ಶಿಕ್ಷಣ ಇಲ್ಲದ ಶಿಕ್ಷಣ ಸಚಿವ-ಮಧು ವಿರುದ್ಧ ಬಿಜೆಪಿ ವಾಗ್ದಾಳಿ- BJP attacks Madhu, an uneducated education minister

 SUDDILIVE || SHIVAMOGGA

ಶಿಕ್ಷಣ ಇಲ್ಲದ ಶಿಕ್ಷಣ ಸಚಿವ-ಮಧು ವಿರುದ್ಧ ಬಿಜೆಪಿ ವಾಗ್ದಾಳಿ-BJP attacks Madhu, an uneducated education minister

Bjp, attack


ಆರಗ ಜ್ಞಾನೇಂದ್ರ ಅವರನ್ನ‌ ಕೆಳಮಟ್ಟದ ಭಾಷೆ ಬಳಸಿದ ಸಚಿವ ಮಧು ಬಂಗಾರಪ್ಪನವರಿಗೆ ಬಂಗಾರಪ್ಪ ಎಂಬ ಶ್ರೀರಕ್ಷೆ ಇದೆ ಬಿಟ್ಟರೆ ಉಳಿದಂತೆ ಯಾವ ಗುಣವೂ ಅವರಲ್ಲಿಯೂ ಇಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್ ಆರೋಪಿಸಿದ್ದಾರೆ. 

ಶಿಕ್ಷಣ ಇಲ್ಲದ ಶಿಕ್ಷಣ ಸಚಿವರಾಗಿದ್ದಾರೆ. ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ, ತನ್ವೀರ್ ಸೇಋ್, ಸುರೇಶ್ ಕುಮಾರ್ ಅವರು ಶಿಕ್ಷಣ ಸಚಿವರಾಗಿದ್ದರು ಹೇಗೆ ನಡೆದುಕೊಂಡರು ಎಂಬುದನ್ನ ಅರಿಯಬೇಕು. ಜ್ಞಾನೇಂದ್ರ ಗೃಹ ಸಚಿವರಾಗಿದ್ದಾಗ ಅಪ್ಪು ಅವರ ನಿಧನವಾದಾಗ ಲಕ್ಷಾಂತರ ಜನ ಅಭಿಮಾನಿಗಳು ಸೇರಿದಾಗ ನಿರ್ವಾಹಣೆ ಮಾಡಿದರು. ಆರ್ ಸಿಬಿ ಉತ್ಸವ ನಡೆದಾಗ ಹೇಗೆ ಸಾವು ಸಂಙವಿಸಿತು ಎಂಬುದನ್ನ ತುಲನೆ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. 

ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿಲ್ಲ. ಕೃಷಿ ವಿಚಾರದಲ್ಲಿ ಕೃಷಿ ಸಚಿವ ಬೈರೇಗೌಡರನ್ನ ಜಿಎಸ್ ಟಿ ಬಗ್ಗೆ ಸಚಿವರು ಕೇಳಿ ತಿಳಿದುಕೊಳ್ಳಲಿ. ಮಾತು ಎತ್ತಿದರೆ ಎಲ್ಲದಕ್ಕೂ  ನಮ್ಮ  ಹಕ್ಕು ಎನ್ನುವ ಅವರು ಶಿವಮೊಗ್ಗದಲ್ಲಿ ಅಭಿವೃದ್ಧಿಯಾಗುತ್ತಿಲ್ಲ.‌ಇದನ್ನ ನಾವು ನಮ್ಮ ಹಕ್ಕಿನ ಅಡಿ ಕೇಳಬಹುದಲ್ವಾ? ಅನ್ನಭಾಗ್ಯ, ಗೃಹಲಕ್ಷ್ಮೀ, ಶಕ್ತಿಯೋಜನೆ, ಯುವನಿಧಿಯಂತಹ ಗ್ಯಾರೆಂಟಿಗಳನ್ನ ಶಾದಕ ಆರಗ ಜ್ಞಾನೇಂದ್ರ ಗ್ಯಾರೆಂಟಿಯನ್ನ 420 ಎಂದು ಕರೆದಿದ್ದಾರೆ.  ಸಾರ್ವಜನಿಕರ ತೆರಿಗೆ ಹಣದಿಂದ ಗ್ಯಾರೆಂಟಿ ಸಮಿತಿಯ ಸದಸ್ಯರಿಗೆ ಪದಾಧಿಕಾರಿಗಳಿಗೆ ಸಂಬಳ ಹೋಗ್ತಾಯಿದೆ.  ಇದಕ್ಕೆ 420 ಎಂದು ಆರಗ ಹೇಳಿದ್ದಾರೆ ಎಂದು ದೂರಿದರು. 

ಸಚಿವ ಮಧು ಬಂಗಾರಪ್ಪ ಎಲ್ಲಾ ರೇಖೆಯನ್ನೂ ದಾಟಿದ್ದಾರೆ. ಜಿಲ್ಲೆಯಲ್ಲಿ 40 ಸರ್ಕಾರಿ ಶಾಲೆಗಳನ್ನ ಮುಚ್ಚಲಾಗುತ್ತಿದೆ. ಬಿಸಿ ಊಟ ಹೇಗೆ ನಡೆಯುತ್ತಿದೆ ಎಂಬುದನ್ನ ಶಿಕ್ಷಣ ಇಲಾಖೆ ಹೇಳಬೇಕು. ಮತ್ತೊಮ್ಮೆ ನಮ್ಮ ನಾಯಕರ ಬಗ್ಗೆ ಮಾತನಾಡಿದರೆ ಹುಷಾರ್ ಎಂದು ಎಚ್ಚರಿಸಿದರು. ಪ್ರಬುದ್ಧತೆ ಇಲ್ಲದಂತೆ ನಡೆದುಕೊಳ್ಳಬೇಡಿ ಎಂದು ಆಗ್ರಹಿಸಿದರು. 

ಎಂಲ್ ಸಿ ಅರುಣ್ ಮಾತನಾಡಿ, ಸಚಿವ ಮಧು ಬಂಗಾರಪ್ಪ ಹಿಟ್ ಅಂಡ್ ರನ್ ಆಗಿದ್ದಾರೆ. ಆರಗರಿಗೆ ಹೇಳಿದಂತೆ ಸಂಸದರಿಗೂ ಮಾತನಾಡುತ್ತಿದ್ದರು. ಅಭಿವೃದ್ಧಿಯ ವಿಚಾರದಲ್ಲಿ ಚರ್ಚಿಸೋಣ ಬನ್ನಿ ಎಂದಾಗ ಬೇರೆಯವರನ್ನ ಕೆಳಮಟ್ಟದ ಭಾಷೆ ಬಳಸಿ ಮಾತನಾಡುತ್ತಿದ್ದಾರೆ. ಒಂದು ಮನೆ ಕೊಟ್ಟಿಲ್ಲ. ಜಿಎಸ್ ಟಿಯನ್ನ ಹೇಗೆ ಹಂಚುತ್ತಾರೆ ಎಂಬುದನ್ನ‌ಮಧು ಬಿಕಾಂ ಸ್ಟೂಡಂಟ್ ಗೆ ಕೇಳಿ. ಅನ್ಯಾವಾದರೆ ಕೋರ್ಟ್ ಗೆ ಹೋಗಲಿ ಅದನ್ನ‌ಬಿಟ್ಟು ಎಲ್ಲೆಡೆ ಕೇಂದ್ರದಿಂದ  ಮೋಸವಾಗುತ್ತಿದೆ  ಎನ್ನೀತ್ತೀರಿ. 

ಸ್ಟ್ಯಾಂಪ್ ಡ್ಯೂಟಿ, ಕಮರ್ಷಿಯಲ್ ಟ್ಯಾಕ್ಸ್, ಆರ್ ಟಿ ಒದಲ್ಲಿ ಹೆಚ್ಚಿಸಿದ್ದೀರ. 1025 ಕೋಟಿ ಮೂರು ಜಿಲ್ಲೆಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಸಂಗ್ರಹಿಸುವ ಗುರಿಯಿದೆ 300 ಕೋಟಿ ಆರ್ ಟಿ ಒ ದಲ್ಲಿ ಗುರಿಯಿದೆ. 119 ಕೋಟಿ ಹಣ ಸ್ಟ್ಯಾಂಪ್ ಡ್ಯೂಟಿಯ ಗುರಿ ಹೊಙದಲು. ಅಬಕಾರಿಗೆ 500 ಕೋಟಿ ಟಾರ್ಗೆಟ್ ನ್ನ ಅಧಿಕಾರಿಗಳಿಗೆ ನೀಡಲಾಗಿದೆ. ಈ ಎಲ್ಲಾ ಇಲಾಖೆಯಲ್ಲಿ ಸರ್ಕಾರ ತೆರಿಗೆ ಹೆಚ್ಚಿಸಿದ ಪರಿಣಾಮ ಯಾವುದೂ 50-60% ಗುರಿ ಸಾಧಿಸಲು ಆಗಿಲ್ಲ ಎಂದು ವಾಗ್ದಾಳಿ ಮಾಡಿದರು. 

ಇಂದು ರಾಜ್ಯ ಸರ್ಕಾರ ಗಾಂಜಾವನ್ನ ಸೇಲ್ ಮಾಡುತ್ತಿದೆ. ಗಾಂಜಾ ಕಡಿಮೆ ದರದಲ್ಲಿ ಸಿಗುತ್ತಿದೆ. ಮದ್ಯದ ದರ ಹೆಚ್ಚಾದ ಕಾರಣ ಗಾಂಜಾ ಹಾವಳಿ ಹೆಚ್ಚಾಗಿದೆ. ಇದನ್ನ ಅಧಿವೇಶನದಲ್ಲಿ ಚರ್ಚಿಸುತ್ತೇವೆ ಎಂದ ಅವರು ದೇವಕ್ಯಾತಿಕೊಪ್ಪದಲ್ಲಿ ಕೈಗಾರಿಕೆ ಇಂಡಸ್ಟ್ರಿಯಲ್ ಗೆ ಪರಿಸರದ  ಕ್ಲಿಯರೆನ್ಸ್ ಸಿಕ್ಕಿಲ್ಲ ಹಾಗಾಗಿ ಶೀಘ್ರದಲ್ಲಿಯೇ ಮುಳುಗುವ ಭೀತಿಯಿದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಯ ಮಾಧ್ಯಮಪ್ರಮುಖ್ ಚಂದ್ರಶೇಖರ್ ಎಸ್,  ಸಹ ಪ್ರಮುಖ್ ಮಂಜುನಾಥ್ ಎನ್, ಕೆ.ವಿ. ಅಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಸಿ. ಹೆಚ್ ಮಾಲ್ತೇಶ್ ಉಪಸ್ಥಿತರಿದ್ದರು. 

BJP attacks Madhu, an uneducated education minister

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close