ad

ಪಾದಚಾರಿಗೆ ಗೂಡ್ಸ್ ವಾಹನ ಡಿಕ್ಕಿ, ಪಾದಾಚಾರಿ ಸಾವು- Pedestrian dead after goods vehicle hits her

 SUDDILIVE || SHIKARIPURA

ಪಾದಚಾರಿಗೆ ಗೂಡ್ಸ್ ವಾಹನ ಡಿಕ್ಕಿ, ಪಾದಾಚಾರಿ ಸಾವು- Pedestrian dead after goods vehicle hits her  

Road, accident


ಚುರ್ಚಿಗುಂಡಿಯ ಬಳಿ ನಡೆದ ರಸ್ತೆ ಅಪಘಾತದಲ್ಲಿ 75 ವರ್ಷದ ವೃದ್ದೆ ಸಾವನ್ನಪ್ಪಿದ್ದಾಳೆ. ಎದುರಿನಿಂದ ಬಂದ ಗೂಡ್ಸ್ ವಾಹನವು ಪಾದಾಚಾರಿ ವೃದ್ದೆಗೆ ಡಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಅಸುನೀಗಿದ್ದಾಳೆ. 

ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಕೆಎ 15 ಎ 9708 ಕ್ರಮಸಂಖ್ಯೆಯ ಟಾಟಾ ಇಂಟ್ರಾ ಗೂಡ್ಸ್ ವಾಹನದ ಚಾಲಕ ಚುರ್ಚಿಗುಂಡಿಯ ವೀರಭದ್ರಯ್ಯನವರ ಮನೆಯ ಮುಂದೆ ನಡೆದುಕೊಂಡು ಹೋಗುತ್ತಿದ್ದ ದಾಕ್ಷಾಯಿಣಮ್ಮ ಎಂಬ 75 ವರ್ಷದ ವೃದ್ಧೆಗೆ ಡಿಕ್ಕಿ ಹೊಡೆದಿದ್ದಾನೆ. 

ತಕ್ಷಣವೇ ಆಕೆಯನ್ನ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಅಸುನೀಗಿದ್ದಾಳೆ.‌ಪ್ರಕರಣ ಶಿಕಾರಿಪುರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.‌

Pedestrian dead after goods vehicle hits her

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close