ಅಚ್ಚರಿ ಮೂಡಿಸಿದ ಆರಗ ಜ್ಞಾನೇಂದ್ರ-The surprising Araga Gyanendra

 SUDDILIVE || SHIVAMOGGA

ಅಚ್ಚರಿ ಮೂಡಿಸಿದ ಆರಗ ಜ್ಞಾನೇಂದ್ರ-The surprising Araga Gyanendra

Araga, Gyanendra


ಜಿಲ್ಲಾ ಉಸ್ತುವರಿ ಸಚಿವ ಮಧು ಬಂಗಾರಪ್ಪ ಮತ್ತು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಅವರ ನಡುವಿನ ಕೆಳಮಟ್ಟದ ಭಾಷೆ ಬಳಕೆಯ ಟಾಕ್ ವಾರ್ ಬಗ್ಗೆ ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದು ಈ ಹಿಂದೆ ನಾವು ಸಹ ಹೀಗೆ ಮಾತನಾಡುತಿದ್ವಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವರು ಈ ಹಿಂದೆ ರಾಜಕಾರಣದಲ್ಲಿದ್ದಾಗ ಹೀಗೆ ಮಾಡುತ್ತಿದ್ವಿ ಎಂದಿದ್ದಾರೆ. ಹೀಗೆ ಪರಸ್ಪರ ಕೆಳಮಟ್ಟದ ರಾಜಕಾರಣ ಶೋಭೆ ತರುತ್ತಾ ಎಂಬ ಪ್ರಶ್ನೆಗೆ ಆರಗರವರ ಉತ್ತರ ಅಚ್ಚರಿ ಮೂಡಿಸಿದೆ. 

ಇದಕ್ಕೂ ಮೊದಲು ಮಾತನಾಡಿದ ಮಾಜಿ ಗೃಹಸಚಿವರು ಸಚಿವರು ತಮ್ಮ ಹೆಸರಿನ ಹಿಂದೆ ಅಪ್ಪನ ಹೆಸರು ಬಂಗಾರಪ್ಪ ಎಂದು ಹಾಕಿಕೊಂಡ ತಕ್ಷಣ ಬಂಗಾರಪ್ಪನವರು ಆಗಲು ಸಾಧ್ಯವಿಲ್ಲ ಎಂಬುದು ನಮ್ಮ ಆಸೆ. ಬಂಗಾರಪ್ಪನವರ ತರ ಯೋಗ್ಯತೆ ಬರಲಿ, ಅವರ ಸ್ನೇಹಮಯಿ ಜೀವನವನ್ನ ಅವರು ರೂಢಿಸಿಕೊಳ್ಳಲಿ ಎಂಬುದು ನಮ್ಮ ಆಶಯವಾಗಿತ್ತು ಎಂದು ವಿವರಿಸಿದರು‌ 

ನಾವು ಬಡತನ, ಝೀರೋ ದಿಂದ ಬಚ್ಚಾದಿಂದ ಬಂದಿದ್ದೇವೆ. ಅವರು ಚಿನ್ನದ ಚಮಚ ಬಾಯಿಯಲ್ಲಿ ಇಟ್ಟುಕೊಂಡು ಬಂದಿದ್ದಾರೆ. ನಾನು ದ್ವೇಷಿಸಲು ಸಾಧ್ಯವಿಲ್ಲ. ಸಮಸ್ಯೆಯನ್ನ ಅವರಿಗೆ ಹೇಳಬೇಕು. ಜನರ ಸಮಸ್ಯೆ ಬಗೆಹರಿಯಬೇಕು ಎಂಬುದು ನಮ್ಮ ಆಶಯವಾಗಿದೆ. ವೈಯುಕ್ತಿಯವಾಗಿ ಟೀಕೆ ಮಾಡಿದ್ದಾರೆ. ಆರಂಭದಲ್ಲಿ ನಾವು ಹೀಗೆ ವೈಯುಕ್ತಿಕ ಟೀಕೆ ಮಾಡಿದ್ದೇವೆ ಈಗ ಸರಿಯಾದ ರಾಜಕಾರಣ ಮಾಡುತ್ತಿದ್ದೇವೆ ಎಂದು ಹೇಳಿ ಅವರ ಹಿಂಬಾಲಕರನ್ನ ಅಚ್ಚರಿಪಡಿಸಿದ್ದಾರೆ. 

ಅತಿವೃಷ್ಠಿಗೆ ಅಡಿಕೆಗೆ ಹೆಕ್ಟೇರ್ 1400ರೂ. ನಿಗದಿ ಪಡಿಸಲಾಗಿದೆ. ರೋಗಗಳಿಂದ ಅಡಿಕೆ ಇಳುವರಿ ಕಡಿಮೆಯಾಗಿದೆ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಸಹ ಅಡಿಕೆ ಬೆಳೆಗಾರರ ಸಹಾಯಕ್ಕೆ ಬರಬೇಕು ಎಂದು ಕೋರಿದರು. 

ಅಡಿಕೆ ಬೆಳೆಗಾರರ ಸಂಸದರನ್ನ ಒಗ್ಗೂಡಿಸಿ ಸರ್ಕಾರಕ್ಕೆ ಬೇಡಿಕೆಯಿಟ್ಟಿದ್ದೇವೆ.‌ಅಡಿಕೆ ಧಾರಣೆ ಆಕರ್ಷಣೆಯಿಂದಾಗಿ ಅಡಿಕೆಗೆ ಬೇಡಿಕೆ ಬಂದಿದೆ. ಕಳಪೆ ಅಡಿಕೆ ಎಂದು ಗುಣಮಟ್ಟ ಕಂಡುಹಿಡಿದು ವಿದೇಶದಿಂದ ಬರುವುದನ್ನ ತಡೆಯಲು ಸಾಧ್ಯವಾಗಿದೆ ಎಂದರು. 

ಮೇಘಾಲಯಕ್ಕೆ ಪ್ರವಾಸ ಹೋದಾಗ ಬಾಂಗ್ಲಾ ಬಾರ್ಡರ್ ಮೂಲಕ ದೇಶಕ್ಕೆ ಕಳಪೆ ಅಡಿಕೆ ಬರುತ್ತಿದ್ದ ಕಾರಣ ಅದನ್ನ ತಡೆಯುವಲ್ಲಿ ಸಹಕಾರ ಸಂಘ ಯಸಸ್ವಿಯಾಗಿದೆ. ಫುಡ್ ಅಂಡ್ ಸೇಫ್ಟಿ ಕಮಿಷನ್ ನಮ್ಮ ಅಡಿಕೆ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ.‌ ಅಡಿಕೆ 11 ಕಾಲು ಪರ್ಸೆಂಟ್ ಮೋಯಿಶ್ಚರ್ ಬೇಕಿದೆ. ಈ ಬಗ್ಗೆ ಸಂಶೋಧನೆ ಆಗುತ್ತಿದೆ ಎಂದು ತಿಳಿಸಿದರು. 

ಸರ್ಕಾರದಲ್ಲಿ ಕಳೆದ ವರ್ಷ ಅರಣ್ಯ ಉತ್ಪನ್ನಗಳ ಜೊತೆ ಸೇರಿಸಲಾಗಿತ್ತು. ಅದನ್ನ ದೆಹಲಿಯವರೆಗೆ ಹೋಗಿ ತೆಗೆಯಿಸಲಾಗಿದೆ. ಇದರ ಜೊತೆಗೆ ಎಲೆಚುಕ್ಕಿ ರೋಗ ಹಳದಿ ರೋಗ ಬಾಧಿಸುತ್ತಿದೆ. ಫಸಲಿನಲ್ಲಿ ಕಡಿಮೆಯಾಗಿದೆ. 2024-25 ಬೆಳೆವಿಮೆ ಅವೈಜ್ಞಾನಿಕವಾಗಿದೆ ಕುಡುಮಲ್ಲಿಗೆ 55 ರೈತರಿಗೆ ಬೆಳೆ ವಿಮೆ ಬಂದಿಲ್ಲ. ರೈತರಿಗೆ ನಿರಾಶೆಯಾಗಿದೆ ಮಳೆಮಾಪಕಗಳ ನಿಷ್ಕ್ರಿಯತೆಯಿಂದ ಬೆಳೆವಿಮೆ ಬಂದಿಲ್ಲ. ಪ್ರತಿ ಪಂಚಾಯಿತಿ ಮೇಲೆ ಮಳೆ ಮಾಪನ ಅಳವಡಿಸಲಾಗಿದೆ. ಕಟ್ಟಡ ಮಳೆಗೆ ಸೋರುತ್ತದೆ ಎಂದು ಮಳೆ ಮಾಪನದ ಮೇಲೆ ರೂಫ್ ನಿರ್ಮಿಸಲಾಗಿರುವುದರಿಂದ ಬೆಳೆಗೆ ವಿಮೆಸಿಕ್ಕಿಲ್ಲ ಎಂದರು‌. 

The surprising Araga Gyanendra

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close