SUDDILIVE || SHIVAMOGGA
ಭದ್ರಾವತಿಯ DYSP ಆಗಿ ಪ್ರಕಾಶ್ ರಾಥೋಡ್ ವರ್ಗ- Prakash Rathod appointed as DYSP of Bhadravati
ಭದ್ರಾವತಿಯ ಉಪ ವಿಭಾಗಕ್ಕೆ ಪ್ರಕಾಶ ರಾಥೋಡ್ ಅವರನ್ನು DySPಯಾಗಿ ನೇಮಕ ಮಾಡಿ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಕೆಜೆ ಹಳ್ಳಿಯ ಉಪವಿಭಾಗದ ಎಸಿಪಿಯಾಗಿದ್ದ ಪ್ರಕಾಶ ರಥೋಡ್ ಅವರಿಗೆ ಪ್ರಕರಣಗಳ ತನಿಖೆಯಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕಾಗಿ ಇತ್ತೀಚೆಗೆ ಕೇಂದ್ರ ಗೃಹಮಂತ್ರಿಯವರ ದಕ್ಷತಾ ಪದಕ ಘೋಷಣೆ ಮಾಡಿದೆ.
ಸದ್ಯ ಬೆಂಗಳೂರಿನ ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿಯಾಗಿ ಪ್ರಕಾಶ ರಾಥೋಡ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತನಿಖಾ ವಿಭಾಗದಲ್ಲಿ ಪ್ರಕಾಶ ರಾಥೋಡ್ ಉತ್ತಮ ಸಾಧನೆ ಮಾಡಿದ್ದಾರೆ. ಈಚೆಗೆ ಬಿಕ್ಲು ಶಿವು ಕೊಲೆ ಪ್ರಕರಣ, ದಿವ್ಯ ಹಾಗರಗಿ ಪ್ರಕರಣದಲ್ಲಿ ಎಸಿಪಿಯವರು ಖಡಕ್ ಕಾರ್ಯಾಚರಣೆ ನಡೆಸಿದ್ದರು.
ಅ.6ರಂದು ಭದ್ರಾವತಿ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿವೈಎಸ್‌ಪಿ ನಾಗರಾಜ್ ಕೆ.ಆರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಡಿವೈಎಸ್‌ಪಿ ಹುದ್ದೆ ಖಾಲಿ ಇತ್ತು. ಈಗ ಕಳೆದ ಮೂರುದಿನಗಳ ಹಿಂದೆ ಪ್ರಕಾಶ್ ರಾಥೋಡ್ ಭದ್ರಾವತಿಯ ಡಿವೈಎಸ್ಪಿ ಆಗಿ ವರ್ಗಗೊಂಡಿದ್ದಾರೆ.
Prakash Rathod appointed as DYSP of Bhadravati
