ರೀಲ್ಸ್ ಅಭಿಮಾನಿಗಳೆಂದು ಶಿಕ್ಷಕನನ್ನೇ ಸುಲುಗೆಗೈದ ಖದೀಮರು-The Accused who robbed the teacher for being a Reels fan

 SUDDILIVE || SHIVAMOGGA

ರೀಲ್ಸ್ ಅಭಿಮಾನಿಗಳೆಂದು ಶಿಕ್ಷಕನನ್ನೇ ಸುಲುಗೆಗೈದ ಖದೀಮರು-The Accused who robbed the teacher for being a Reels fan

Teacher, robbery

ನಿಮ್ಮ ರೀಲ್ಸ್‌ನ ಅಭಿಮಾನಿಗಳು ಎಂದು ತಿಳಿಸಿ ಶಿಕ್ಷಕನೋರ್ವನನ್ನ ದರೋಡೆ ಮಾಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ ಬಳಿ ಕೃತ್ಯ ನಡೆದಿದೆ.

ಖಾಸಗಿ ಶಾಲೆಯೊಂದರ ಶಿಕ್ಷಕರೊಬ್ವರು ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಅಪ್‌ಲೋಡ್‌ ಮಾಡುತ್ತಿದ್ದರು. ಅವರ ಇನ್‌ಸ್ಟಾಗ್ರಾಂಗೆ ವ್ಯಕ್ತಿಯೊಬ್ಬ ಮೆಸೇಜ್‌ ಮಾಡಿದ್ದ. ಶಿಕ್ಷಕನ ರೀಲ್ಸ್‌ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದ. ಕೊನೆಗೆ ಶಿಕ್ಷಕನನ್ನು ಭೇಟಿಯಾಗಬೇಕು ಎಂದು ತಿಳಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನ.7ರ ರಾತ್ರಿ 9.30ಕ್ಕೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ ಬಳಿ ಶಿಕ್ಷಕ ತನ್ನ ಬೈಕಿನಲ್ಲಿ ತೆರಳಿದ್ದರು. ಓಮ್ನಿ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ‘ನಾನೇ ನಿಮಗೆ ಮೆಸೇಜ್‌ ಮಾಡಿದ್ದುʼ ಎಂದು ತಿಳಿಸಿದ್ದ. ಕಾರಿನಿಂದ ಇಳಿದ ಮೂವರು ಶಿಕ್ಷಕನನ್ನು ಸುತ್ತುವರೆದು ಚಾಕು ತೋರಿಸಿ ಬೆದರಿಸಿದ್ದರು. ಶಿಕ್ಷಕನ ಉಂಗುರಗಳು, ಕೊರಳಲ್ಲಿದ್ದ ಚಿನ್ನದ ಸರ, ಕಿವಿಯೋಲೆ, ಮೊಬೈಲ್‌ ಫೋನ್‌ ಕಸಿದುಕೊಂಡು ಹೋಗಿದ್ದಾರೆ. ಅಲ್ಲದೆ ಶಿಕ್ಷಕನ ಫೋನ್‌ ಪೇಯಿಂದ  ₹3500 ನಗದು ವರ್ಗಾಯಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

The Accused who robbed the teacher for being a Reels fan    

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close