ಎರಡು ಪ್ರತ್ಯೇಕ ರಸ್ತೆ ಅಪಘಾತ, ಸಾಗರದಲ್ಲಿ ದಂಪತಿಗೆ ಗಾಯ, ವಿದ್ಯಾನಗರದ ಫ್ಲೈಓವರ್ ನಲ್ಲಿ ಬೈಕ್ ಸವಾರನಿಗೆ ಜವರಾಯನಾಗಿ ಬಂದ ಲಾರಿ-Two separate road accidents, couple injured in Sagar, lorry hits biker on Vidyanagar flyover

SUDDILIVE || SHIVAMOGGA|| SAGARA

ಎರಡು ಪ್ರತ್ಯೇಕ ರಸ್ತೆ ಅಪಘಾತ, ಸಾಗರದಲ್ಲಿ ದಂಪತಿಗೆ ಗಾಯ, ವಿದ್ಯಾನಗರದ ಫ್ಲೈಓವರ್ ನಲ್ಲಿ ಬೈಕ್ ಸವಾರನಿಗೆ ಜವರಾಯನಾಗಿ ಬಂದ ಲಾರಿ-Two separate road accidents, couple injured in Sagar, lorry hits biker on Vidyanagar flyover

Road, accident


ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಸಾಗರದಲ್ಲಿ ಕಾರು ಮತ್ತು ಬಸ್ ನಡುವಿನ ಅಪಘಾತದಲ್ಲಿ ದಂತಿಗಳಿಗೆ ಗಾಯವಾದರೆ, ನಗರದ ವಿದ್ಯಾನಗರದ ಫ್ಲೈ ಓವರ್ ಬಳಿಯ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಪ್ರಾಣಕಳೆದುಕೊಂಡಿದ್ದಾರೆ. 

ಶಿವಮೊಗ್ಗ ನಗರದ ವಿದ್ಯಾನಗರ ಫ್ಲೈ ಓವರ್ ನಿಂದ ಇಳಿಯುತ್ತಿದ್ದ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಉಂಟಾಗಿದ್ದು ಡಿಕ್ಕಿಯ ರಭಸಕ್ಕೆ ಬೈಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತನನ್ನ ದಾವಣಗೆರೆ ಮೂಲದ ಬೈಕ್ ಸವಾರ ರಾಘವೇಂದ್ರ (40) ಎಂದು ಗುರುತಿಸಲಾಗಿದೆ. ರಾಘವೇಂದ್ರ ಚೆನ್ನಗಿರಿ ತಾಲೂಕಿನ ಹಿರೆಕೊಗಲೂರು ಮೂಲದವರು ಎನ್ನಲಾಗುತ್ತಿದೆ. 


ಮೃತ ದೇಹ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. 

ಸಾಗರ ತಾಲೂಕಿನಲ್ಲಿ ನಡೆದ ಘಟನೆ

ನಿನ್ನೆ ರಾತ್ರಿ ಸಾಗರದ ಕಾಸ್ಪಾಡಿಯಲ್ಲಿ  ನಡೆದ ಘಟನೆಯಲ್ಲಿ ದಂಪತಿಗಳಿಗೆ ಗಾಯಗಳಾಗಿವೆ. ಕಾಸ್ಪಾಡಿ ಸಮೀಪ ಕಾರು ಬಸ್ಸಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ದಂಪತಿ ತಲೆಗೆ ಗಂಭೀರ ಗಾಯಗಳಾಗಿವೆ. ಕಾರಲ್ಲಿ ಇದ್ದ ಮಕ್ಕಳು ಪ್ರಾಣಾಪಯದಿಂದ ಪಾರಾಗಿದ್ದಾರೆ. 

ಮಣಿಪಾಲದಿಂದ ಸಾಗರ ಬರುತ್ತಿದ್ದ ಖಾಸಗಿ ಬಸ್ ಹಾಗೂ ಸಾಗರದಿಂದ ದಾವಣಗೆರೆಗೆ ಹೊರಟಿದ್ದ ಕಾರಿನ‌ನಡುವೆ ಡಿಕ್ಕಿ ಉಂಟಾಗಿದ್ದು ಸಿದ್ದೇಶ್ವರ ಮತ್ತು ಪತ್ನಿಗೆ ಗಾಯಗಳಾಗಿದ್ದು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಅವರನ್ನ ದಾಖಲಿಸಲಾಗಿದೆ.

Two separate road accidents, couple injured in Sagar, lorry hits biker on Vidyanagar flyover

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close