ಮೂರು ಸಾಗುವಾನಿ ಮರಕ್ಕೆ ಕೊಡಲಿಪೆಟ್ಟು, ತಲೆದಂಡವಾಗುತ್ತಾ ಅಧಿಕಾರಿಗಳದ್ದು?Three savoy trees were chopped down with an axe, and the officials were beheaded?

 SUDDILIVE || BHADRAVATHI

ಮೂರು ಸಾಗುವಾನಿ ಮರಕ್ಕೆ ಕೊಡಲಿಪೆಟ್ಟು, ತಲೆದಂಡವಾಗುತ್ತಾ ಅಧಿಕಾರಿಗಳದ್ದು?Three savoy trees were chopped down with an axe, and the officials were beheaded?    

Savoy, tree

ಭದ್ರಾವತಿಯ ಉಪವಿಭಾಗದ ದೊಡ್ಡೇರಿಯ ಗಂಗೂರಿನ ಗ್ರಾಮದ ಸರ್ವೆ ನಂಬರ್ 18 ರಲ್ಲಿ ಮೂರು ಸಾಗುವಾನಿ ಮರ ಕಡಿತಲೆ ಮಾಡಲಾಗಿದೆ. ಅರಣ್ಯ ಸಂಪತ್ತು ಲೂಟಿಗೆ ಅರಣ್ಯ ಇಲಾಖೆಯ ಅಧಿಕಾರಿಗಳೆ ಕೈಜೋಡಿಸಿ ಬಿಟ್ರಾ ಎಂಬ ಶಂಕೆಯೂ ಸಹ ಕೇಳಿ ಬರುತ್ತಿದೆ.

ಅರಣ್ಯ ಸಂಪತ್ತಿನ ಕೇರ್ ಟೇಕರ್ ಆಗಬೇಕಿದ್ದ ಅರಣ್ಯ ಇಲಾಖೆಯಲ್ಲೇ ದೊಡ್ಡ ದೊಡ್ಡ ಸಾಗುವಾನಿ ಮರದ ಕಡಿತಲೆಯನ್ನ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಅರಣ್ಯ ಇಲಾಖೆಯ ಒತ್ತುವರಿ ಮಾಡಿಕೊಂಡ ರೈತನನ್ನೇ ಬಿಡದ ಇಲಾಖೆ ಇಷ್ಟು ದೊಡ್ಡ ಮರ ಕಡಿತಲೆ ಆಗಿ ಧರೆಗುರುಳಿಸುವ ವರೆಗೆ ಇಲಾಖೆ ನಿದ್ರೆಗೆ ಜಾರಿತ್ತಾ ಎಂಬ ಅನುಮಾನ ಸಹಹವಾಗಿ ಕೇಳಿ ಬರುತ್ತಿದೆ. 

ಈ ಕಡಿತಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕಳ್ಳಾಟದ ಬಗ್ಗೆ ತನಿಖೆಯಾಗಬೇಕಿದೆ. ಒಂದು ವೇಳೆ ತನಿಖೆಯಾಗುವ ಮುಂಚೆ ಇಲಾಖೆ ಗುಬ್ಬಿ ಮೇಲೆ ಬಾಣ ಬಿಡದೆ ದೊಡ್ಡ ದೊಡ್ಡ ಅಧಿಕಾರಿಗಳ ತಲೆದಂಡ ಆಗುತ್ತಾ ಕಾದು ನೋಡಬೇಕಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close