ಸಿಎಂ ಕದನದಲ್ಲಿ ಅಭಿವೃದ್ಧಿ ಅಧೋಗತಿಗೆ ಹೋಗಿದೆ-ಕುಮಾರ್ ಬಂಗಾರಪ್ಪ-Development has gone downhill in the CM battle - Kumar Bangarappa

 SUDDILIVE  || SHIVAMOGGA

ಸಿಎಂ ಕದನದಲ್ಲಿ ಅಭಿವೃದ್ಧಿ ಅಧೋಗತಿಗೆ ಹೋಗಿದೆ-ಕುಮಾರ್ ಬಂಗಾರಪ್ಪ-Development has gone downhill in the CM battle - Kumar Bangarappa

Kumar, bangarappa


ಸಿಎಂ ಕುರ್ಚಿ ಕಿತ್ತಾಟದಲ್ಲಿ ರಾಜ್ಯ ಅದೋಗತಿಗೆ ಹೋಗಿದೆ. ಜನತೆಗೆ ಅಸಮಾಧಾನವಾಗಿದೆ ಸರ್ಕಾರವನ್ನ ಚುನಾಯಿಸುವ ವೇಳೆ ಜನರಲ್ಲಿ ವಿಶ್ವಾಸವಿತ್ತು. ಅದು ಮುರಿದುಬಿದ್ದಿದೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಆರ್ಥಿಕತೆ ಕುಸಿದುಬಿದ್ದಿದೆ. ಅಭಿವೃದ್ಧಿ ಕುಂದಿದೆ. ರಾಜ್ಯದ ಜನ ಪರವಾಗಿ ಕಿತ್ತಾಟ ನಡೆಯಬೇಕಿತ್ತು. ಆದರೆ ಕುರ್ಚಿ ಕದನದಲ್ಲಿಯೇ ರಾಜ್ಯ ಸರ್ಕಾರ ಮುಳುಗಿದೆ. ಇದು ಎಲ್ಲಾ ರಾಜಕೀಯ ಪಕ್ಷದಲ್ಲಿರುತ್ತದೆ ಅದನ್ನ ನಿಭಾಯಿಸಿಕೊಂಡು ಹೋಗಬೇಕಿದೆ ಎಂದರು. 

ಮಧ್ಯಾಂತರ ಚುನಾವಣೆಗೆ ಯಾರಿಗೂ ಆಸೆಯಿರಲ್ಲ. ರಾಜಕೀಯ ಲಾಭವನ್ನ ಬಿಜೆಪಿ ಪಡೆಯಲ್ಲ. ಒನ್ ಎಲೆಕ್ಷನ್ ಒನ್ ನೇಷನ್ ತರಲಾಗುತ್ತಿದೆ. ಈ ವೇಳೆ ಚುನಾವಣೆಗೆ ಯಾರೂ ಹೋಗಲು ಸಿದ್ದವಿಲ್ಲ. ಉತ್ತಮ ಆಡಳಿತ ಬರಲಿ ಎಂದು ಆಶಿಸಿದರು. 

ಬಿಜೆಪಿಯಲ್ಲಿ ಇನ್ನೂ ರೆಬಲ್ ಆಗಿಯೇ ಇದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅಭಿಪ್ರಾಯ ತಿಳಿಸಿದ್ದೆ ಅಷ್ಟೆ, ಆದರೆ  ರೆಬಲ್ ಆಗಿರಲಿಲ್ಲ. ಅಧ್ಯಕ್ಷರ ಆಯ್ಕೆ ನಡೆಯುತ್ತಿದೆ ಉತ್ತರ ಪ್ರದೇಶ ಮತ್ತು ಕರ್ನಾಟಕದ ಅಧ್ಯಕ್ಷರ ಆಯ್ಕೆಯ ವೇಳೆ ಅಭಿಪ್ರಾಯ ತಿಳಿಸಿದ್ದೆ. ಅಷ್ಟೆ ರೆಬಲ್ ಅಲ್ಲ. ನನ್ನ ಗ್ರೂಪ್ ವಕ್ಫ್ ಭೂಮಿ ಮತ್ತು ವಾಲ್ಮೀಖಿ ಹಗರಣವನ್ನ‌ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಬೇಕಿತ್ತು. ಅದಕ್ಕೆ ನಮ್ಮ ವಾದವಿತ್ತು. ಯತ್ನಾಳ್ ಉಚ್ಚಾಟನೆಯಾದ ಮೇಲೆ ವಾಯ್ಸ್ ಕಡಿಮೆಯಾಗಿಲ್ಲ. ನುಸಳುಕೋರರ ವಿರುದ್ದ ಮಾತನಾಡಿದ್ದೆ ಯತ್ನಾಳ್ ಉಚ್ಚಾಟನೆಯಾದ ಮೇಲೆ ಎಂದರು. 

ನುಸುಳಿಕೋರರ ಬಗ್ಗೆ ರಾಜ್ಯ ಸರ್ಕಾರ ಗಮನಹರಿಸಿಲ್ಲ. ಹಿರ ರಾಜ್ಯದ ಕಾರ್ಮಿಕರಿಂದ ಮಾಲೀಕರಿಗೆ ಜೀವ‌ಭಯವಿದೆ. ರಕ್ಷಣೆಯೇ ಗಾಬರಿಯಾಗಿದೆ. ಯತ್ನಾಳ್ ನಮ್ಮ ಜೊತೆ ಇದ್ದಾರೆ ಮುಂದಿನ ದಿನಗಳಲ್ಲಿ ಅವರು ಪಕ್ಷಕ್ಕೆ ಬರುತ್ತಾರೆ ಎಂದರು.

ಎಸ್ ಐಆರ್ ಬಗ್ಗೆ ಶ್ವೇತ ಪತ್ರವನ್ನ ಕಾಂಗ್ರೆಸ್ ಹೊರಡಿಸಬೇಕು. ಅನಧಿಕೃತವಾಗಿ ಆಧಾರ್ ಕಾರ್ಡ್ ಹೊಂದಿದವರ ಬಗ್ಗೆ ಮಾತನಾಡಬೇಕಿದೆ. ರಾಜಕೀಯ ಪಕ್ಷ ಚುನಾವಣೆ ಆಯೋಗದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲವೆಂದರು. ವಿಜೇಂದ್ರ ಬದಲಾಗದಿದ್ದರೆ ಜೆಸಿಬಿ ಪಕ್ಷ ಕಟ್ಟುವ ಬಗ್ಗೆ ಯತ್ನಾಳ್ ಹೇಳಿಕೆಗೆ ಉತ್ತರಿಸಲು ನಿರಾಕರಿಸಿದ ಕುಮಾರ್ ಬಂಗಾರಪ್ಪ ಅವರ ಒಪಿನಿಯನ್ ನ್ನ ಅವರ ಬಳಿಕೇಳಿ ಎಂದರು. 

ಶಿರಾಳಕೊಪ್ಪ ಮತ್ತು ಸೊರಬ ರಸ್ತೆ ಆಗಿಲ್ಲ.‌ ಹಣ ಉಳಿಸಿಕೊಳ್ಳಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ಧಿ ಪಡಿಸಲು ವಿಫಲರಾಗಿದ್ದಾರೆ. ಸರಿಪಡಿಸಲಿ ಎಂದ ಅವರು ಜಿಲ್ಲಾ ಬಿಜೆಪಿ ಪಕ್ಷಕ್ಕೆ ಬರುತ್ತಿಲ್ಲ ಎಂದರೆ ಜಿಲ್ಲಾ ಬಿಜೆಪಿ ನಿರ್ಲಕ್ಷಿಸಿದೆ ಎಂದು ಅರ್ಥವಿಲ್ಲ.  ಆದರೆ ರಾಜಕೀಯ ಕವಲು ಒಡೆದ ಸ್ಥಿಯಲ್ಲಿರುವ ಕಾರಣ ಕಾರಣ ನಾನು ಜಿಲ್ಲೆ ಬಿಜೆಪಿ ಕಚೇರಿಗೆ  ಬಂದಿಲ್ಲ ರಾಜ್ಯ ಕಚೇರಿಗೆ ಹೋಗ್ತಾಯಿದ್ದೀನಿ ಎಂದರು. 

ಎರಡುವರೆ ವರ್ಷದಲ್ಲಿ ಆರಗ ಜ್ಞಾನೇಂದ್ರರನ್ನ ಬಚ್ಚಾ ಎಂದರೆ ರಾಜಕೀಯದಲ್ಲಿ ಆರಗರನ್ನೇ ಮೀರಿಸುವ ರಾಜಕಾರಣವನ್ನ  ಅರಿತುಕೊಂಡು ಬಿಟ್ರಾ?. ಏರ್ ಪೋರ್ಟ್ ನೈಟ್ ಲ್ಯಾಂಡಿಂಗ್ ಆಗಬೇಕಿತ್ತು,  ಬಗುರ್ ಹುಕುಂ ಸಾಗುವಳಿದಾರರಿಗೆ ಒಕ್ಕಲೆಬ್ಬಿಸಲಾಗುತ್ತಿದೆ ಅದರ ಬಗ್ಗೆ ಯಾವುದೇ ಕ್ರಮವಿಲ್ಲ. 2 ವರೆವರ್ಷದ ಹಿಂದೆ ಪರಿಸ್ಥಿತಿ ಹೇಗಿತ್ತೋ ಹಾಗೆ ಇದೆ ಎಂದರು‌.

Development has gone downhill in the CM battle - Kumar Bangarappa

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close