ಬರ್ಕತ್ ಗೆ ಚಾಕು ಇರಿದ ಮೂವರು ಆರೋಪಿಗಳ ಬಂಧನ-Three accused arrested for stabbing Barkat

SUDDILIVE || SHIVAMOGGA

ಬರ್ಕತ್ ಗೆ ಚಾಕು ಇರಿದ ಮೂವರು ಆರೋಪಿಗಳ ಬಂಧನ-Three accused arrested for stabbing Barkat   

Stabbing, barkath


ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಹೆಚ್ ರಸ್ತೆಯಲ್ಲಿರುವ ಎಸ್‌ಎಎಸ್ ಕಲೆಕ್ಷನ್ ಮೊಬೈಲ್ ಶಾಪ್ನಲ್ಲಿ ಪರಿಚಿತ ವ್ಯಕ್ತಿಗಳಿಂದ ಚಾಕುವಿನಿಂದ ಇರಿದ ಘಟನೆ ನಡೆದಿದೆ ಎಂದು ಎಸ್ಪಿ ಮಿಥುನ್ ಕುಮಾರ್  ಮಾಹಿತಿ ನೀಡಿದ್ದಾರೆ. 

ಘಟನೆಯಲ್ಲಿ ಗಾಯಗೊಂಡಿರುವ ಸೈಯದ್ ಬರ್ಕತ್ (32 ವರ್ಷ) ಮೊಬೈಲ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಪರಿಚಿತ ವ್ಯಕ್ತಿಗಳಿಂದ ಚಾಕು ಇರಿದಿರುವುದಾಗಿ ತಿಳಿದು ಬಂದಿದೆ. 

ಪೊಲೀಸರು ಆರೋಪಿಗಳಾಗಿ ಮೊಹಮ್ಮದ್ ಶಹಬಾಜ್ (22 ವರ್ಷ) ಹಾಗೂ ಆಕಾಶ್ (20 ವರ್ಷ) ಎಂಬುವರನ್ನ ಬಂಧಿಸಲಾಗಿದೆ.  ಇರಿತಕ್ಕೆ ಬಳಸಿದ ಚಾಕುವನ್ನು ದಾದಾಪೀರ್ ಎಂಬ ವ್ಯಕ್ತಿ ಒದಗಿಸಿದ್ದಾನೆ ಎಂದು ಎಸ್ಪಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

ಘಟನೆಗೆ ಕಾರಣ ವೈಯಕ್ತಿಕ ವೈಷಮ್ಯವಾಗಿದ್ದು, ಆರೋಪಿಗಳು ಮತ್ತು ಗಾಯಾಳು ಪರಸ್ಪರ ಪರಿಚಿತರಾಗಿದ್ದಾರೆ. ಈ ಘಟನೆಯಲ್ಲಿ ಗಾಯಾಳುವಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಪ್ರಾಣಾಪಾಯವಿಲ್ಲ ಎಂದು ತಿಳಿದು ಬಂದಿದೆ.

Three accused arrested for stabbing Barkat

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close