ತೃತೀಯ ಲಿಂಗಿಯ ಮೇಲೆ ಹಲ್ಲೆ, ಸಂತ್ರಸ್ತೆಗೆ ರಕ್ಷಣೆಗೆ ಬೇಡಿಕೆ- Transgender woman attacked, victim demands protection

SUDDILIVE || SHIVAMOGGA

ತೃತೀಯ ಲಿಂಗಿಯ ಮೇಲೆ ಹಲ್ಲೆ, ಸಂತ್ರಸ್ತೆಗೆ ರಕ್ಷಣೆಗೆ ಬೇಡಿಕೆ- Transgender woman attacked, victim demands protection    

Transgender, attack

ಲೈಂಗಿಕ ಅಲ್ಪಸಂಖ್ಯಾತರಾದ ಸುಕನ್ಯಾ ಅವರ ಮೇಲೆ ಬೆಂಗಳೂರಿನಲ್ಲಿ ನಡೆದ ಅಮಾನವೀಯ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳ ಜಾಮೀನನ್ನು ಹಿಂಪಡೆಯಬೇಕು ಎಂಬುದನ್ನು ಸೇರಿದಂತೆ ಇನ್ನಿತರೇ ಹಕ್ಕೋಟಾಯಗಳನ್ನು ಈಡೇರಿಸುವಂತೆ ರಕ್ಷಾ ಸಮಾಜ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.

ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಕ್ಷಾ ಸಂಘಟನೆಯ ಕಾರ್ಯದರ್ಶಿ ಅಕ್ಷತ ಬೆಂಗಳೂರಿನ 24 ವರ್ಷದ ಸುಖಾನ್ಯ  ಒಂದು ವಸತಿಯಿಂದ ಮತ್ತೊಂದು ವಸತಿಗೆ ಹೋದಾಗ ಅದನ್ನು ವಿರೋಧಿಸಿದ  7 ಜನರ ಗುಂಪೊಂದು ಸುಕನ್ಯಾ ಮೇಲೆ.   ಅಕ್ಟೋಬರ್ 30 ಮತ್ತು 31ರ ಮಧ್ಯೆ ಅಕ್ಟೋಬರ್ 30 ಮತ್ತು 31ರ ಮಧ್ಯೆ ರಾತ್ರಿ ಕೃಷ್ಣರಾಜಪುರಂನಿಂದ ಸುಕನ್ಯಾ ಅವರನ್ನು ಅಪಹರಿಸಿ, ಮರದ ಕಟ್ಟಿಗೆ ಮತ್ತು ಸೌಟಿನಿಂದ ಪುನಃ ಪುನಃ ಹೊಡೆದು ಕ್ರೂರ ಹಿಂಸೆಗೆ ಒಳಪಡಿಸಿದ್ದಾರೆ. ಈ ವೇಳೆ, ಆಕೆಯ ಲಿಂಗತ್ವ ಅಸ್ತಿತ್ವವನ್ನು ಅಳಿಸಿಹಾಕುವ ಉದ್ದೇಶದಿಂದ ಅವರ ತಲೆಯನ್ನು ಬಲವಂತವಾಗಿ ಬೋಳಿಸಲಾಗಿದೆ. ಸುಕನ್ಯಾ ಅವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಅಕ್ಟೋಬರ್ 31ರಂದು ಮಧ್ಯಾಹ್ನ 1:30ರವರೆಗೆ ಬಂಧನದಲ್ಲಿ ಇಡಲಾಗಿತ್ತು. ನಾಗರಿಕ ಸಮಾಜದ ಸಂಘಟನೆಗಳು ಮತ್ತು ಹೋರಾಟಗಾರರ ಸಮಯೋಚಿತ ಮಧ್ಯಸ್ಥಿಕೆಯಿಂದ ಪೊಲೀಸರು ಅವರನ್ನು ರಕ್ಷಿಸಿ, ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.


ಈ ಘಟನೆಯು ಹಿಜ್ರಾ ವ್ಯವಸ್ಥೆಯೊಳಗಿನ ಸದಸ್ಯರು, ವಿಶೇಷವಾಗಿ ಅತೀ ಕೆಳಹಂತದ ಸದಸ್ಯರು, ಹಲವು ಕಡೆಯಿಂದ (ಕುಟುಂಬ, ಪೊಲೀಸ್, ಸಾರ್ವಜನಿಕರು ಮತ್ತು ದುಃಖಕರವಾಗಿ ಕೆಲವೊಮ್ಮೆ ತಮ್ಮದೇ ಸಮುದಾಯದೊಳಗಿನಿಂದಲೂ) ಹಿಂಸೆಗೆ ಒಳಗಾಗುವ ಕಹಿ ವಾಸ್ತವವನ್ನು ಬೆಳಕಿಗೆ ತಂದಿದೆ ಎಂದು ಅಕ್ಷತ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

"ಹಿಜ್ರಾ ಘರಾಣಾ ವ್ಯವಸ್ಥೆ ಇತಿಹಾಸದಲ್ಲಿ ಸಮುದಾಯ ಮತ್ತು ಕಾಳಜಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದರೂ, ನಿಯಂತ್ರಣವನ್ನು ಕಾಪಾಡಿಕೊಳ್ಳಲು ಹಿಂಸೆ, ಬಲಪ್ರಯೋಗ ಅಥವಾ ಶೋಷಣೆಯನ್ನು ಬಳಸುವಂತಿಲ್ಲ. ಇತ್ತೀಚಿನ ದಿನಗಳಲ್ಲಿ ಈ ವಲಯಗಳಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ನಾವು ಗಂಭೀರವಾಗಿ ಚಿಂತಿತರಾಗಿದ್ದೇವೆ" ಎಂದರು. ಸುಕನ್ಯಾ ಅನುಭವಿಸಿದ ಹಿಂಸೆಯು ಅವರ ಮಾನವ ಹಕ್ಕು ಮತ್ತು ಗೌರವದಿಂದ ಬದುಕುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದಿದ್ದಾರೆ.


ವಕೀಲರಾದ ಸರೋಜ. ಪಿ ಅವರು ಮಾತನಾಡಿ, ಕೆ.ಆರ್. ಪುರಂನಲ್ಲಿ ಲೈಂಗಿಕ ಅಲ್ಪಸಂಖ್ಯಾತ ಮಹಿಳೆಯನ್ನು ಅಪಹರಿಸಿ ಮೂರು ದಿನ ಕೂಡಿ ಹಾಕಿ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಈ ಕುರಿತು ಏಳು ಜನರನ್ನು ಬಂಧಿಸಲಾಗಿದ್ದರೂ, ಅವರಿಗೆ ಈಗ ಜಾಮೀನು ಸಿಕ್ಕಿದ್ದು, ಅವರು ಸುಕನ್ಯಾ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ರಕ್ಷಾ ಸಮಾಜ ಹೋರಾಟ ನಡೆಸುತ್ತಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಸುಕನ್ಯಾ ಅವರು ನವೆಂಬರ್ 12, 2025 ರಂದು ನಡೆದ ಮಹಜರ್ ವೇಳೆ, ಹಲ್ಲೆ ನಡೆದ ದಿನ ತಮಗೆ ಕೊಲೆ ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ. ಈ ಕಾರಣದಿಂದ, ಕೂಡಲೇ ಅಪರಾಧಿಗಳ ವಿರುದ್ಧ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದಂತೆ ಹೊಸ BNS ಸೆಕ್ಷನ್ ಅನ್ನು ಎಫ್‌ಐಆರ್‌ನಲ್ಲಿ ಸೇರಿಸಿ, ನೀಡಿರುವ ಜಾಮೀನನ್ನು ಹಿಂಪಡೆದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕು ಎಂದು ರಕ್ಷಾ ಸಮಾಜ ಸಂಘಟನೆ ಆಗ್ರಹಿಸಿದೆ.

ಪ್ರಮುಖ ಹಕ್ಕೊತ್ತಾಯಗಳು:

ಸುಕನ್ಯಾ ಮೇಲಿನ ಹಲ್ಲೆಯ ಕುರಿತು ವೇಗವಾದ ಮತ್ತು ಪಾರದರ್ಶಕ ತನಿಖೆ ನಡೆಸಿ, ಎಲ್ಲಾ ಆರೋಪಿಗಳಿಗೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಬೇಕು.

ಪ್ರತೀಕಾರದಿಂದ ರಕ್ಷಣೆ ಸೇರಿದಂತೆ ಸುಕನ್ಯಾ ಅವರ ಸುರಕ್ಷತೆಯನ್ನು ಖಾತ್ರಿಪಡಿಸಲು ತಕ್ಷಣದ ಕ್ರಮ ಕೈಗೊಳ್ಳಬೇಕು.

ಕರ್ನಾಟಕ ಪೊಲೀಸರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಕೆಲಸ ಮಾಡುವ ಸಂಘಟನೆಗಳು ಮತ್ತು ಸಮುದಾಯ ನಾಯಕರೊಂದಿಗೆ ಸೇರಿ, ಹಿಂಸೆಯನ್ನು ತಡೆಯಲು ಮತ್ತು ತಕ್ಷಣ ಪ್ರತಿಕ್ರಿಯಿಸಲು ಕ್ರಮ ಕೈಗೊಳ್ಳಬೇಕು.

ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಉದ್ಯೋಗಗಳಲ್ಲಿ ವಿಶೇಷ ನೇಮಕಾತಿ, ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜೀವನೋಪಾಯದ ಅವಕಾಶಗಳನ್ನು ವಿಸ್ತರಿಸಬೇಕು.

ಲಿಂಗತ್ವ ಅಲ್ಪಸಂಖ್ಯಾತರಿಗೆ ಸುರಕ್ಷಿತ, ಒಳಗೊಂಡ ಮತ್ತು ಕೈಗೆಟುಕುವ ವಸತಿಯನ್ನು ಒದಗಿಸಬೇಕು.ಎಲ್ಲಾ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳೂ ಮೌನವನ್ನು ಮುರಿದು, ಎಲ್ಲಾ ವಿಧದ ಹಿಂಸೆ ಮತ್ತು ಅನ್ಯಾಯದ ವಿರುದ್ಧ ತಮ್ಮ ಧ್ವನಿಯನ್ನು ಎತ್ತಬೇಕೆಂದು ರಕ್ಷಾ ಸಮಾಜ ಕರೆ ನೀಡಿದೆ.

Transgender woman attacked, victim demands protection

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close