ಎರಡು ಪ್ರತ್ಯೇಕ ದರೋಡೆ ಪ್ರಕರಣ ಭುವನೇಶ್ವರ್, ಸ್ಯಾಡೋ ಸಚಿನ್ ಅರೆಸ್ಟ್- Two separate robbery cases

 SUDDILIVE || SHIVAMOGGA

ಎರಡು ಪ್ರತ್ಯೇಕ ದರೋಡೆ ಪ್ರಕರಣ ಭುವನೇಶ್ವರ್, ಸ್ಯಾಡೋ ಸಚಿನ್ ಅರೆಸ್ಟ್-Two separate robbery cases in Bhubaneswar, Shadow Sachin arrested

Robbery, case

ಎರಡು ಪ್ರತ್ಯೇಕ ದರೋಡೆ ಪ್ರಕರಣದ ಆರೋಪಿಗಳನ್ನ ವಿನೋಬ ನಗರ ಪಿಐ ಸಂತೋಷ್ ಕುಮಾರ್ ನೇತೃತ್ವದಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಿ ಬಂಗಾರದ ಒಡವೆಗಳನ್ನ ವಶಪಡಿಸಿಕೊಂಡಿದ್ದಾರೆ. 

ದಿನಾಂಕ 14/10/2025 ರಂದು ಬೆಳಗ್ಗೆ 4-00 ಗಂಟೆಯ ಸಮಯದಲ್ಲಿ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ನವುಲೆ ಶಿವಬಸವನಗರ ಕ್ರಾಸ್ ನ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡು ಬರುವಾಗ, ಯಾರೋ ಒಬ್ಬ ಅಪರಿಚಿತ ವ್ಯಕ್ತಿಯು ಬೈಕ್ ನಲ್ಲಿ ಬಂದು ಅವರನ್ನು ಅಡ್ಡಹಾಕಿ ಕೈಯಲ್ಲಿದ್ದ ಬಂಗಾರದ ಉಂಗುರ ಮತ್ತು ನಗದು ಹಣವನ್ನು ಕಿತ್ತುಕೊಂಡು ಅವರನ್ನು ತಳ್ಳಿ, ಬೈಕ್ ತೆಗೆದುಕೊಂಡು ಹೋಗಿರುವ ಬಗ್ಗೆ ನೀಡಿದ ಮೇರೆಗೆ ವಿನೋಬನಗರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿತ್ತು. 

ಹಾಗೆಯೇ ದಿನಾಂಕ: 25/10/2025 ರಂದು ಬೆಳಗ್ಗೆ 08-00 ಗಂಟೆಯ ಸಮಯದಲ್ಲಿ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಲ್ಕೊಳ ಮಂಗಳ ಮಂದಿರ ರಸ್ತೆಯಲ್ಲಿರುವ ಕಾಳಿಕಾಂಭದೇವಸ್ಥಾನದ ಪಕ್ಕದ ವಾಸದ ಮನೆಯ ಮುಂದೆ ಮಹಿಳೆಯು ರಂಗೋಲಿ ಹಾಕುವ ಸಮಯದಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತ ವೈಕ್ತಿಯು ಬಾಡಿಗೆ ಮನೆ ಇದೆಯಾ ಅಂತ ಕೇಳುವ ನೆಪದಲ್ಲಿ ಬಂದು ತದ ನಂತರ ನೀರು ಕೇಳಿ ಕುಡಿದು, ಲೋಟ ಕೊಡುವಾಗ ಮಹಿಳೆಯ ಕೊರಳಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ತಳ್ಳಿ ಬೈಕ್ ತೆಗೆದುಕೊಂಡು ಹೋಗಿರುತ್ತಾರೆಂದು ನೀಡಿದ ಮೇರೆಗೆ ಅದೇ ಠಾಣೆಯಲ್ಲಿ ದೂರು ದಾಖಲಾಗಿದೆ. 

ಈ ಎರಡೂ ಪ್ರಕರಣದಲ್ಲಿ ಕಳುವಾದ ಮಾಲು, ನಗದು ಹಾಗೂ ಆರೋಪಿತರನ್ನು ಪತ್ತೆ ಮಾಡಲು ಶ್ರೀ ಮಿಥುನ್ ಕುಮಾರ್ ಜಿ.ಕೆ ಐ.ಪಿ.ಎಸ್. ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಶ್ರೀ ಕಾರಿಯಪ್ಪ, ಎ.ಜಿ ಕೆ.ಎಸ್.ಪಿ.ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಶ್ರೀ ರಮೇಶ್ ಕೆ.ಎಸ್.ಪಿ.ಎಸ್ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-02 ಶಿವಮೊಗ್ಗ ಜಿಲ್ಲೆ ಶಿವಮೊಗ್ಗ, ಶ್ರೀ ಸಂಜೀವ್ ಕುಮಾರ್ ಟಿ ಡಿ.ವೈ.ಎಸ್.ಪಿ ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪ ವಿಭಾಗ-ಬಿ ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ, ಶ್ರೀ ಸಂತೋಷಕುಮಾರ್ ಡಿ.ಕೆ ಪೊಲೀಸ್ ನೀರಿಕ್ಷಕರು ವಿನೋಬನಗರ ಪೊಲೀಸ್ ಠಾಣೆ ರವರ ಉಸ್ತುವಾರಿಯಲ್ಲಿ ಶ್ರೀ ತಿರುಮಲೇಶ್ ಜಿ ಪಿಎಸ್‌ಐ ಮತ್ತು ಸಿಬ್ಬಂದಿಗಳಾದ ಶ್ರೀ ರಾಜು ಕೆ ಆರ್ ಸಿಪಿಸಿ 1074. ಶ್ರೀ ಮನುಶಂಕರ ಸಿಪಿಸಿ 1556, ಶ್ರೀ ಮಲ್ಲಪ್ಪ ಎಸ್ ಜಿ ಸಿಪಿಸಿ 1174, ಅರುಣಕುಮಾರ್ ಎನ್ ಕೆ ಸಿಪಿಸಿ 1543 ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

ತನಿಖಾ ತಂಡವು ಅ.14 ರಂದು ಆರೋಪಿತನಾದ ಸಚಿನ್ ಶಾಡೋ ಬಿನ್ ಶ್ರೀನಿವಾಸ್ (27) ಈತನನ್ನು ದಿನಾಂಕ 25/10/2025 ರಂದು ವಶಕ್ಕೆ ಪಡೆದುಕೊಂಡು ಆರೋಪಿತನ ಕಡೆಯಿಂದ 7.90 ಗ್ರಾಂ ತೂಕದ ಬಂಗಾರದ ಸರ ಅದರ ಬೆಲೆ 55,000/- ರೂ ಗಳು, ಮತ್ತು ಕೃತ್ಯಕ್ಕೆ ಉಪಯೋಗಿಸಿದ ಕೆಎ 14 ಐ.ಎಂ 1490 ನೊಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ಬೈಕ್ ಅದರ ಬೆಲೆ 60,000/- ರೂ ಗಳು ಇವುಗಳನ್ನು ವಶಪಡಿಸಿ ಕೊಳ್ಳಲಾಗಿರುತ್ತದೆ.

ಮತ್ತೊಂದು ಪ್ರಕರಣದಲ್ಲಿ ಆರೋಪಿತನಾದ ಭುವನೇಶ್ವರ @ ಭುವನ, 26 ವರ್ಷ, ಎಂ.ಬಿ.ಎಸ್ ಲೇ ಔಟ್, ಬೊಮ್ಮನಕಟ್ಟೆ ಶಿವಮೊಗ್ಗ ಟೌನ್ ಸ್ವಂತ ವಿಳಾಸ ಸ್ವಾಮಿ ವಿವೇಕಾನಂದ ರಸ್ತೆ, ಹೊಸಮನೆ ಶಿವಮೊಗ್ಗ ಟೌನ್ ಈತನನ್ನು ದಿನಾಂಕ 01/11/2025 ರಂದು ವಶಕ್ಕೆ ಪಡೆದುಕೊಂಡು ಆರೋಪಿತನ ಕಡೆಯಿಂದ 13 ಗ್ರಾಂ ತೂಕದ ಬಂಗಾರದ ಸರ ಮತ್ತು ಗುಂಡುಗಳು ಅದರ ಬೆಲೆ 1,30,000/- ರೂ ಗಳು, ಮತ್ತು ಕೃತ್ಯಕ್ಕೆ ಉಪಯೋಗಿಸಿದ ಕೆಎ 27 ಈ ಎಫ್ 5698 ನೊಂದಣಿ ಸಂಖ್ಯೆಯ ಸ್ಟೆಂಡರ್ ಪ್ಲಸ್ ಬೈಕ್ ಅದರ ಬೆಲೆ 30,000/- ರೂ ಗಳು ಇವುಗಳನ್ನು ವಶಪಡಿಸಿ ಕೊಳ್ಳಲಾಗಿರುತ್ತದೆ. ಒಟ್ಟು ಅಂದಾಜು ಮೌಲ್ಯ 1,60,000/- ರೂ ಗಳಾಗಿರುತ್ತವೆ.

Two separate robbery cases

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close