KSRTC ಬಸ್ ಮತ್ತು ಬೈಕ್ ನಡುವೆ ಅಪಘಾತ, ಪ್ರಾಣಾಪಾಯದಿಂದ ಬೈಕ್ ಸವಾರ ಪಾರು-Accident between KSRTC bus and bike, biker escaped with life

 SUDDILIVE || SHIVAMOGGA

KSRTC ಬಸ್ ಮತ್ತು ಬೈಕ್ ನಡುವೆ ಅಪಘಾತ, ಪ್ರಾಣಾಪಾಯದಿಂದ ಬೈಕ್ ಸವಾರ ಪಾರು-Accident between KSRTC bus and bike, biker escaped with life

Accident, KSRTC


ಶಿವಮೊಗ್ಗದ ಪೆಸಿಟ್ ಕಾಲೇಜಿನ ಬಳಿ KSRTC ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಸಿರಿಗೆರೆ ಮೂಲದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ವರದಿಯಾಗಿದೆ. 

ಇಂದು ಮಧ್ಯಾಹ್ನದದ ವೇಳೆಯಲ್ಲಿ ಸುಮಾರು 8-10 ರಸ್ತೆ ಅಪಘಾತ ಪ್ರಕರಣಗಳು ನಗರದಲ್ಲಿ ನಡೆದಿದ್ದು ಬಹುತೇಕ ನಗರ ವ್ಯಾಪ್ತಿಯಲ್ಲೇ ನಡೆದಿವೆ. ಕೆಲವೊಂದು ಪ್ರಕರಣಗಳು ಇತರೆ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಆದರೆ ಕೆಲವು ಪ್ರಕರಣಗಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 


ಸಂಜೆ 4-30 ರ ಸಮಯದಲ್ಲಿ ಪೆಸಿಟ್ ಕಾಲೇಜಿನ ಬಳಿ ಶಿವಮೊಗ್ಗದಿಂದ ಸಾಗರ ರಸ್ತೆಯ ಕಡೆ ಹೊರಟಿದ್ದ KSRTC ಬಸ್ ಗೆ ಬೈಕ್ ಡಿಕ್ಕಿಯಾಗಿದೆ. ಬೈಕ್ ಬಸ್ ಅಡಿ ಸಿಲುಕಿಕೊಂಡಿದೆ. ಬಸ್ ಸಹ ಡಿವೈಡರ್ ಗೆ ಡಿಕ್ಕಿಹೋಡೆದು ನಿಂತಿದೆ.  ಬೈಕ್ ಸವಾರ ಬೈಕ್ ಬಿಟ್ಟು ಹಾರಿದ ಪರಿಣಾಮ ಪ್ರಾಣಾಪಾಯದಿಂದ ಆತ ಪಾರಾಗಿದ್ದಾನೆ. 

ಆತನ ಬಗ್ಗೆ ಇನ್ನೂ ಏನೂ ಮಾಹಿತಿ ತಿಳಿದುಬಂದಿಲ್ಲ. ಗಾಯಗೊಂಡಿರುವ ಸಿರಿಗೆರೆಯ ವ್ಯಕ್ತಿ ಮೆಗ್ಗಾನ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ರೆಫರ್ ಆಗಿದೆ. ಘಟನೆ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

Accident between KSRTC bus and bike, biker escaped with life


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close