SUDDILIVE || SHIVAMOGGA
ಕಳೆದುಕೊಂಡ ಮಾಂಗಲ್ಯ ಸರ ನೈಜ ಮಾಲೀಕರ ಕೈಗೆ ವಾಪಾಸ್-Lost Mangalya Sara returned to its rightful owner
ಒಂದಿಷ್ಟು ಪುಣ್ಯದ ಕೆಲಸಗಳು ಶಿವಮೊಗ್ಗದಲ್ಲಿ ನಡೆದಿದೆ. ನ.04 ರಂದು ತುಂಗ ನಗರ ಠಾಣ ವ್ಯಾಪ್ತಿಯಲ್ಲಿ ಇಡ್ಲಿ ತಿನ್ನಲು ಬಂದವರು ಒಂದು ಲಕ್ಷ ರೂ. ಹಣ ಕಳೆದುಕೊಂಡು ಹೋಗಿದ್ದು, ಇಡ್ಲಿ ಅಂಗಡಿ ಮಾಲೀಕನ ಪ್ರಾಮಾಣಿಕತೆಯಿಂದಾಗಿ ಒಂದು ಲಕ್ಷ ರೂ. ಹಣ ವಾಪಾಸ್ ನೈಜ ಮಾಲೀಕರ ಕೈಗೆ ಸೇರಿದೆ.
ಅದೇ ರೀತಿ ನ.11 ರಂದು ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಕಿನಗರದ ನಿವಾಸಿಯಾದ ಶ್ರೀಮತಿ ಶ್ವೇತಾರವರು ತಮ್ಮ ಮಾಂಗಲ್ಯ ಸರವನ್ನ ಅಚಾನಕ್ಕಾಗಿ ಕೆನರಾ ಬ್ಯಾಂಕ್ ಶಾಖೆ 100ಅಡಿ ರಸ್ತೆ ಇಲ್ಲಿ ಬಿಳಿಸಿಕೊಂಡಿದ್ದರು.
ಮಾಂಗಲ್ಯದ ಸರವನ್ನ ತೀರ್ಥಪ್ಪ ದೇವಕಾತಿಕೊಪ್ಪ ನಿವಾಸಿ ರವರಿಗೆ ಸಿಕ್ಕಿದ್ದು. ನಿನ್ನೆ ಸಂತೋಷ್ ಕುಮಾರ್ ಡಿ ಕೆ, ಪಿಐ ವಿನೋಬನಗರ ರವರ ಮುಖೇನಾ ವಾಪಸ್ಸು ವಾರಸುದಾರರಿಗೆ ಮರಳಿ ನೀಡಿರುತ್ತಾರೆ. ಮಾಂಗಲ್ಯ ಸರ ಕಳವು ಪ್ರಕರಣಗಳಂತಹ ನಡುವೆ ಇಂತಹ ಅಪರೂಪದ ಮತ್ತು ಸಮಾಧಾನಕರ ಸುದ್ದಿಗಳು ಇನ್ನೂ ಹೆಚ್ಚಾಗಿ ನಡೆಯಲಿ ಎಂದು ಆಶಿಸೋಣ.
Lost Mangalya Sara returned to its rightful owner
