ಭದ್ರಾವತಿ-ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ರೂಲ್ಸ್, ಹೊಸವರ್ಷದಿಂದ ಜಾರಿಯಾಗಲಿದೆಯಾ?Bhadravati - Will new rules for traffic control be implemented from the new year?

SUDDILIVE || BHADRAVATHI

ಭದ್ರಾವತಿ-ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ರೂಲ್ಸ್, ಹೊಸವರ್ಷದಿಂದ ಜಾರಿಯಾಗಲಿದೆಯಾ?Bhadravati - Will new rules for traffic control be implemented from the new year?

Bhadravathi, traffic

Bhadravathi, traffic


ಭದ್ರಾವತಿ ಉಪ-ವಿಭಾಗ, ಭದ್ರಾವತಿ ನಗರ ವೃತ್ತ ಮತ್ತು ಭದ್ರಾವತಿ ಸಂಚಾರ ಪೊಲೀಸ್ ಠಾಣೆಯವರಿಂದ ಪ್ರಕಟಣೆ ಹೊರಡಿಸಲಾಗಿದೆ. ಭದ್ರಾವತಿ ನಗರ ವ್ಯಾಪ್ತಿಯಲ್ಲಿ, ಸಂಚಾರ ದಟ್ಟಣೆಯಿಂದ ಅಪಘಾತ ಗಳಾಗುವುದನ್ನು ತಪ್ಪಿಸಿ, ವಾಹನಗಳು ಮತ್ತು  ಸಾರ್ವಜನಿಕರಿಗೆ ಸುಗಮ ಸಂಚಾರ  ಕಲ್ಪಿಸುವ ನಿಟ್ಟಿನಲ್ಲಿ ಈ ಕೆಳಕಂಡ  ಸಂಚಾರಿ ನಿಯಮಗಳನ್ನು  ಮಾಡಲಾಗಿದೆ. 

1. ಅಂಡರ್ ಬ್ರಿಡ್ಜ್ ನಿಂದ ksrtc bus stand ವರೆಗೆ ನೋ ಪಾರ್ಕಿಂಗ್.  

2. ಅಂಡರ್ ಬ್ರಿಡ್ಜ್ ನಿಂದ ಭದ್ರ ವೈನ್ ಸ್ಟೋರ್ ಹಾಗೂ ಅಂಡರ್ ಬ್ರಿಡ್ಜ ನಿಂದ ಪಾಕಿಜ ಚಿಕನ್ ಸೆಂಟರ್‌ ವರೆಗೆ ನೋ ಪಾರ್ಕಿಂಗ್. 

3. ನ್ಯಾಯಾಲಯದ ಸಂಕಿರ್ಣದ ಮುಂದಿನ  ರಸ್ತೆಯ ಎರಡೂ ಬದಿಗಳಲ್ಲಿ ನೋ ಪಾರ್ಕಿಂಗ್.

4. ರಂಗಪ್ಪ ಸರ್ಕಲ್ ನಿಂದ ಹೊಳೆಹೊನ್ನೂರ್ ಸರ್ಕಲ್ ವರಗೆ ದಿನ ಬಿಟ್ಟ ದಿನ ಪಾರ್ಕಿಂಗ್,

5. ರಂಗಪ್ಪ ಸರ್ಕಲ್ ನಿಂದ  ಹೊಸಮನೆ ಪೊಲೀಸ ಠಾಣೆ ವರೆಗೆ ದಿನ  ಬಿಟ್ಟು ದಿನ ಪಾರ್ಕಿಂಗ್.

6. ಮಾಧವಚಾರ ಸರ್ಕಲ್ ನಿಂದ  ಹಾಸ್ಪಿಟಲ್ ಕ್ರಾಸ್ ವರಗೆ ದಿನ ಬಿಟ್ಟು ದಿನ ಪಾರ್ಕಿಂಗ್.

7. ಸರ್ಕಾರಿ ಹಾಸ್ಪಿಟಲ್ ಕ್ರಾಸ್ ನಿಂದ ಸರ್ಕಾರಿ ಹಾಸ್ಪಿಟಲ್ ಮುಂಭಾಗದವರೆಗೆ ನೋ ಪಾರ್ಕಿಂಗ್.

ದ್ವಿ-ಚಕ್ರ ವಾಹನ ಸವಾರ ಮತ್ತು ಹಿಂಬದಿ ಸವಾರ ಇಬ್ಬರೂ ಹೆಲ್ಮೆಟ್ ಧರಿಸುವುದನ್ನು ಮತ್ತು ನಾಲ್ಕು ಚಕ್ರ ವಾಹನ ಸವಾರರು Seat Belt ಧರಿಸುವುದು ಕಡ್ಡಾಯವಾಗಿದೆ. ಸಂಚಾರ ನಿಯಮಗಳ ಉಲ್ಲಂಘನೆ ಮಾಡುವ ವಾಹನ ಸವಾರರು ಕಂಡು ಬಂದಲ್ಲಿ GPS Camera  ಮೂಲಕ  ಫೋಟೊ ಸೆರೆಹಿಡಿದು ITMS ( Intelligent Traffic Management System) ಮೂಲಕ IMV Act ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು.

Bhadravati - Will new rules for traffic control be implemented from the new year?


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close