ಶಿವಮೊಗ್ಗ ಬ್ರೇಕಿಂಗ್ :- ಡೈವರ್ಸ್ ನೀಡಿದ್ದ ಪತ್ನಿಗೆ ಮದುವೆಯಾಗಿದ್ದ ಸ್ನೇಹಿತನ ಮೇಲೆ ಹಲ್ಲೆ- Attack on friend who married wife who gave him divers

SUDDILIVE || SHIVAMOGGA

ಶಿವಮೊಗ್ಗ ಬ್ರೇಕಿಂಗ್ :- ಡೈವರ್ಸ್ ನೀಡಿದ್ದ ಪತ್ನಿಗೆ ಮದುವೆಯಾಗಿದ್ದ ಸ್ನೇಹಿತನ ಮೇಲೆ ಹಲ್ಲೆ- Attack on friend who married wife who gave him divers  

Attack, friends

ಲಾರಿ ಚಾಲಕ ಜಗನ್ನಾಥನ ಮೇಲೆ ಮನಸೋಯಿಚ್ಛೆ ವಿಕ್ರಂ ಹಾಗೂಆತನ ಸ್ನೇಹಿತರು ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ. ನಿನ್ನೆ ರಾತ್ರಿ ಮಲವಗೊಪ್ಪ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದೆ. 

ಶಿವಮೊಗ್ಗದ ಹೊರವಲಯದ ಮಲವಗೊಪ್ಪ ಪೆಟ್ರೋಲ್ ಬಂಕ್ ಬಳಿ ಲಾರಿ ಚಾಲಕ ಜಗನ್ನಾಥ್ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಕಳೆದೆರೆಡು ತಿಂಗಳ ಹಿಂದೆಯಷ್ಟೇ ವಿಕ್ರಂ ತನ್ನ ಪತ್ನಿ ಛಾಯಾ ಗೆ ಡೈವರ್ಸ್ ನೀಡಿದ್ದನು. ಬಳಿಕ ಛಾಯಾ ಜಗನ್ನಾಥ್ ಜೊತೆ ಮದುವೆಯಾಗಿದ್ದಳು.  ಚಾಲಕರಾಗಿದ್ದ ಜಗನ್ನಾಥ್ ಹಾಗೂ ವಿಕ್ರಂ ಇಬ್ಬರು ಸ್ನೇಹತರಾಗಿದ್ದರು. 



ತನ್ನ ಸ್ನೇಹಿತನೇ ತನ್ನ ಪತ್ನಿಗೆ ಮದುವೆಯಾಗಿದ್ದಾನೆಂದು ವಿಕ್ರಂ ಆಕ್ರೋಶಗೊಂಡಿದ್ದನು ಎನ್ನಲಾಗಿದೆ. ಸ್ನೇಹಿತ ಜಗನ್ನಾಥ್ ಪತ್ನಿಯನ್ನ ಮದುವೆಯಾಗಿದ್ದಕ್ಕೆ ದ್ವೇಷದಿಂದ ವಿಕ್ರಂ ಹಲ್ಲೆ ನಡೆಸಿರಬಹುದು ಎನ್ನಲಾಗಿದೆ. 

ತೀವ್ರ ಗಾಯಗೊಂಡ ಜಗನ್ನಾಥ್ ಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂಐಸಿಯು ವಿಭಾಗದಲ್ಲಿ ಗಾಯಾಳು ಜಗನ್ನಾಥ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಆರೋಪಿಗಳ ಶೋಧದಲ್ಲಿ ಪೊಲೀಸಿದ್ದಾರೆ. 


Attack on friend who married wife who gave him divers  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close