ತೀರ್ಥಹಳ್ಳಿ : ಭೀಕರ ಅಪಘಾತ ಇಬ್ಬರು ಸಾವು-Tirthahalli: Two dead in horrific accident

SUDDILIVE || SHIVAMOGGA

ತೀರ್ಥಹಳ್ಳಿ : ಭೀಕರ ಅಪಘಾತ ಇಬ್ಬರು ಸಾವು-Tirthahalli: Two dead in horrific accident     

Thirthahalli, accident

Thirthahalli, accident


ಗ್ಯಾಸ್ ಲಾರಿ ಹಾಗೂ ಬೈಕ್ ನಡುವೆ ತಡ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಬಾಳೆಬೈಲು ಸಮೀಪ ನಡೆದಿದೆ.

ಪಟ್ಟಣದ ಬಾಳೆಬೈಲಿನ ಆರ್ ಎಂ ಸಿ ಯಾರ್ಡ್ ಬಳಿ ತಡ ರಾತ್ರಿ 1:30 ರ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಬೈಕ್ ನಲ್ಲಿದ್ದ ಇಬ್ಬರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ.  ಸುದೀಪ್ ( 25) ಮತ್ತು ಸುಧೀಶ್ (30) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿದ್ದೆ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ. ಇಬ್ಬರು ಇಂದಿರಾನಗರ ಹಾಗೂ ಯಡೆಹಳ್ಳಿಕೆರೆಯವರು ಎಂದು ತಿಳಿದುಬಂದಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Tirthahalli: Two dead in horrific accident

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close