ಬಾಲಕನಿಗೆ ಬೀದಿ ನಾಯಿ ಕಡಿತ, ಅಚ್ಚರಿ ಮೂಡಿಸಿದ ಬಾಲಕನ ಕುಟುಂಬದ ನಡೆ-Boy bitten by stray dog, family's reaction surprising

 SUDDILIVE || SHIVAMOGGA

ಬಾಲಕನಿಗೆ ಬೀದಿ ನಾಯಿ ಕಡಿತ, ಅಚ್ಚರಿ ಮೂಡಿಸಿದ ಬಾಲಕನ ಕುಟುಂಬದ ನಡೆ-Boy bitten by stray dog, family's reaction surprising

Dog, bite

ವಿದ್ಯಾನಗರದಲ್ಲಿ 7 ವರ್ಷದ ಬಾಲಕನಿಗೆ ಬೀದಿ ನಾಯಿ ದಾಳಿ ನಡೆಸಿದ್ದು, ಬಾಲಕನಿಗೆ ಐದು ಕಡೆ ನಾಯಿಗಳು ಕಚ್ಚಿವೆ. ಈ ನಾಯಿ ಕಡಿತ ಪ್ರಕರಣದಲ್ಲಿ ಕುಟುಂಬ  ಮಹಾನಗರ ಪಾಲಿಕೆ ಅಧಿಕಾರಿಗಳ ಮೇಲೆ ದೂರು ನೀಡಲು ಮುಂದಾಗಿದ್ದು ದೂರು ದಾಖಲಾಗುತ್ತಾ ಎಂಬುದೇ ಈಗ ಕುತೂಹಲ ಮೂಡಿದೆ. 

ವಿದ್ಯಾನಗರದಲ್ಲಿ 10-15 ಬೀದಿನಾಯಿಗಳು ಸಾರ್ವಜನಿಕರಿಗೆ ತೀವ್ರತೊಂದರೆ ಉಂಟು ಮಾಡುತ್ತಿದೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದರೂ ಸಹ ಪಾಲಿಕೆ ಅಧಿಕಾರಿಗಳು ಯಾವ ಕ್ರಮವನ್ನೂ ಜರುಗಿಸಿಲ್ಲ ಎಂದು ಬಾಲಕನ ಕುಟುಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಕನಿಗೆ ಬೀದಿ ನಾಯಿಗಳು ಐದಾರು ಕಡೆ ಕಚ್ಚಿದ್ದುತೀವ್ರ ಅಸ್ವಸ್ಥನಾದ ಕಾರಣ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀದಿ ನಾಯಿ ಕಚ್ಚಲು ಪಾಲಿಕೆ ಆಯುಕ್ತರು ಮತ್ತು ಹೆಲ್ತ್ ಇನ್ ಸ್ಪೆಕ್ಟರ್ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಬಾಲಕನ ಪೋಷಕರು ದೂರು ನೀಡಿದ್ದು ದಾರು ದಾಖಲಾಗುತ್ತಾ ಎಂಬುದೇ ಕುತೂಹಲ ಮೂಡಿಸಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close