ನಡೆದಿದೆ.

ಲಕ್ಷ್ಮೀಪತಿಯವರ ಮೂರು ತಿಂಗಳ ಹಿಂದೆ ಜೆಹೆಚ್ ಬಡಾವಣೆಯ  ಎಫ್ ಬ್ಲಾಕ್ 159/a ಮಂಜುನಾಥ ಸ್ವಾಮಿ ನಿಲಯವನ್ನ ಗೃಹಪ್ರವೇಶಿಸಿದ್ದರು. ಅಲ್ಲೂ ಸಹ ದಾಳಿ ನಡೆದಿದೆ. ಲೋಕಾಯುಕ್ತ ರಾಜ್ಯದಲ್ಲಿ 51 ಕಡೆ ದಾಳಿ ನಡೆದಿದೆ. 



ಶಿವಮೊಗ್ಗದಲ್ಲಿ ನಾಲ್ಕು ತಂಡಗಳೊಂದಿಗೆ ಬಂದಿರುವ ಲೋಕಾಯುಕ್ತರು ಲಕ್ಷ್ಮೀಪತಿಗಳ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಹೊರ ಜಿಲ್ಲೆಯ ಹುಬ್ಬಳ್ಳಿಯ ಬಂದಿದ್ದ ಲಕ್ಷ್ಮೀಪತಿ ಲ್ಯಾಬ್ ಟೆಕ್ಷಿನ್ ಆಗಿದ್ದರು. ನಂತರ ಎಫ್ ಡಿಎ ಆಗಿ ಕಾಲೇಜಿಗೆ 12 ವರ್ಷಗಳ ಹಿಂದೆ ದಾಖಲಾಗಿದ್ದರು. 

Lokayukta raids FDA house at SIMS College

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close