ಸಾಲಕ್ಕೆ ಬೇಸತ್ತು ಕಳೆನಾಶಕ ಸೇವಿಸಿ ವ್ಯಕ್ತಿ ಸಾವು-Man dies after consuming herbicide due to debt

 SUDDILIVE || RIPPONPETE

ಸಾಲಕ್ಕೆ ಬೇಸತ್ತು ಕಳೆನಾಶಕ ಸೇವಿಸಿ ವ್ಯಕ್ತಿ ಸಾವು-Man dies after consuming herbicide due to debt     

Man, debt


ರಿಪ್ಪನ್ ಪೇಟೆ : ವಿಪರೀತ ಸಾಲದ ಒತ್ತಡದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಕಳೆನಾಶಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಚಂದಳ್ಳಿಯಲ್ಲಿ ನಡೆದಿದೆ. 

ಚಂದಳ್ಳಿ ಗ್ರಾಮದ ರಾಜು (45) ಮೃತ ವ್ಯಕ್ತಿಯಾಗಿದ್ದಾನೆ. ಮೃತ ರಾಜು ಅವರ ತಾಯಿ ಪುಟ್ಟಮ್ಮ ಅವರ ಹೆಸರಿನಲ್ಲಿ 1 ಎಕರೆ ಖಾತೆ ಜಮೀನು ಹಾಗೂ 3 ಎಕರೆ ಬಗರ್‌ಹುಕುಂ ಜಮೀನು ಇದ್ದು, ಕೃಷಿ ಸಂಬಂಧಿತ ಕೆಲಸಗಳಿಗೆ ವಿವಿಧ ಸಂಸ್ಥೆಗಳಿಂದ ಸಾಲ ಪಡೆದಿದ್ದರು.ಈ ಸಾಲದ ವಿಚಾರವನ್ನು ಮನಸ್ಸಿಗೆ ಹಾಕಿಕೊಂಡ ರಾಜು ಪ್ರತಿದಿನ ತಾಯಿಗೆ ಸಾಲದ ಬಗ್ಗೆ ಪ್ರಶ್ನಿಸುತ್ತಿದ್ದು, ಇದರಿಂದ ಮನೋವೈಕಲ್ಯಕ್ಕೊಳಗಾಗಿರುವ ಸೂಚನೆಗಳು ಕಂಡು ಬಂದಿದ್ದವು. 

ದಿನಾಂಕ 19-11-2025 ರಂದು ಸಂಜೆ 7 ಗಂಟೆಗೆ ಮನೆಯಲ್ಲಿ ಕಳೆನಾಶಕ ಔಷಧ ಸೇವಿಸಿದ ರಾಜು ವಾಂತಿ ಮಾಡುತ್ತಿದ್ದನ್ನು ತಾಯಿ ಪುಟ್ಟಮ್ಮ ಗಮನಿಸಿ ತಕ್ಷಣ ನೆರವಿಗೆ ಕೂಗಿಕೊಂಡರು. ನಂತರ 108 ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.ಆದರೆ, ಚಿಕಿತ್ಸೆ ಫಲಕಾರಿಯಾಗದೇ 20-11-2025 ರಂದು ಬೆಳಗ್ಗೆ 5.30ಕ್ಕೆ ರಾಜು ಮೃತಪಟ್ಟಿದ್ದಾರೆ. 

ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Man dies after consuming herbicide due to debt

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close