ಯುವಕನ ಮೇಲೆ ಲಾಂಗ್ ನಿಂದ ಹಲ್ಲೆಯಾಗಿದ್ದು ಹುಡುಗಿ ಫೊಟೊ ಸ್ಟೇಟಸ್ ಹಾಕಿದ್ದಕ್ಕಾ? ಚುಡಾಯಿಸಿದ್ದಕ್ಕಾ?A young man was attacked with a long

 SUDDILIVE || BHADRAVATHI

ಯುವಕನ ಮೇಲೆ ಲಾಂಗ್ ನಿಂದ ಹಲ್ಲೆಯಾಗಿದ್ದು ಹುಡುಗಿ ಫೊಟೊ ಸ್ಟೇಟಸ್ ಹಾಕಿದ್ದಕ್ಕಾ? ಚುಡಾಯಿಸಿದ್ದಕ್ಕಾ?A young man was attacked with a long, because a girl posted a photo of him in her status? Was it because she teased him?

Attack, long


ಏರಿಯಾ ಹುಡುಗಿಯನ್ನ ಚುಡಾಯಿಸಿದ್ದಕ್ಕೆ ಇಬ್ಬರ ಯುವಕರ ಮೇಲೆ ಲಾಂಗ್ ನಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ. ಎಫ್ಐಆರ್ ಪ್ರಕಾರ ಫಾರನ್ ಮತ್ತು ಇಮ್ರಾನ್ ಮೇಲೆ ಲಾಂಗ್ ಮೂಲಕ ದಾಳಿ ನಡೆದಿದ್ದು ಫರಾನ್ ನ ಕೈ ತೀವ್ರ ಗಾಯವಾಗಿದೆ. 

ಫರಾನ್ (22) ಮತ್ತು ಮೊಹಮದ್ ಇಮ್ರಾನ್(18) ಇಬ್ಬರೂ ಅರಳಹಳ್ಳಿ ಗ್ರಾಮದ ಯುವಕರಾಗಿದ್ದಾರೆ. ಇಬ್ಬರದ್ದೂ ವೆಲ್ಡಿಂಗ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. 15 ದಿನಗಳ ಹಿಂದೆ ಅಪ್ರಾಪ್ತ ಯುವತಿಯ ಫೊಟೊವನ್ನ ಸ್ಟೇಟಸ್ ಗೆ ಫರಾನ್ ಹಾಕಿಕೊಂಡಿದ್ದ. ಪ್ರೀತಿಯ ವಿಚಾರದಲ್ಲಿ ಆತ ಸ್ಟೇಟಸ್ ಗೆ ಹಾಕಿಕೊಂಡಿದ್ದ ಎಂಬ ವಿಷಯ ಗಲಾಟೆಗೆ ಕಾರಣವಾಗಿತ್ತು. 


ಈ ವಿಚಾರ ಗ್ರಾಮಾಂತರ ಪೊಲೀಸ್ ಠಾಣೆಯ ಹೊರಗೆ ತೀರ್ಮಾನವೂ ಆಗಿತ್ತು. ಆದರೆ ಡಿ.27 ರಂದು ಫರಾನ್ ಮತ್ತು ಇಮ್ರಾನ್ ಇಬ್ಬರು ಅರಸೀಕೆರೆಯಲ್ಲಿ ವೆಲ್ಡಿಂಗ್ ಮುಗಿಸಿಕೊಂಡು ಅರಳಹಳ್ಳಿ ಗ್ರಾಮದಲ್ಲಿ ಜಬಿ ಟೀ ಸ್ಟಾಲ್ ಗೆ ಟೀ ಕುಡಿಯಲು ಹೋದಾಗ ಫೈರೋಜ್, ಅಯೂಬ್ ಮತ್ತು ನೂರ್ ಎಂಬುವರು ಲಾಂಗ್ ನಿಂದ ಅಟ್ಯಾಕ್ ಮಾಡಿದ್ದಾರೆ. 

ಲಾಂಗ್ ನಿಂದ ಅಟ್ಯಾಕ್ ಮಾಡಿದ್ದಕ್ಕೆ ಫರಾನ್ ಕೈ ತೀವ್ರ ಗಾಯವಾಗಿದೆ. ಈಗ ಆತನ ತಾಯಿ ಕಣ್ಣೀರು ಇಟ್ಟಿದ್ದಾಳೆ. ಮೂವರು ಮಕ್ಕಳಿದ್ದು ಮೂವರಲ್ಲಿ ಫರಾನ್ ಒಬ್ಬನೇ ದುಡಿಯುತ್ತಿದ್ದಾನೆ. ಯಾರೋ ಫೇಕ್ ಐಡಿ ನಿರ್ಮಿಸಿ ಆತನ ಐಡಿಯಲ್ಲಿ ಅಪ್ರಾಪ್ತ ಬಾಲಕಿಯ ಫೊಟೊ ಇರುವ ಫೊಟೊವನ್ನ ಸ್ಟೇಟಸ್ ಗೆ ಹಾಕಲಾಗಿದೆ ಎಂದು ದೂರಿದ್ದಾರೆ. ಆದರೆ ಎಫ್ಐಆರ್ ನಲ್ಲಿ ಫರಾನ್ ಹುಡುಗಿಯರನ್ನ ಚೇಡಿಸಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂದು ದೂರಿದ್ದಾರೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

A young man was attacked with a long     

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close