ಎಎ ವೃತ್ತದ ಬಳಿ ಯುವಕನಿಗೆ ಚಾಕು ಇರಿತ- A young man was stabbed near AA Circle

 SUDDILIVE || SHIVAMOGGA

ಎಎ ವೃತ್ತದ ಬಳಿ ಯುವಕನಿಗೆ ಚಾಕು ಇರಿತ- A young man was stabbed near AA Circle  

Stabbed, circle


ನಗರದ ಅಮೀರ್ ಅಹಮದ್ ಸರ್ಕಲ್ ನಲ್ಲಿ ಯುವಕನೋರ್ವನಿಗೆ ಚಾಕುವಿನಿಂದ ಇರಿದಿರುವ ಘಟನೆ ವರದಿಯಾಗಿದೆ. ಹಳೆಯ ದ್ವೇಷದ ಹಿನ್ನಲೆಯಲ್ಲಿ ಚಾಕು ಇರಿಯಲಾಗಿದೆ

ಸಯ್ಯದ್ ಭರ್ಕತ್ (32)ಎಂಬ ಮೊಬೈಲ್ ಅಂಗಡಿಯ ಯುವಕನಿಗೆ ಚಾಕುವಿನಿಂದ ಇರಿಯಲಾಗಿದ್ದು ಆತನನ್ನ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮೊಬೈಲ್ ಅಂಗಡಿಯನ್ನ ಸಯ್ಯದ್ ಭರ್ಕತ್ ಮತ್ತು ಅವರ ಸಹೋದರ ವಾಸೀಂ ನಡೆಸಿತ್ತಿದ್ದರು ಎನ್ನಲಾಗಿದೆ. 


ಮಿಸ್ ಆಗಿ ಬಿತ್ತಾ ?



ಯಸೀನ್ ಖುರೇಶಿಯ ಹುಡುಗರೆಂದು ತಿಳಿದು ಅವರ ಅಣ್ಣ ವಸೀಮ್ ನಿಗೆ ಚಾಕು ಹಾಕಲು ಬಂದ ಯುವಕರು ಆತನ ಸಹೋದರ ಸಯ್ಯದ್ ಬರ್ಕತ್ ಗೆ ಚಾಕು ಇರಿದಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಅಮೀರ್ ಅಹಮದ್ ಸರ್ಕಲ್ ಬಳಿ ಎಸ್ ಎಸ್ ಕಲೆಕ್ಷನ್ ಮೊಬೈಲ್ ಅಂಗಡಿಯಲ್ಲಿದ್ದಾಗ ಬೈಕ್ ನಲ್ಲಿ ಬಂದ ಮೂವರಿಂದ ಚಾಕುವಿನಿಂದ ಇರಿಯಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಇದು ಹಳೆಯ ಗ್ಯಾಂಗ್ ವಾರಾ ಅಥವಾ ಇತರೆಯವರು ಬಂದು ಇರಿಯಲಾಗಿದೆಯಾ ಎಂಬುದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ. ಭರ್ಕತ್ ಗೆ ಮೂರು ಕಡೆ ಚಾಕುವಿನಿಂದ ಇರಿಯಲಾಗಿದ್ದು  ಕೈಗೂ ಸಹ ಗಾಯಗಳಾಗಿವೆ. ಈ ಪ್ರಕರಣದಲ್ಲಿ ಓರ್ವ ಪತ್ತೆಯಾಗಿದ್ದಾನೆ

A young man was stabbed near AA Circle

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close