ಕೆರೆ ಏರಿಯಿಂದ ಕೆಳಗೆ ಬಿದ್ದ ಕಾರು- ಓರ್ವನಿಗೆ ತೀವ್ರಗಾಯ-Car falls off lake, one seriously injured

 SUDDILIVE || BHADRAVATHI

ಕೆರೆ ಏರಿಯಿಂದ ಕೆಳಗೆ ಬಿದ್ದ ಕಾರು- ಓರ್ವನಿಗೆ ತೀವ್ರಗಾಯ-Car falls off lake, one seriously injured 

Car, Falls

ಭದ್ರಾವತಿಯ ಪ್ರತಿಷ್ಠಿತ ನಿರ್ಮಲ ಆಸ್ಪತ್ರೆಯ ಹಿಂಭಾಗದಲ್ಲಿರುವ ಖಲಂದರ್ ನಗರದಲ್ಲಿ ಕಾರೊಂದು ಕೆರೆ ಏರಿಯಿಂದ ಕೆಳಗೆ ಬಿದ್ದಿದ್ದು, ಓರ್ವನಿಗೆ ತಲೆಗೆ ಹೊಡೆತಬಿದ್ದು ಸೀರಿಯಸ್ ಆಗಿದ್ದಾನೆ. ಆತನನ್ನ ಹೆಚ್ಚಿನ ವಿಕಿತ್ಸೆಗಾಗಿ ಮೆಗ್ಗಾನ್ ಗೆ ಸಾಗಿಸಲಾಗಿದೆ.

ಖಲಂದರ್ ನಗರದಲ್ಲಿ ಕೆರೆ ಏರಿಯಾದಲ್ಲಿ ಸಾಗುವಾಗ ಕಾರು ಕೆರೆ ಏರಿಯಿಂದ ಕೆಳಗೆ ಬಿದ್ದಿದೆ. ಕೆರೆ ಏರಿ ಅಂತ ಇದ್ದರೂ ಜಾಗದಲ್ಲಿ ನೀರಿಲ್ಲ. ಆದರೆ ಕಾರು ಮೇಲಿನಿಂದ ಕೆಳಗೆ ಬಿದ್ದಿದೆ. ಇದರಿಂದ ಕಾರಿನಲ್ಲಿದ್ದ ಐವರಲ್ಲಿ ಓರ್ವನಿಗೆ ಹೊಡೆತಬಿದ್ದಿದೆ. 

ತೀವ್ರಗಾಯಗೊಂಡಿದ್ದ ಯುವಕನನ್ನ ಪ್ರವೀಣ (19) ಎಂದು ಗುರುತಿಸಲಾಗಿದೆ. ಆತನನ್ನ ಮೆಗ್ಗಾನ್ ಗೆ ಸಾಗಿಸಲಾಗಿದೆ. ಚಾಲಕ ನಿರ್ಲಕ್ಷದಿಂದ ಕಾರು ಕೆಳಗೆ ಬಿದ್ದಿದೆಯಾ, ಅಥವಾ ಎದುರಿನಿಂದ ವಾಹನದಿಂದ ತಪ್ಪಿಸಿಕೊಳ್ಳಲು ಹೋಗಿ ಕೆಳೆಗೆ ಕಾರು ಬಿತ್ತೋ ಗೊತ್ತಿಲ್ಲ. ಕಾಲೇಜಿನ ಸ್ನೇಹಿತರ ಜೊತೆ  ತೆರಳುವಾಗ ಈ ಘಟನೆ ನಡೆದಿದೆ. ಭದ್ರಾವತಿ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಘಟನೆ ಇಂದು ಸಂಜೆ ನಡೆದಿದೆ.‌

Car falls off lake, one seriously injured 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close