ಮಹಿಳೆಯ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಕ್ರೈಂ ಪೊಲೀಸ್ ಮೌನೇಶಪ್ಪನ ಮೌನಿ ಆಟ ಬಹಿರಂಗ-Big twist in woman's suicide case - Crime Police's silent game exposed

 SUDDILIVE || BHADRAVATHI

ಮಹಿಳೆಯ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಕ್ರೈಂ ಪೊಲೀಸ್ ಮೌನೇಶಪ್ಪನ ಮೌನಿ ಆಟ ಬಹಿರಂಗ-Big twist in woman's suicide case - Crime Police's silent game exposed

Big, twist


ಮಹಿಳೆಯ ಆತ್ಮಹತ್ಯೆ ಪ್ರಕರಣವೊಂದು ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಸುಮಾರು 24 ದಿನಗಳ ನಂತರ ಮಹಿಳೆಯ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರೆ ಇನ್ವಾಲ್ವ್ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.  ಪೊಲೀಸಪ್ಪ ಮಹಿಳೆಯ ಅಶ್ಲೀಲ ಫೊಟೊ ಹಿಡಿದು  ಮತ್ತೊಬ್ಬ‌ ಪೊಲೀಸಪ್ಪನ ಪತ್ನಿಗೆ ಬ್ಲಾಕ್ ಮೇಲ್ ಮಾಡಿರುವುದರಿಂದ ಮಹಿಳೆ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. 

ಡಿ.6 ರಂದು ಭದ್ರಾವತಿ ಹನುಮಂತ ನಗರದ ಪೊಲೀಸ್ ಕ್ವಾಟ್ರಸ್ ನಲ್ಲಿ ವಾಸವಾಗಿದ್ದ ರಕ್ಷಿತ ಎಂಬ ವಿವಾಹಿತ ಮಹಿಳೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಅಸ್ವಭಾವಿಕ ಮರಣ ಪ್ರಕರಣದ ಅಡಿ ದಾಖಲಾಗಿತ್ತು. 

ಆದರೆ ಈ ಪ್ರಕರಣದಲ್ಲಿ ಇದೇ ಠಾಣೆಯ ಕ್ರೈಂ ಪೊಲೀಸ್ ಒಬ್ಬ ರಕ್ಷಿತಾರ ಲೈಫ್ ಜೊತೆ ಆಟವಾಡಿದ ಪ್ರಕರಣ ನಿಧಾನವಾಗಿ ಬೆಳಕಿಗೆ ಬಂದಿದೆ. ರಕ್ಷಿತ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿದ್ದ ಸಂತೋಷ್ ಎಂಬುವರ ಪತ್ನಿ ಆಗಿದ್ದರು. ಈ ಮಹಿಳೆಗೆ  ಕ್ರೈಂ‌ಪೊಲೀಸ್ ಮೌನೇಶ್ ಶೀಕಲ್ ಅಶ್ಲೀಲ ಫೊಟೊ ಹಿಡಿದು ಸಾಮಾಜಿಕ ಜಾಲತಾಣ ಮತ್ತು ಕುಟುಂಬದ ಮಾನ ತೆಗೆಯುವ ಬೆದರಿಕೆಹಾಕಿ ದೈಹಿಕ ಸಂಪರ್ಕ ಹೊಂದಿರುವುದು ಪತ್ತೆಯಾಗಿವೆ. 

ರಕ್ಷಿತ ತನ್ನ‌ತಾಯಿ ಬಳಿ ದೀಪಾವಳಿಗೆ ಚಿಕ್ಕಮಗಳೂರಿಗೆ ಹೋದಾಗ ಮೌನೇಶ್ ಶೀಕಲ್ ನ‌ ಮಾನಸಿಕ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದರುವುದಾಗಿ ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಕ್ವಾಟ್ರಸ್ ನಲ್ಲಿ ರಕ್ಷಿತರ ಕೆಳಗಿನ‌ ಮನೆಯಲ್ಲೇ ಮೌನೇಶ್ ಶೀಕಲ್ ವಾಸವಾಗಿದ್ದು ಬ್ಲಾಕ್ ಮೇಲ್ ಮಾಡಿ ನಿನ್ನ ಗಂಡ ಮತ್ತು ಕುಟುಂಬದ ಮರ್ಯಾದೆ ತೆಗೆಯುವುದಾಗಿ ಬೆದರಿಕೆನೂ ಹಾಕಿದ್ದ ಎಂದು ಆರೋಪಿಸಲಾಗಿದೆ. ಗಂಡನ ಬಳಿ ಹೇಳಲು ದೈರ್ಯವಾಗದೆ ಅಳಿಯನ ಬಳಿ ಮಾತನಾಡಿ ಎಂದು ರಕ್ಷಿತ ತನ್ನ ತಾಯಿ ಬಳಿ ಹೇಳಿಕೊಂಡಿದ್ದಳು ಎಂದು ದೂರಿನಲ್ಲಿ ದಾಖಲಿಸಲಾಗಿದೆ. 

ಈ ಪ್ರಕರಣ ಇಲ್ಲಿಗೆ ನಿಂತಿಲ್ಲ ಕ್ರೈಂ ಪೊಲೀಸ್ ಮತ್ತು ಹೆಡ್ ಕಾನ್ ಸ್ಟೇಬಲ್ ಸಂತೋಷ್ ಇಬ್ಬರ ನಡುವೆ ಮೊನ್ನೆ ಗಲಾಟೆಯಾಗಿದೆ. ಮಾಚೇನಹಳ್ಳಿ ಇಂಡಸ್ಟ್ರೀಯಲ್ ಏರಿಯಾದಲ್ಲಿ ಗಲಾಟೆಯಾಗಿದೆ ಎಂದು ಇಬ್ಬರು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದಾರೆ. ಈ ಪ್ರಕರ ದೂರು ಪ್ರತಿದೂರು ದಾಖಲಾಗಿದೆ. 

ಒಟ್ಟಿನಲ್ಲಿ ಮೌನೇಶ್ ಶೀಕಲ್ ಎಂಬ ಕ್ರೈಂ‌ಪೊಲೀಸನ ಚಕ್ಕಂದದ ಆಟದಿಂದ ಮಹಿಳೆಯ ಪ್ರಾಣ ಹೋಗಿದೆ ಎಂಬುದು ಮೇಲ್ನೇಟಕ್ಕೆ ಪತ್ತೆಯಾಗಿದೆ. ಈತನ ಬಂಧನವೂ ಆಗಿದೆ ಎಂದು ಕೇಳಿ ಬರುತ್ತಿದೆ. ಪೊಲೀಸನ ಪತ್ನಿಯ ಮೇಲೆ ಮತ್ತೊಬ್ಬ ಪೊಲೀಸ್ ಕಣ್ಣು ಹಾಕಿರುವುದು ದುರಂತ. ಇತ್ತೀಚೆಗೆ ಸಂಘಟನೆಯೊಂದು ಪೊಲೀಸರೆ ಅಪರಾಧದಲ್ಲಿ ಪತ್ತೆಯಾಗುತ್ತಿರುವ ಬಗ್ಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರು.

ಪೊಲೀಸರು ಮನುಷ್ಯರೇ, ಅಪರಾಧಗಳಿಂದ ದೂರವಿರಲು ಸಾಧ್ಯವಿಲ್ಲ ಅಂಬೋದು ಸಹ ಅಷ್ಟೆ ಸತ್ಯ.  ಆದರೆ ಅವರಿಗೆ ನೀಡುವ ತರಬೇತಿ, ಶಿಸ್ತಿನ ಪಾಠಗಳಿಂದ ಅಪರಾಧವನ್ನ ಪತ್ತೆ ಮಾಡಲು ಕಲಿತ ವಿದ್ಯಗಳು ಬಳಸಬೇಕೆ ವಿನ ಮತ್ತೊಬ್ಬರ ಜೀವನದಲ್ಲಿ ಆಟವಾಡೋದಿಕ್ಕಲ್ಲವೆಂಬುದೆ ನೀತಿ ಪಾಠ. ಈ ನೀತಿ ಪಾಠ ಯಾರಿಗೆ ಏನು ಕಲಿಸುತ್ತದೆ ಅಥವಾ ಕಲಿಸಿದೆ ಎಂಬುದೆ ಆಗಾಗ್ಗೆ ಪರೀಕ್ಷೆಗೆ ಒಳಗಾಗಬೇಕಿದೆ. 

Big twist in woman's suicide case - Crime Police's silent game exposed

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close