ನೂತನ ಎಸ್ಪಿಯಾಗಿ ಶಿವಮೊಗ್ಗಕ್ಕೆ ನಿಖಿಲ್ ಬಿ ವರ್ಗ- Nikhil B appointed as new SP for Shimoga

 SUDDILIVE || SHIVAMOGGA

ನೂತನ ಎಸ್ಪಿಯಾಗಿ ಶಿವಮೊಗ್ಗಕ್ಕೆ ನಿಖಿಲ್ ಬಿ ವರ್ಗ-Nikhil B appointed as new SP for Shimoga

Sp, Nikhil


ಹೊಸ ವರ್ಷದ ಹೊಸ್ತಿಲಲ್ಲಿರುವಾಗಲೇ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳ ವರ್ಗಾವಣೆಯಾಗಿದೆ. ಮೂರುವರೆ ವರ್ಷದ ಬಳಿಕ ಎಸ್ಪಿ ಮಿಥುನ್ ಕುಮಾರ್ ಜಿ.ಕೆ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಜಾಗದಿಂದ ವರ್ಗವಾಗಿದ್ದಾರೆ. ಒಟ್ಟು 23 ಜನ ಡಿಐಜಿ ಸ್ಥಾನಕ್ಕೆ, DIGP ಯಿಂದ IGPಗೆ ಇಬ್ಬರು, ಅಡಿಷನಲ್ ಎಸ್ಪಿಯೊಂದ ಎಸ್ಪಿಯಾಗಿ ಇಬ್ವರು, ಎಸ್ಪಿ ಮತ್ತು DCPಯಾಗಿ 20 ಜನರು ವರ್ಗಪಡೆದಿದ್ದಾರೆ. 

ಅವರ ಜಾಗಕ್ಕೆ ಕೋಲಾರದಲ್ಲಿ ಜಿಲ್ಲಾ ರಕ್ಷಣಾಧಿಕಾರಿಯಾಗಿದ್ದ ನಿಖಿಲ್ ಬಿ ವರ್ಗವಾಗಿದ್ದಾರೆ. ಅಭಿನವ ಖರೆಯ ನಂತರ ಮಿಥುನ್ ಕುಮಾರ್ ಜಿ.ಕೆ ಅವರೆ ಹೆಚ್ಚಿನ ಕಾಲ ಶಿವಮೊಗ್ಗದ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 

ಎಸ್ಪಿ ಮಿಥುನ್ ಕುಮಾರ್ ಅವರು ಡಿಸಿಪಿ-ನಾರ್ತ್ ಈಸ್ಟ್ ವಿಭಾಗಕ್ಕೆ ವರ್ಗವಾಗಿದ್ದಾರೆ. ಜಿಲ್ಲೆಯಲ್ಲಿ ಉತ್ತಮ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮಿಥುನ್ ಕುಮಾರ್ ಅವರ ಕಾರ್ಯಕ್ಷಮತೆಯ ಬಗ್ಗೆ ಸಾರ್ವಜನಿಕರ ಮೆಚ್ಚುಗೆ ಪಡೆದಿದ್ದಾರೆ. 

ಎಸ್ಪಿ ಮಿಥುನ್ ಕುಮಾರ್ ಎಸ್ಪಿಯಿಂದ ಡಿಸಿಪಿ ರ‌್ಯಾಂಕ್ ಗೆ ಬಡ್ತಿಪಡೆದು ವರ್ಗವಾಗಿದ್ದಾರೆ. ಇವರ ಜೊತೆ ಶಿಒಗ್ಗದಲ್ಲಿ ಈ ಹಿಂದೆ Adnlsp ಆಗಿದ್ದ ವಿಕ್ರಮ್ ಅಮ್ಟೆ,  ಭದ್ರಾವತಿ ಡಿವೈಎಸ್ಪಿ ಆಗಿದ್ದ ಜಿತೇಂದ್ರ ಕುಮಾರ್ ದಯಾಮ ಸೇರಿ 20 ಜನ ಎಸ್ಪಿ ರ‌್ಯಾಂಕಿಂಗ್ ಅಧಿಕಾರಿಗಳು ಡಿಸಿಪಿ ರ‌್ಯಾಂಕಿಂಗ್ ಹುದ್ದೆಯನ್ನ‌  ಅಲಂಕರಿಸಿದ್ದಾರೆ. 

 Nikhil B appointed as new SP for Shimoga  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close