ಅಬ್ಬರಿಸಿದ ಮಾರ್ಕ್, ಅಭಿಮಾನಿಗಳು ಫುಲ್ ಕುಶ್, ಸಾಮಾನ್ಯ ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎಂಬುದು ಕುತೂಹಲ-Mark is ecstatic

 SUDDILIVE || SHIVAMOGGA

ಅಬ್ಬರಿಸಿದ ಮಾರ್ಕ್, ಅಭಿಮಾನಿಗಳು ಫುಲ್ ಕುಶ್, ಸಾಮಾನ್ಯ ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎಂಬುದು ಕುತೂಹಲ-Mark is ecstatic, fans are ecstatic, curious to see how the general audience will receive it

Mark, ecstatic


ಡೆವಿಲ್ ಸಿನಿಮಾ ರೀತಿಯಲ್ಲಿಯೇ ಸಿಎಂ ಕುರ್ಚಿಯ ಕದನದ ರೀತಿಯಲ್ಲೇ ಮಾರ್ಕ್ ಸಿನಿಮಾ ನಡೆದರೂ ಮಾಸ್ ಸಿನಿಮಾದ ರೀತಿಯಲ್ಲಿ ತೆಗೆಯಲಾಗಿದೆ.  ರಾಜಕೀಯ ಬೆಳವಣಿಗೆ, ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಗನ ಅಧಿಕಾರದ ದಾಹದ ಜೊತೆಗೆ ಸಾಗುವ ಸಿನಿಮಾ ಆರಂಭವಾಗುವುದೇ ಡ್ರಗ್ಸ್, ಮಕ್ಕಳ ಟ್ರಾಫಿಕ್ ನಂತಹ ಜಾಲದ ತುಣುಕಿನಿಂದ ಆರಂಭಗೊಳ್ಳುತ್ತದೆ. 

ದಾದಾ ಯಾರುಗೊತ್ತ, ಮಸ್ತ್ ಮಲೈಕಾ, ಆದಿಶಕ್ತಿಯ ಮುಂದಿನ ಹಾಡುಗಳು ಅಭಿಮಾನಿಗಳಲ್ಲಿ ಕಿಚ್ಚು ಎಬ್ಬಿಸಿದೆ. ಪೊಲೀಸ್ ಠಾಣೆಯಲ್ಲಿ ಪೊಲಿಸರು 2000 ಕೋಟಿ ರೂ ಡ್ರಗ್ಸ್ ಮಾಲನ್ನ ಹಿಡಿದಿಟ್ಟುಕೊಳ್ಳುವುದನ್ನ ಕ್ರಿಮಿನಲ್ ಬ್ಯಾಕ್ ರೌಂಡ್ ಗ್ಯಾಂಗ್ ವಶಕ್ಕೆ ಪಡೆದುಕೊಳ್ಳುವ ಯತ್ನ ನಡೆಸುತ್ತದೆ. ಈ ವೇಳೆ ಸಿನಿಮಾದ ನಾಯಕ ನಟ ಸುದೀಪ್ ಎಂಟ್ರಿ ಜೋರಾಗಿಯೇ ತೋರಿಸಲಾಗಿದೆ. 

ನಿಗದಿತ ಸಮಯದಲ್ಲಿ ಕೂಡುಹಾಕಿದ ಮಕ್ಕಳನ್ನ ರಕ್ಷಿಸುವುದು, ಕತ್ತಲಿನ ಜಗತ್ತಿನ ಸುತ್ತಮುತ್ತಲಿನ ಸಿನಿಮಾದಲ್ಲಿ ಎಲ್ಲವೂ ರಕ್ತಸಿಕ್ತ ಸೀನುಗಳು ಹೆಚ್ಚು. ಮ್ಯಾಕ್ಸ್ ನ ಫ್ರೀಕ್ವೆಲ್ ಸಿನಿಮಾ ಮಾರ್ಕ್ ಆಗಿದೆಯಾ ಎಂಬ ಅನುಮಾನಗಳು ಸಿನಿಮಾ ನೋಡುಗನಿಗೆ ಅನಿಸುತ್ತದೆ. ಮ್ಯಾಕ್ಸ್ ಗುಂಗಲ್ಲೇ ನಿರ್ದೇಶ ವಿಜಯ ಕಾರ್ತಿಕೇಯ ಇದ್ದಂಗೆ ಕಾಣಿಸುತ್ತಾರೆ. ನೈಟ್ ವಿಷನ್ ಸಿನಿಮಾದಲ್ಲಿ ಹೆಚ್ಚು ತೋರಿಸಲಾಗಿದೆ.

ಆದಿಕೇಶವ ( ಶೈನ್ ಟಾಮ್ ಚಾಕೊ) ಸಿಎಂ ಆಗುವ ಆಸೆಯಿಂದ ತಾಯಿಯನ್ನ ಕೊಂದು ತಾನೇ ಸಿಎಂ ಆಗಬೇಕು ಎಂದುಕೊಂಡಿರುತ್ತಾನೆ. ರಾಜಕೀಯಕ್ಕೆ ಬರಲು ಇಷ್ಟಪಡದ ಸಸ್ಪೆಂಡೆಡ್ ಅಧಿಕಾರಿ ಪರೋಕ್ಷವಾಗಿ ಆತನ ಕನಸನ್ನ ಭಗ್ನಗೊಳಿಸುವುದು. ಒಂದೆಡೆ ಸಿನಿಮಾದ ಕಥೆಯಾದರೆ ಮತ್ತೊಂದೆಡೆ ಮಕ್ಕಳ ಟ್ರಾಫಿಕ್, ಗಾಂಜಾ ಮಾಫಿಯವನ್ನ ನಿರ್ಮಿಸಿಕೊಂಡು ಕಾನೂನು ಬಾಹಿರ ಚಟುವಟಿಕೆಯಲ್ಲಿರುವವರನ್ನ ಸದೆ ಬಡೆಯುವುದು ಮತ್ತೊಂದೆಡೆಯ ಕಥೆಯಾಗಿ ಸಾಗಿಸಲಾಗಿದೆ.  ಇವೆಲ್ಲವೂ ಆದಿಕೇಶವನ ಬ್ಯಾಕ್ ಸಪೊರ್ಟ್ ನಡೆಯುತ್ತಿರುತ್ತವೆ. ಇದನ್ನ ಬೆಳ್ಳಿಪರದೆಯಲ್ಲಿ ತೋರಿಸಲಾಗಿದೆ. ಸಿನಿಮಾವನ್ನ ಅಭಿಮಾನಿಗಳು ಮೆಚ್ಚುತ್ತಾರೆ. ಆದರೆ ಇದನ್ನ ಸಾಮಾನ್ಯ ಜನ ಹೇಗೆ ಸ್ವೀಕರಿಸುತ್ತಾರೆ ಕಾದುನೋಡುತ್ತಾರೆ. 



ಮೊದಲಾರ್ಧ ಸಿನಿಮಾದಲ್ಲಿ ಸುದೀಪ್ ಎಂಟ್ರಿ, ಸಿಗರೇಟ್ ಮದ್ಯ ಸೇವಿಸುವುದೇ ಹೆಚ್ಚು ಅಬ್ಬರಿಸಲಾಗಿದೆ. ಸುದೀಪ್ ಸಿನಿಮಾದಲ್ಲಿ ಹೆಚ್ಚು ಅಬ್ಬರಿಸಿದಂತೆ ಕಾಣಿಸುತ್ತಾರೆ. ಮಧು ತಿಂದು ನಾಲಿಗೆಯನ್ನ ತುಟಿಗೆ ಒತ್ತಿ ಹಿಡಿಯುವ ಸ್ಟೈಲ್ ಅಭಿಮಾನಿಗಳಲ್ಲಿ ಹೆಚ್ಚು ಕಿಕ್ ತುಂಬುತ್ತದೆ. ಫ್ಯಾನ್ಸ್ ಗೆ ಏನು ಬೇಕೋ ಅದನ್ನ ಸಿನಿಮಾದಲ್ಲಿ ನೀಡಲಾಗಿದೆ. 

'ಮಾರ್ಕ್' ಸಿನಿಮಾದಲ್ಲಿ ನಟ ಕಿಚ್ಚ ಸುದೀಪ್ ಮುಖ್ಯ ಭೂಮಿಕೆಯಲ್ಲಿದ್ದು, ಅವರೊಂದಿಗೆ ನವೀನ್ ಚಂದ್ರ, ದೀಪ್ಷಿಕಾ, ರೋಶಿನಿ ಪ್ರಕಾಶ್, ಗೋಪಾಲ್‌ಕೃಷ್ಣ ದೇಶಪಾಂಡೆ, ಮಹಾಂತೇಶ್ ಹಿರೇಮಠ್, ಡ್ರ್ಯಾಗನ್ ಮಂಜು, ಆರ್ಚನಾ ಕೊಟ್ಟಿಗೆ, ಯೋಗಿ ಬಾಬು, ಶೈನ್ ಟಾಮ್ ಚಾಕೋ, ನಿಶ್ವಿಕಾ ನಾಯ್ಡು, ಡೇವ್ ಗಿಲ್, ಮತ್ತು ಇನ್ನು ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಈ ಚಿತ್ರವನ್ನು ವಿಜಯ್ ಕಾರ್ತಿಕೇಯ ನಿರ್ದೇಶಿಸಿದ್ದಾರೆ. 

Mark is ecstatic

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close