ಭದ್ರಾವತಿ: ಮತ್ತೊಂದು ಬೊಲೆರೋ ಪಲ್ಟಿ, 6 ಜನ ಮೆಗ್ಗಾನ್ ಗೆ- Bhadravati: Another bolero flip, 6 to Meggan

 SUDDILIVE || BHADRAVATHI

ಭದ್ರಾವತಿ: ಮತ್ತೊಂದು ಬೊಲೆರೋ ಪಲ್ಟಿ, 6 ಜನ ಮೆಗ್ಗಾನ್ ಗೆ- Bhadravati: Another bolero flip, 6 to Meggan    

Bolero, flip


ಒಂದುವಾರದ ಹಿಂದೆ ಬಿಸಿಲು ಮನೆಯಲ್ಲಿ ಬೊಲೆರೋವೊಂದು ಪಲ್ಟಿಯಾಗಿ ಈರ್ವ ಮಹಿಳೆಯ ಸಾವಿಗೆ ಕಾರಣವಾಗಿದ್ದ ಪ್ರಕರಣ ಇನ್ನೂ ಮರೆಮಾಚುವ ಮುನ್ನ  ಇಂದು ಮತ್ತೊಂದು ಬೊಲೆರೋ ವಾಹನವೊಂದು ಪಲ್ಟಿ ಹೊಡೆದಿದೆ. 

ಘಟನೆಯಲ್ಲಿ 6 ಜನ ಮಹಿಳೆಯರನ್ನ ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲಾಗಿದೆ. ಕೂಡ್ಲಿಗೆರೆಯಿಂದ ಉದ್ದಾಂಜನೆಯ ದೇವಸ್ಥಾನಕ್ಲೆ ಹೊರಟಿದ್ದ ಬೊಲೆರೋ ಬಿಸಿಲು ಮನೆಯ ರಸ್ತೆಯಲ್ಲಿ ಬರುವ ಬೆಳ್ಳಿಗೆರೆಯಲ್ಲಿ ಬೊಲೆರೋ ಪಲ್ಟಿ ಹೊಡೆದಿದೆ. 

ಬೊಲೆರೊ ಪಲ್ಟಿಯಾಗಿರುವ ಬಗ್ಗೆ ಮಾಹಿತಿ ತಿಳಿಯಬೇಕಿದೆ ಆದರೆ 12 ಜನರಿದ್ದ ಬೊಲೆರೋದಲ್ಲಿ ಇದುವರೆಗೆ ಪ್ರಾಣ ಹಾನಿಯಾಗಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ. 12 ಜನರಲ್ಲಿ ಚಂದ್ರಮ್ಮ, ಗೌರಮ್ಮ, ದಾನಮ್ಮ, ಸುರೇಶ್, ಗೀತಾ, ಹರ್ಷಿತಾ ಎಂಬುವರನ್ನ ಶಿವಮೊಗ್ಗದ ಮೆಗ್ಗಾನ್ ಗೆ ಶಿಫಾತಸ್ಸು ಮಾಡಲಾಗಿದೆ.

ಪ್ರಕರಣ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 

Bhadravati: Another bolero flip, 6 to Megan

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close