ಆರೋಪಿಗಳು ಸೇಫ್, ನಿರುದ್ಯೋಗಿಯಾದ ಸಂತ್ರಸ್ತೆ, ಮದ್ಯಪ್ರವೇಶಿಸಿದ ಸಂಘಟನೆ- The accused are safe

 SUDDILIVE || SHIVAMOGGA

ಆರೋಪಿಗಳು ಸೇಫ್, ನಿರುದ್ಯೋಗಿಯಾದ ಸಂತ್ರಸ್ತೆ, ಮದ್ಯಪ್ರವೇಶಿಸಿದ ಸಂಘಟನೆ-The accused are safe, the unemployed victim, the organization that has infiltrated the alcohol

Accused, safe

ಭದ್ರಾವತಿಯ ಬಿಆರ್ಪಿಯಲ್ಲಿರುವ  ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅತಿಥಿ ಉಪನ್ಯಾಸಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದರೂ ಸಹ ಅತಿಥಿ ಉಪನ್ಯಾಸಕಿಯನ್ನ ಕೆಲಸದಿಂದ ತೆಗೆದುಹಾಕಿ ದೌರ್ಜನ್ಯ ನಡೆಸಿದ ಆರೋಪಿಗಳನ್ನ ಉಳಿಸಿಕೊಂಡ ಪ್ರಕರಣದಲ್ಲಿ ಸಂಘಟನೆಯೊಂದು ಮದ್ಯಪ್ರವೇಶಿಸಿದೆ. 

ಮಧ್ಯ ಪ್ರವೇಶಿಸಿದ ಸಂವಿಧಾನ ಹಕ್ಕುಗಳ ಸಂರಕ್ಷಣ ಸಂಘಟನೆ ಸಂತ್ರಸ್ತೆಯ ಪರ ಬ್ಯಾಟ್ ಬೀಸಿ ಕೋಟೆ ಪಿಐಗೆ ಮನವಿ ಸಲ್ಲಿಸಿದೆ. ಲೈಂಗಿಕ ದೌರ್ಜನ್ಯ ನಡೆಸಿದವರನ್ನ ಬಂಧಿಸದೆ  10 ದಿನಗಳು ಕಳೆದರೂ ಪೊಲೀಸರ ಮೌನದ ವಿರುದ್ಧ ಅನುಮಾನ ವ್ಯಕ್ತಪಡಿಸಿದೆ.  ಸಂತ್ರಸ್ತೆಗೆ ಲೈಂಗಿಕ ದೌರ್ಜನ್ಯ ವೆಸಗಿದ ಪ್ರಕರಣದಲ್ಲಿ ಅರೋಪಿಗಳನ್ನ‌ ಬಜಾವ್ ಮಾಡಿದ ಎನ್ ಇಎಸ್ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಘಟನೆ ಆರೋಪಿಗಳನ್ನ ರಕ್ಷಿಸಿ ಸಂತ್ರಸ್ತೆಯನ್ನೇ ನಿರುದ್ಯೋಗಿಯನ್ನಾಗಿಸಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. 

ಬಡವರ ಮಕ್ಕಳಿಗಾಗಿ ಆರಂಭವಾದ ಈ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಆರೋಪಿಗಳ ರಕ್ಷಣೆಗೆ ನಿಂತು ಸಂತ್ರಸ್ಥೆಯ ಮನಸ್ಥೈರ್ಯವನ್ನೇ ಕಸಿದುಕೊಂಡಿದೆ. ದಲಿತರು ಮತ್ತು ಹಿಂದುಳಿದ ವರ್ಗದವರ ಪರ ನಿಲ್ಲಬೇಕಿದ್ದ ಸಂಸ್ಥೆ ಆರೋಪಿತರ ಪರ ನಿಂತಿದೆ. ಅಲ್ಲದೆ ಪೊಲೀಸ್ ಇಲಾಖೆ ಸಹ ಆರೋಪಿಗಳನ್ನ ಬಂಧಿಸದೆ ಕಾಲಹರಣ ಮಾಡುತ್ತಿದೆ ಎಂದು ದೂರಿನಲ್ಲಿ ಆರೋಪಿಸಿದೆ

ತಕ್ಷಣವೇ ಆರೋಪಿಗಳನ್ನ ಬಂಧಿಸಬೇಕು ಮತ್ತು ಸಂತ್ರಸ್ತೆಗೆ ಅತಿಥಿ ಉಪನ್ಯಾಸಕಿಯಾಗಿ ಮುಂದುವರೆಸಬೇಕು. ಇಲ್ಲವಾದಲ್ಲಿ ಸಂಘಟನೆ ಬೀದಿಗಿಳಿದು ಹೋರಾಟಡಲಿದೆ ಎಂದು ಸಂಘಟನೆ ಮನವಿಯಲ್ಲಿ ಆಗ್ರಹಿಸಿದೆ. 

The accused are safe

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close