ad

ಜೈಲುಗಳು ಸುಧಾರಣೆಯಾಗಬೇಕಿದೆ-ಸಾವರ್ಕರ್ ಡಿಪಿ ಹಾಕಿಕೊಂಡ್ರೆ ಅವನಿಗೇನು ಕಡಿಯುತ್ತಾ?ಆರಗ-Savarkar photo if he gets DP

 SUDDILIVE || SHIVAMOGGA

ಜೈಲುಗಳು ಸುಧಾರಣೆಯಾಗಬೇಕಿದೆ-ಸಾವರ್ಕರ್ ಡಿಪಿ ಹಾಕಿಕೊಂಡ್ರೆ ಅವನಿಗೇನು ಕಡಿಯುತ್ತಾ? ಆರಗ-Parappana Agrahara needs to be improved - what will happen to Savarkar photo if he gets DP? Araga

Savarkar, DP


ಪರಪ್ಪನಾಗ್ರಗಾರ ಜೈಲಿನಲ್ಲಿ ನಡೆದ ಘಟನಾವಣೆಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದೆ. ಸುಧಾರಣಾಕೇಂದ್ರವಾಗಿದ್ದ ಜೈಲುಗಳು ಇನ್ನಷ್ಟು ಉಗ್ರರನ್ನ ಹುಟ್ಟುಹಾಕುತ್ತಿದೆ ಎಂದು ಶಾಸಕ ಆರಗಜ್ಞಾನೇಂದ್ರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈಲಿನಲ್ಲಿರುವ ಉಗ್ರನ ಕೈಯಲ್ಲಿ ಮೊಬೈಲ್ ಕಾಣುವ ದೃಶ್ಯಗಳು ಪತ್ತೆಯಾಗಿದೆ. ಕಲರ್ ಟಿವಿಗಳು ಮಹಿಳೆಯರನ್ನ‌ ಅತ್ಯಾಚಾರ ಮಾಡಿದ ಆರೋಪಿಯ ಕೊಠಡಿಯಲ್ಲಿ ಕಾಣಲಾಯಿತು. ಸಿನಿಮಾ ನಟನಿಗೆ ಹಾಸಿಗೆ ದಿಂಬುಗಾಗಿ ಕೋರ್ಟ್ ಗೆ ಹೋಗುತ್ತಾರೆ. ಆದರೆ ಇಲ್ಲಿನ ವಿಜಾರಣಾಧಿನ ಮತ್ತು ಸಜಾಬಂಧಿಗಳ ಕೈಯಲ್ಲಿ ಎಲ್ಲವೂ ಸಿಗುತ್ತದೆ. ನಾನು ಗೃಹಸಚಿವನಾಗಿದ್ದಾಗ ಜೈಲಿಗೆ  ಜ್ಯಾಮರ್ ಹಾಕಿದ್ದಕ್ಕೆ ವಸತಿ ನಿವಾಸಿಗಳ ಆಕ್ಷೇಪವಾಗಿತ್ತು. ಅದನ್ನ ಸರಿಪಡಿಸುವ ವ್ಯವಸ್ಥೆಯಾಗಿತ್ತು. ಈಗ ಅದು ಸರಿಪಡಿಸದೆ ಜ್ಯಾಮರ್ ನಿಂದಾಗಿ ಅನಾನುಕೂಲವಾಗುತ್ತಿರುವ ಬಗ್ಗೆ ಸಾರ್ವಜನಿಕರು ಮತ್ತೆ ಆಕ್ಷೇಇಸಿದ್ದಾರೆ. ಈ ಬಗ್ಗೆ ಗೃಹಸಚಿವರು ಉತ್ತರಿಸಬೇಕು ಎಂದರು.

ನಾನಿದ್ದಾಗ 20 ವರ್ಷಗಳಿಂದ  ಅಲ್ಲೇ ಇದ್ದ ಅಧಿಕಾರಿಗಳನ್ನ ಎತ್ತಂಗಡಿ ಮಾಡಲಾಗಿತ್ತು. ಈಗ ಆ ಅಧಿಕಾರಿಗಳು ವಾಪಾಸ್ ಆಗಿದ್ದಾರೆ ಎಂದು ಕಾಣಿಸುತ್ತದೆ. ಮಂಗಳೂರು ಬೆಳಗಾಂ ಮತ್ತು ಪರಪ್ಪನ ಅಗ್ರಹಾರದಲ್ಲಿ ಆರೋಪಿಗಳಿಗೆ ಸವಲತ್ತುಗಳು, ಮೊಬೈಲ್ ಗಳು ಸಿಗುವಂತಾಗಿದೆ. ಇದು ಬದಲಾಗಬೇಕು. ಸೆರೆಮನೆಗಳು ಕೆಲ ಖೈದಿಗಳ ಪಾಲಿಗೆ ಅರಮನೆಯಾಗಿದೆ. ಇದಕ್ಕೆ ಸರ್ಕಾರ ತಲೆತಗ್ಗಿಸುವಂತಾಗಿದೆ ಎಂದು ಕಿಡಿಕಾರಿದರು.

ಆರೋಪಿಗಳಿಗೆ ರಾಜ್ಯಾತಿಥ್ಯ ಕೊಟ್ಟಿದ್ದಕ್ಕೆ ಖೈದಿಗಳು ಹುಟ್ಟುಹಬ್ಬ ಆಚರಿಸಲಾಗಿತ್ತು. ಈ  ವಿಡಿಯೋ ವೈರಲ್ ಆಗಿತ್ತು. ಮೀಡಿಯಾಗಳಿಗೆ ಸಿಗುವ ವಿಡಿಯೊ ಹೋಮ್ ಮಿನಿಸ್ಟರ್ ಗೆ ಏಕೆಸಿಗಲ್ಲ. ಹೊರಗಡೆಗಿಂತ ಜೈಲೇ ಸರಿಯಾದ ಜಾಗ ಎಂದು ಸಮಾಜದಲ್ಲಿ ಭಾವನೆ ಮೂಡಿದರೆ ಲಾ & ಆರ್ಡರ್ ಕಥೆ ಏನಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. 

ಕಾರಾಗೃಹದ ಸಿಬ್ಬಂದಿಗಳ ನೇಮಕಾತಿಯೂ ಆಗುತ್ತಿಲ್ಲ.‌ ಖೈದಿಗಳ ಕೈಲ್ಲಿ ಮೊಬೈಲ್ ಮೊದಲಾದ ವಸ್ಥುಗಳು ಪತ್ತೆಯಾಗುವುದಾದರೆ ಜೈಲ್ ಗಳನ್ನ ಬಂದ್ ಮಾಡಬೇಕಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ನೆಮ್ಮದಿಯ ವಾತವರಣಕ್ಕೆ ಅನೇಕ ಸುಧಾರಣೆಗಳನ್ನ‌ನಮ್ಮ ಸರ್ಕಾರ ಮಾಡಿತ್ತು. ಖೈದಿಗಳ ಕೈಗೆ ಸದಾಕಾಲ ಕೆಲಸ ಕೊಟ್ಟರೆ ಕೆಲಸ ಹೆಚ್ಚಿಸುವ ಮೂಲಕ ಜೈಲಿನ ಉತ್ಪಾದನೆಯನ್ನೂ ಸಹ ಹೆಚ್ಚಿಗೆ ನಾಡಬೇಕು. ನಮ್ಮ. ಅವಧಿಯಲ್ಲಿ ಖೈದಿಗಳ ಸಂಬಳವನ್ನೂ ಹೆಚ್ಚಿಸಲಾಗಿತ್ತು. ಈ ಬಗ್ಗೆ ಆಕ್ಷೇಪ ಸಹ ಕೇಳಿ ಬಂದಿತ್ತು. ಸುಧಾರಣೆಗಾಗಿ ಈ ಕ್ರಮ ಕೈಗೊಳ್ಳಕಾಗಿತ್ತು. ಈಗಿನ ಸರ್ಕಾರ ಜೈಲಿನ ಬಗ್ಗೆ ಏನೂ ಕ್ರಮ‌ಕೈಗೊಳ್ಳದ ಕಾರಣ ಈ ಕೃತ್ಯ ಹೆಚ್ಚು ನಡೆಯುತ್ತಿದೆ. ಸರ್ಕಾರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. 

ತಪಾಸಣೆಗೆ ಹೋದ ಪೊಲೀಸರಿಗೆ ಜೈಲಿನಲ್ಲಿ, ಸಿಸಿ ಟಿವಿ ಮಾಯಾವಾಗುತ್ತದೆ. ಬ್ಯಾರೆಕ್ ಗಳಲ್ಲಿ ಫೊನ್ ಗಳು ಪತ್ತೆಯಾಗಿದೆ. ನಮ್ಮ ಸರ್ಕಾರ ಇದ್ದಾಗಲೂ ನಡೆದಿದೆ. ಅದನ್ನ ಮುಂದುವರೆಯಬಾರದು. ಕಟ್ ಮಾಡಲು 6 ಕನಜನ ಅಧಿಕಾರಿಗಳನ್ನ ಅಮಾನತ್ತು ಮಾಡಲಾಗಿತ್ತು. ಅನೇಕ ವಿಧಾನಗಳನ್ನ ಅಳವಡಿಸಿಕೊಂಡು ಜೈಲನ್ನ ಬಿಗಿಗೊಳಿಸಬೇಕು ಎಂದರು.  

ಜೈಲುಗಳನ್ನ ಇಬ್ಭಾಗ ಮಾಡಿ ಜೈಲುಗಳನ್ನ ಹೈಟೆಕ್ ಮಾಡಬೇಕು. ಬಂಧೀಖಾನೆ ನಿರ್ಲಕ್ಷಕ್ಕೊಳಗಾದ ಇಲಾಖೆಯಾಗಿದೆ. ಅಲ್ಲೂ ಸಹ ಪರಪ್ಪನ ಅಗ್ರಹಾರದಲ್ಲಿ ಡ್ಯೂಟಿ ಹಾಕಿಕೊಳ್ಳಲು ಸ್ಪರ್ಧೆಯಿದೆ. ಅಧಿಕಾರಿಗಳ ವಿರುದ್ಧ ಕ್ರಮವಾಗಬೇಕು. ಉಪಕಾರಾಗೃಹಗಳು ಸುಧಾರಣೆಯಾಗಲು ಸರ್ಕಾರ ಸರಿಯಾಗಿ ಹಣ ಬಿಡುಗಡೆ ಮಾಡಬೇಕು ಎಂದರು. 

ಸಾವರ್ಕರ್ ಡಿಪಿಹಾಕಿದರೆ ಅವನಿಗೇನು ಕಡಿಯುತ್ತದೆ?

ಸಾವರ್ಕರ್ ಡಿಪಿ ಹಾಕಿಕೊಂಡ ಕಾನೂನು ವಿದ್ಯಾರ್ಥಿಗೆ ಜೀವಬೆದರಿಕೆ ಹಾಕಲಾಗಿದೆ. ಸಾವರ್ಕರ್ ಫೊಟೊ ಹಾಕಿಕೊಂಡರೆ ಇವನಿಗೇನು ಕಡಿಯುತ್ತೆ ಎಂದು ಕೇಳಬೇಕಿದೆ.. ನಟಿ ರಮ್ಯಳಿಗೆ ಅಶ್ಲೀಲ ಮೆಸೇಜ್ ಪ್ರಕರಣದಲ್ಲಿ ಸುಮೋಟೊ ಪ್ರಕರಣ ದಾಖಲಾಗಿತ್ತು. ಇಂತಹ ಪ್ರಕರಣದಲ್ಲಿ ಸುಮೋಟೊ‌ ಪ್ರಕರಣ ಮಾಡಿಕೊಳ್ಳಲು ಏನು ದಾಡಿ?  ಎಂದು ಪ್ರಶ್ನಿಸಿದ ಮಾಜಿಗೃಹ ಸಚಿವ ಸಾವರ್ಕರ್ ಡಿಪಿ ಹಾಕಿಕೊಂಡವನಿಗೆ ಬೆದರಿಕೆ ಹಾಕಿದ ಪ್ರಕರಣದ ಬಗ್ಗೆ ಎಸ್ಪಿ ಬಳಿ ಮಾತನಾಡಿದ್ದೇನೆ ಎಂದರು. 

Savarkar photo if he gets DP

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close