ನಟ ಕಿಚ್ಚ ಸುದೀಪ್ ಗೆ ಧೂಪ ಹಾಗೂ ಓಲ್ಡ್ ಮಂಕ್ ರಮ್ಮಿನ ಅಭಿಷೇಕ- Actor Kiccha Sudeep receives Old Monk liquor anointing

SUDDILIVE || SHIVAMOGGA

ನಟ ಕಿಚ್ಚ ಸುದೀಪ್ ಗೆ ಧೂಪ ಹಾಗೂ ಓಲ್ಡ್ ಮಂಕ್ ರಮ್ಮಿನ ಅಭಿಷೇಕ-Actor Kiccha Sudeep receives Old Monk liquor anointing

Anointing, sudeep


ಶಿವಮೊಗ್ಗದಲ್ಲಿ ಮಾರ್ಕ್ ಅಬ್ಬರಿಸುತ್ತಿದೆ. ಕಿಚ್ಚ ಸುದೀಪ್ ಅಭಿಮಾನಿಗಳು ಸಹ ನೆಚ್ಚಿನ ನಟನ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದು ಶಿವಮೊಗ್ಗದ ಮಲ್ಲಿಕಾರ್ಜುನ ಚಲನಚಿತ್ರ ಮಂದಿರದಲ್ಲಿ ಫ್ಯಾನ್ ಶೋ ಬೆಳಿಗ್ಗೆನೆ ವೀಕ್ಷಿಸಿದ್ದಾರೆ. 

ಬೆಳಿಗ್ಗೆ 6-30 ಕ್ಕೆ ಮಲ್ಲಿಕಾರ್ಜುನ ಚಲನ ಚಿತ್ರ ಮಂದಿರದಲ್ಲಿ ಸುದೀಪ್ ಚಿತ್ರವಿರುವ ಬಾವುಟ, ಫೊಟೊ, ಮೊಮೆಂಟೋ, ತಮಟೆ ಹಿಡಿದುಕೊಂಡು ಬಂದ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಸಿನಿಮಾ ಆರಂಭಕ್ಕೂ ಮೊದಲು ಕಟೌಟ್ ಗೆ ಅಭಿಷೇಕ ಮಾಡಿ ಪಟಾಕಿ ಸಿಡಿಸಲಾಗಿದೆ. ಪೇಪರ್ ಬ್ಲಾಸ್ಟ್ ಗಳು ಚಿತ್ರ ಮಂದಿರದಲ್ಲಿ ನಿಷೇಧವಿದ್ದರೂ ಪೇಪರ್ ಉಂಡೆ ಮಾಡಿ ಪರದೆ ಮೇಲೆ ಬರುವ ನಟ ಸುದೀಪ್ ಗೆ ತೂರುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಕೆಲವರಂತೂ ಎದೆಯ ಮೇಲೆ ಕಿಚ್ಚ ಸುದೀಪ್ ಚಿತ್ರ ಬಿಡಿಸಿಕೊಂಡು ಬಂದು ಸಿನಿಮಾ ನೋಡಿರುವುದು ವಿಶೇಷವಾಗಿದೆ. ಚಲನಚಿತ್ರ ಮಂದಿರದಲ್ಲಿ ಪೇಪರ್ ಉಂಡೆಗಳ ರಾಶಿ ರಾಶಿ ಬಿದ್ದಿದೆ. 



ಕಿಚ್ಚನಿಗೆ ಓಲ್ಡ್ ಮಂಕ್ ಅಭಿಷೇಕ



ನಟ ಕಿಚ್ಚ ಸುದೀಪ್ ಗೆ ಚಲನ ಚಿತ್ರ ಮುಗಿಸಿಕೊಂಡು ಬಂದ ಅಭಿಮಾನಿಗಳು ಕಿಚ್ಚನ ಗೂಡು ವೇದಿಕೆಯ ಮೊಮೆಂಟೋದಲ್ಲಿರುವ ಸುದೀಪ್ ಭಾವಚಿತ್ರಕ್ಕೆ ಓಲ್ಡ್ ಮಂಕ್ ರಮ್ಮ್ ನ್ನ ಸುರಿಯುವ ಮೂಲಕ ಅಭಿಮಾನ‌ಮೆರೆದಿದ್ದಾರೆ. ಚಿತ್ರ ಆರಂಭಕ್ಕೂ ಮುನ್ನ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿದರೆ ಚಿತ್ರ ಮುಗಿದ ನಂತರ ಓಲ್ಡ್ ಮಂಕ್ ಅಭಿಷೇಕ ಮಾಡಲಾಗಿದೆ. ಇದು ಒಳ್ಳೆಯದೊ ಕೆಟ್ಟದ್ದು ಎಂಬುವುದಕ್ಕಿಂತ ಅಭಿಮಾನ ಮೆರೆದಿರುವುದು ಹೆಚ್ಚಿನ ವಿಷಯವಾಗಿದೆ. 

ಅದರಂತೆ ರಮ್ಮ್ ನ್ನ ಸುರಿದು ದೇವರಿಗೆ ಧೂಪ ಹಾಕಿದ ರೀತಿಯಲ್ಲಿ ಆರ್ ಎಸ್ 100 ದ್ವಿಚಕ್ರ ವಾಹದ ಸೈಲನ್ಸರ್ ನಿಂದ ಬರುವ ಹೊಗೆಯಿಂದ ಧೂಪ ಹಾಕಲಾಗಿದೆ. ಒಟ್ಟಿನಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗಾಗಿ ಅಭಿಮಾನ ಮೆರೆದಿದ್ದಾರೆ. 

Actor Kiccha Sudeep receives Old Monk liquor anointing

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close