ಕನ್ನಡಿಗರ ಆತ್ಮ ಗೌರವಕ್ಕೆ ದಕ್ಕೆ-ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್- Attack on the self-respect of Kannadigas - BJP District President N.K. Jagadish

SUDDILIVE || SHIVAMOGGA

ಕನ್ನಡಿಗರ ಆತ್ಮ ಗೌರವಕ್ಕೆ ದಕ್ಕೆ-ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ ಜಗದೀಶ್-  Attack on the self-respect of Kannadigas - BJP District President N.K. Jagadish  

Kannadiga, attack



 ಬಿಜೆಪಿ ಜಿಲ್ಲಾಧ್ಯಕ್ಷರಾದ ಜಗದೀಶ್ ಎನ್.ಕೆ ರವರು ಬೆಂಗಳೂರು ಮತ್ತು ಯಲಹಂಕದ ಕೋಗಿಲು  ಬಡಾವಣೆ ಹಾಗೂ ಬಯ್ಯಪ್ಪನ ಹಳ್ಳಿಯಲ್ಲಿ ಅಕ್ರಮ ವಲಸಿಗರಿಗೆ ಮನೆ ಹಂಚುವ ಸರ್ಕಾರದ ನಿರ್ಧಾರವನ್ನು ಅವರು ಕಟುವಾಗಿ ಟೀಕಿಸಿದ್ದಾರೆ.

ರಾಜ್ಯದ ಬಹಳಷ್ಟು ಜಿಲ್ಲೆಗಳಲ್ಲಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿರುವ ಕನ್ನಡಿಗರ ಮನೆಗಳನ್ನು ತೆರವುಗೋಳಿಸಿದ್ದಾರೆ. ಅಂತಹ ಕನ್ನಡಿಗರಿಗೆ ಸಿಗಬೇಕಾದ ಮನೆಗಳನ್ನು ಅಕ್ರಮ ವಲಸಿಗರಿಗೆ ನೀಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದು ಕಾನೂನುಬಾಹಿರ ಹಾಗೂ ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ತರುವ ನಿರ್ಧಾರ ಎಂದು ಅವರು ಹೇಳಿದ್ದಾರೆ.

ಈ ವಿಷಯದಲ್ಲಿ ರಾಜ್ಯದ ಜನತೆಯ ಪರವಾಗಿ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಮುಖ್ಯಮಂತ್ರಿಗಳು ಕೇರಳದ ಸರ್ಕಾರದ ಅಣತೆಯಂತೆ  ಅಥವಾ ದೆಹಲಿಯಲ್ಲಿ ಕುಳಿತಿರುವ ಕಾಂಗ್ರೇಸ್ ನಾಯಕರ ನಿರ್ಧಾರದಂತೆ ಕನ್ನಡಿಗರಿಗೆ ಅನ್ಯಾಯ ಮಾಡಲು ಹೊರಟಿದ್ದಾರೆ. ಕರ್ನಾಟಕದ ಜನತೆ ರಾಜ್ಯದ ಕನ್ನಡಿಗರಿಗೆ ಅನುಕೂಲಕ್ಕಾಗಿ ಮತ ಹಾಕಿ ಗೆಲ್ಲಿಸದ್ದರೋ ಅಥವಾ ದೆಹಲಿ ನಾಯಕರಿಗೆ ಮುಂಬರುವ ಕೇರಳ ಚುನಾವಣೆಯಲ್ಲಿ ಕಾಂಗ್ರೇಸ್ ಗೆ ಅನುಕೂಲ ಮಾಡಲು ರಾಜ್ಯದ ಮುಖ್ಯಮಂತ್ರಿಗಳು ಕೆಲಸ ಮಾಡುತ್ತಿದ್ದರೋ ಎಂಬ ಪ್ರಶ್ನೆಯನ್ನು ಕೇಳಿದರು.

Attack on the self-respect of Kannadigas - BJP District President N.K. Jagadish  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close