ಚಾಲೆಂಜ್ ಆಗಿದ್ದ ಅಜ್ಜಿ ಹತ್ಯೆಯನ್ನ ಕುಂಸಿ ಪೊಲೀಸರು ಬೇಧಿಸಿದ್ದು ಹೇಗೆ? How did the police solve the grandmother's murder, which was a challenge?

 SUDDILIVE || SHIVAMOGGA

ಚಾಲೆಂಜ್ ಆಗಿದ್ದ ಅಜ್ಜಿ ಹತ್ಯೆಯನ್ನ ಕುಂಸಿ ಪೊಲೀಸರು ಬೇಧಿಸಿದ್ದು ಹೇಗೆ?How did the police solve the grandmother's murder, which was a challenge?

Kumsi, Police


ಕುಂಸಿ ಮರ್ಡರ್ ಪ್ರಕರಣ ಬಸಮ್ಮ ಎಂಬ 70 ವಯಸ್ಸಿನ‌ಕೊಲೆ ಪ್ರಕರಣದಲ್ಲಿ  ಇಬ್ವರು ಆರೋಪಿಯನ್ನ ಪತ್ತೆಹಚ್ಚಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲಾವ್ ತಿನ್ನಲು ಕರೆದಿದ್ದ ಅಜ್ಜಿಯನ್ನೇ  ಚಿನ್ನಾಭರಣಕ್ಕಾಗಿ ಟಾರ್ಗೆಟ್ ಮಾಡಲಾಗಿತ್ತು. ಒಬ್ಬಂಟಿ ಅಜ್ಜಿ ಮನೆಗೆ ಯಾವಾಗಲೋ ಒಬ್ಬರು ಬರುತ್ತಿದ್ದರು. ಕೊಲೆಯಾದಾಗ ಬಸಮ್ಮನ ಅಳಿಯ ಈಶ್ವರಪ್ಪ ಎಂಬುವರು ಅಜ್ಜಿ‌ಮಗ  ರಮೇಶ್ ಎಂಬಾತನ ಮೇಲೆ ಅನುಮಾನ ವ್ಯಕ್ತಡಿಸಿ ಕೊಲೆ ಮಾಡಿದ್ದಾಗಿ ಎಫ್ಐಆರ್ ದಾಖಲಿಸಿದ್ದರು. ಆಸ್ತಿ ವಿಚಾರದಲ್ಲಿ ಪಬ್ಲಿಕ್ ಗಲಾಟೆ ಮಾಡಿದ್ದ ಮಗ ನಂತರದ ವಿಚಾರಣೆಯಲ್ಲಿ ನಿರಪರಾಧಿಯಾಗಿ ಹೊರಬಂದಿದ್ದನು. ಪ್ರಕರಣ ತುಂಬ ಕಾಂಪ್ಲಿಕೇಟೆಡ್ ಆಗಿತ್ತು. ಆದರೆ ಮಗ ಕೊಲೆ ಮಾಡಿರಲಿಲ್ಲ ಎಂದು ವಿವರಿಸಿದರು. 

Murder, case

ಬಸಮ್ಮ ಒಬ್ಬರೆ ಇದ್ದರು. ಇಬ್ಬರು ಹೆಣ್ಣಮಕ್ಕಳಿದ್ದರು. ಅವರು ಶಿವಮೊಗ್ಗದಲ್ಲಿ ವಾಸವಾಗಿದ್ದರು. ಮನೆಯಲ್ಲಿ ಹಣ ಮತ್ತು ಚಿನ್ನಾಭರಣದ ಬಗ್ಗೆ ಮಾಹಿತಿ ಇರಲಿಲ್ಲ. ಪ್ರಕರಣ ಬೇಧಿಸಲು ಕಷ್ಟವಿತ್ತು. ಡಿವೈಎಸ್ಪಿ ಸಂಜೀವ್ ಮತ್ತು ಪಿಐ ದೀಪಕ್ ಕಡಖ್ ತನಿಖೆ ನಡೆಸಿದಾಗ ಪಕ್ಕದ ಮನೆಯಲ್ಲೇ ಆರೋಪಿಯಿಂದಲೇ ಕೊಲೆ ನಡೆದಿರುವುದು ತನಿಖೆಯಿಂದ ತಿಳಿದು ಬರುತ್ತದೆ. 

ಅರಮಾನ್ ಸಿಂಗ್ (25) ಮತ್ತು ಅಲ್ಲೇ ಪಕ್ಕದಲ್ಲಿ ವಾಸವಾಗಿದ್ದ ವಿಕಾಸ್ ಎಂಬಾತನು ತನಿಕೆಯಲ್ಲಿ ಕೊಲೆ ಮಾಡಿರುವುದು ಪತ್ತೆಯಾಗುತ್ತದೆ. ಇಬ್ಬರೂ ಬಸಮ್ಮಳನ್ನ 15 ಬಾರಿ ಚುಚ್ಚಿ ಕೊಲೆ ಮಾಡಿದ್ದಾರೆ. ಸಣ್ಣಪುಟ್ಟ ಹಣಕ್ಕಾಗಿ ಕೊಲೆ ಮಾಡಿದ್ದ ಇಬ್ಬರೂ ಅಜ್ಜಿಯ ಮೈಮೇಲಿದ್ದ ಕಿವಿ ಓಲೆ ಮತ್ತು ಗುಂಡಿನ ಸರವನನ್ನ ಕದ್ದು ಓಡಿಹೋಗಿದ್ದರು. ಮರುದಿನ ಹೆಣ ಸುಡುವ ಪ್ಲಾನ್ ಮಾಡ್ತಾರೆ.

Kumsi, murdercase

ಬಣ್ಣ ಹೊಡೆಯಲು ಬಳಸುವ ಟರ್ಪಂಟೈಲ್ ಮತ್ತು ಡೆಟಾಲ್ ನಿಂದ ರಕ್ತ ಬಿದ್ದಿರುವ ಜಾಗವನ್ನ ವರೆಸಿರುತ್ತಾರೆ. ಇನ್ನೇನು ಬೆಳಗಿನ ಜಾವ ಹತ್ಯೆಗೈದ ಅಜ್ಕಿಯ ಹೆಣವನ್ನ ಚೀಲಕ್ಕೆ ತುಂಬಿಸಿಕೊಂಡು ಹೊರಡಬೇಕು.  ಪಕ್ಕದ ಮನೆಯ ಹೆಂಗಸೊಬ್ವರು ಬಸಮ್ಮ ಎಂದು ಕೂಗಿಕೊಂಡು ಬಂದು ಇಬ್ಬರನ್ನ ಎಚ್ಚರಿಸುತ್ತಾರೆ.  ಅಲರ್ಟ್ ಆದ ಇಬ್ವರು ಕೊಲೆಗಾರರು,  ಎರಡೂ ಕಡೆ ಡೋರ್ ಲಾಕ್ ಮಾಡಿದ್ದರು.  ಅಟ್ಟದ ಮೇಲೆ ಓಡಿಹೋಗಿ  ಪಕ್ಕದ ಅರಮಾನ್ ಸಿಂಗ್ ಮನೆಗೂ ಮತ್ತು ಅಜ್ಜಿ ಮನೆಗೂ ಒಂದು ಕಿಂಡಿ ಇರುತ್ತದೆ ಅಲ್ಲಿಂದ ಪಾರಾಗುತ್ತಾರೆ.  ಪ್ರಕರಣದಲ್ಲಿ ಯಾವುದೇ ಕ್ಲೂ ಇರಲಿಲ್ಲ. ಆದರೆ ತೀವ್ರ ತನಿಖೆಯಿಂದ ಆರೋಪಿಗಳು ಇಂದು  ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಬ್ಬರ ಪತ್ತೆಯನ್ನ ತಾಂತ್ರಿಕ ವಿಷಯದ ಮೇಲೆ ಪ್ರಕರಣ ಟ್ರೇಸ್ ಮಾಡಲಾಗಿದೆ. ಕಾಲ್ ಡಾಟಾ ಮೇಲೆ ಟ್ರೇಸ್ ಆಗಿದೆ ಎಂದು ವಿವರಿಸಿದರು. 

ವಯಸ್ಸಾದವರು ಮನೆಯಲ್ಲಿ ಒಬಚವರೇ ಇದ್ದರೆ,  ರಕ್ಷಣೆ ಪಡೆಯಲಿ. ಕ್ಯಾಮೆರಾ ಹಾಕಿಸಿಕೊಳ್ಳಬೇಕು,  ಅಲಾರಾಮ್ ಹಾಕಿಸಿ ಯೋಗಕ್ಷೇಮ ವಿಚಾರಿಸುವರನ್ನೇ ನೇಮಿಸಿಕೊಳ್ಳಬೇಕು.  ನೈಟ್ ಬೀಟ್ ನಲ್ಲಿ ಬರುವ ಪೊಲೀಸರನ್ನ ಇವರು ಮಾತನಾಡಿಸಬೇಕು ಎಂದು ಎಸ್ಪಿ ಮನವಿ ಮಾಡಿಕೊಂಡಿದ್ದಾರೆ. 

How did the police solve the grandmother's murder, which was a challenge?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close