SUDDILIVE || SHIVAMOGGA
ನಿರಾಶ್ರಿತರ ಹಂಟಿಂಗ್-Refugee Hunting
ಶಿವಮೊಗ್ಗದ ಖಾಸಗಿ ಮತ್ತು KSRTC ಬಸ್ ನಿಲ್ದಾಣದಲ್ಲಿ ಬೇಡುವ ಭಿಕ್ಷುಕರನ್ನ ನಿರಾಶ್ರಿತ ಕೇಂದ್ತಗಳಿಗೆ ಕಳುಹಿಸುವ ಕಾರ್ಯಾಚರಣೆ ನಡೆದಿದೆ.
ಕಳೆದ 15 ದಿನಗಳಿಂದ ದೊಡ್ಡಪೇಟೆ ಮತ್ತು ನಿರಾಶ್ರಿತ ಕೇಂದ್ರದ ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಇದುವರೆಗೂ 30 ಜನರನ್ನ ಈ ಬಸ್ ನಿಲ್ದಾಣಗಳಲ್ಲಿ ಹಿಡಿದುಕೊಂಡು ಲಯನ್ ಸಫಾರಿ ಬಳಿಯಿರುವ ನಿರಾಶ್ರಿತ ಕೇಂದ್ರಗಳಿಗೆ ಬಿಡಲಾಗಿದೆ.
ಮನೆಬಿಟ್ಟು ಬಂದ ಈ ನಿರಾಶ್ರಿತರು ಭಿಕ್ಷೆ ಬೇಡುವ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಕೈಲಾಗದ ಕೆಲವರೊಬ್ಬ ವೃದ್ಧರನ್ನ ಮನೆಯವರೆ ಬಂದು ಬಿಟ್ಟುಹೋಗಿರುವ ಉದಾಹರಣೆಗಳೂ ಇವೆ. ಇವರುಗಳು ಈ ಬಸ್ ನಿಲ್ದಾಣದಲ್ಲಿ ಹಗಲುಹೊತ್ತು ಬೇಡುವ ವೃತ್ತಿಯಲ್ಲಿ ತೊಡಗಿಕೊಂಡು ಬಸ್ ನಿಲ್ದಾಣಗಳಲ್ಲೇ ಮಲಗುತ್ತಿದ್ದರು. ಇವರಲ್ಲಿ ಬಹುತೇಕರು ಸ್ವಚ್ಛತೆ ಕಾಪಾಡದ ಹಿನ್ನಲೆಯಲ್ಲಿ ಪ್ರಯಾಣಿಕರಿಗೆ ಇರಿಸುಮುರಿಸು ಉಂಟು ಮಾಡುತ್ತಿರುವುದರಿಂದ ಈ ಕಾರ್ಯಾಚರಣೆ ಅನಿವಾರ್ಯವಾಗಿತ್ತು. ಇವರನ್ನ ನಿರಾಶ್ರಿತ ಕೇಂದ್ರಗಳಿಗೆ ಸೇರಿಸಲಾಗಿದೆ.

