SUDDILIVE || SHIVAMOGGA
ಮರ್ಡರ್ @ ದುಮ್ಮಳ್ಳಿ-Murder @ Dummahalli
![]() |
| ಚಿತ್ರ-ಆರೋಪಿ ನಾಗೇಶ್ ನಾಯ್ಕ |
ತಾಲೂಕಿನ ದುಮ್ಮಳ್ಳಿ ಗ್ರಾಮದಲ್ಲಿ ಮಹಿಳೆಯ ಹತ್ಯೆಯಾಗಿದೆ. ಹಂತಕನ ದಾಳಿಯನ್ನ ಮಗ ತಪ್ಪಿಸಿಕೊಳ್ಳಲು ಮುಂದಾದಾಗ ತಾಯಿಗೆ ಲಾಂಗಿನ ಏಟು ಬಿದ್ದು ಕೊಲೆಯಾಗಿದೆ.
ಕೊಲೆಯಾದ ಮಹಿಳೆಯನ್ನ ಗಂಗಮ್ಮ (45) ಎಂದು ಗುರುತಿಸಲಾಗಿದೆ. ಕೊಲೆ ಮಾಡಿರುವ ವ್ಯಕ್ತಿಯನ್ನ ಹರೀಶ್ ನಾಯ್ಕ ಮತ್ತು ನಾಗೇಶ್ ನಾಯ್ಕ ಎಂದು ಆರೋಪಿಸಲಾಗಿದೆ. ಈ ಘಟನೆ ನಿನ್ನೆ ರಾತ್ರಿ 11 ಗಂಟೆಯ ಸುಮಾರಿಗೆ ನಡೆದಿದೆ.
ದುಮ್ಮಳ್ಳಿಯಲ್ಲಿ ಜೀವನ್ ಎಂಬಾತ ತನ್ನ ತಾಯಿ ಗಂಗಮ್ಮ, ಸಹೋದರ ಪುನೀತ್, ಅಜ್ಜಿ ನಾಗಮ್ಮವರೊಂದಿಗೆ ವಾಸವಾಗಿದ್ದನು. ಜೀವನ್ ಕಳೆದ ಎರಡು ವರ್ಷದ ಹಿಂದೆ ತನ್ನ ಚಿಕ್ಕಪ್ಪನ ಮನೆಯನ್ನ ಹರೀಶ್ ನಾಯ್ಕ ಯಾನೆ ದೂದಾಗೆ ಬಾಡಿಗೆಗೆ ಕೊಡಿಸಿದ್ದನು. ಬಾಡಿಗೆ ವಿಚಾರದಲ್ಲಿ ಹರೀಶ್ ನಾಯ್ಕ ಮತ್ತು ಜೀವನ್ ನಡುವೆ ಗಲಾಟೆಯಾಗಿತ್ತು.
ಇದರಿಂದ ರೊಚ್ಚಿಗೆದ್ದ ಹರೀಶ್ ನಾಯ್ಕ ಜೀವನ್ ಸಿಕ್ಕಾಗಲೆಲ್ಲ ಗುರಾಯಿಸುತ್ತಿದ್ದ ಎಂದು ಆರೋಪಿಸಿದ್ದಾನೆ. ನಿನ್ನೆ ರಾತ್ರಿ ಮನೆಯ ಮುಂದೆ ಜಣಿವನ್ ಮತ್ತು ಗಂಗಮ್ಮ ನಿಂತಿದ್ದಾಗ ಪರಿಚಯಸ್ಥ ಮಂಜುನಾಥ ಎಂಬುವರು ಬೈಕ್ ನಲ್ಲಿ ಬರುತ್ತಿದ್ದಾಗ ಹರೀಶ್ ನಾಯ್ಕ ಏಕಾಏಕಿ ದಾಳಿ ನಡೆಸಿ ಹಲ್ಕೆ ನಡೆಸಿದ್ದಾನೆ.
![]() |
| ಕೊಲೆಯಾದ ಮಹಿಳೆ ಗಂಗಮ್ಮ |
ಮಂಜುನಾಥನಿಗೆ ಮನೆಯ ಮುಂದೆ ನಿಂತಿದ್ದ ಜೀವನ್ ಮತ್ತು ತಾಯಿ ಗಂಗಮ್ಮ ನೀರು ಕುಡಿಸಿ ಆತನ ಗಾಯಗಳಿಗೆ ಹರಿಷಿಣ ಹಚ್ಚಲು ಮುಂದಾಗಿದ್ದಾರೆ. ಮಂಜುನಾಥನಿಗೆ ಉಪಚರಿಸಿದ ಹಿನ್ನಲೆಯಲ್ಲಿ ಹರೀಶ್ ತಗಾದೆ ತೆಗೆದಿದ್ದಾನೆ. ಜಿವನ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಹರೀಶ್ ಜೊತೆಗೆ ಸಹೋದರ ನಾಗೇಶ್ ನಾಯ್ಕ ಎಂಬಾತನೂ ಕೈಜೋಡಿಸಿದ್ದಾನೆ.
ಗಲಾಟೆಯ ಮಧ್ಯೆ ಮನೆಯಿಂದ ಹರೀಶ್ ನಾಯ್ಕ ಜೀವನ್ ಮೇಲೆ ಬೀಸಿದ್ದಾನೆ. ಹರೀಶ್ ನಾಯ್ಕನ ದಾಳಿಯನ್ನ ತಪ್ಪಿಸಿಕೊಳ್ಳಲು ಹೋಗಿ ಗಂಗಮ್ಮನ ಕುತ್ತಿಗೆಗೆ ಹೊಡೆತ ಬಿದ್ದಿದೆ. ಗಂಗಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ಹರೀಶ್ ನಾಯ್ಕ ಮತ್ತು ನಾಗೇಶ್ ನಾಯ್ಕ ನ ವಿರುದ್ಧ ದೂರು ದಾಖಲಾಗಿದೆ.
Murder @ Dummahalli

