ಚಾನೆಲ್ ಗೆ ಹಾರಿದ ಯುವಕನ ರಕ್ಷಣೆ-Rescue of a young man who jumped into the channel

 SHIVAMOGGA || SHIVAMOGGA

ಚಾನೆಲ್ ಗೆ ಹಾರಿದ ಯುವಕನ ರಕ್ಷಣೆ-Rescue of a young man who jumped into the channel


Youngman, Rescue


ಶಿವಮೊಗ್ಗದ ಗೋಪಾಳದಲ್ಲಿರುವ ಗುಡ್ ಶೆಫರ್ಡ್ ಚರ್ಚ್ ಬಳಿಯ ಚಾನೆಲ್ ಗೆ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದು ಆತನನ್ನ ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ. 

ಇಙದು ಬೆಳಿಗ್ಗೆ 24 ವರ್ಷದ ಯುವಕನೋರ್ವ ಚಾನೆಲ್ ಗೆ ಹಾರಿದ್ದುಅಯ್ಯಪ್ಪಸ್ವಾಮಿ ಮಲಾ ಧಾರಿಗಳು ಇದನ್ನ ನೋಡಿ ಅಗ್ನಿಶಾಮಕದಳದವರಿಗೆ ಮೊದಲು ಕರೆ ಮಾಡಿದ್ದಾರೆ. 

ಅಗ್ನಿಶಾಮಕದಳದ ಡಿಎಫ್ಒ ಅಶೋಕ್ ಕುಮಾರ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಚಾನೆಲ್ ಗೆ ಬಿದ್ದ ಯುವಕನನ್ನ ರಕ್ಷಿಸಾಗಿದೆ. ಇವರ ತಂದೆ ಪ್ರತಿಷ್ಠಿತ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು ಅವರ ಜೊತೆಯಲ್ಲೇ ಇದ್ದ ಮಗ ಯಾವ ಗ್ಯಾಪ್ ನಲ್ಲಿ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಗೊತ್ತಿಲ್ಲ. 

ಹಿತೇಶ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದಾನೆ. 2023 ರಲ್ಲಿ ಬಿಇ ವಿದ್ಯಾಭ್ಯಾಸ ಓದಿದ್ದ ಹಿತೇಶ್ ಜೆಲಸವಿಲ್ಲದೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಾಪಾಸ್ ಆಗಿದ್ದ. ಉದ್ಯೋಗದ ಕೊರತೆಯಿಂದಾಗಿ ಮಾನಸಿಕನಾಗಿ ಚಾನೆಲ್ ಗೆ ಹಾರಿದ್ದಾನೆ.

Rescue of a young man who jumped into the channel

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close