ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಪ್ರಕರಣ, ಮೂವರು ಆರೋಪಿತರಿಗೆ 20 ವರ್ಷ ಶಿಕ್ಷೆ-Three accused sentenced to 20 years in prison for sexual assault of minor

SUDDILIVE || SHIVAMOGGA

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಪ್ರಕರಣ, ಮೂವರು ಆರೋಪಿತರಿಗೆ 20 ವರ್ಷ ಶಿಕ್ಷೆ-Three accused sentenced to 20 years in prison for sexual assault of minor    

Sexual, assault

ಅಪ್ರಾಪ್ತೆ ಬಾಲಕಿಯನ್ನ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಹೋಮ್ ಸ್ಟೇಯಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಮೂವರು ಅರೋಪಿಗೆ 20 ವರ್ಷದ ಕಠಿಣ ಕಾರಾಗೃಹ ಶಿಕ್ಷೆ 10 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. 

2023ನೇ ಸಾಲಿನಲ್ಲಿ, 16 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು 26 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನು ದಿನಾಂಕ: 11-09-2023 ರಂದು ಬಲವಂತವಾಗಿ ಬಾಲಕಿಯ ಕೈ ಹಿಡಿದು ಎಳೆದು ಕಾರಿನಲ್ಲಿ ಕೂರಿಸಿಕೊಂಡು, ಅನಧಿಕೃತ ಹೋಂಸ್ಟೇ ಒಂದಕ್ಕೆ ಕರೆದು ಕೊಂಡು ಹೋಗಿ ಆಕೆಯ ಮೇಲೆ  ಲೈಂಗಿಕ ದೌರ್ಜನ್ಯವೆಸಗಿದ್ದು ಈ ಬಗ್ಗೆ ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿತ್ತು. 

ತನಿಖಾಧಿಕಾರಿಗಳಾದ ಪೊಲೀಸ್ ಉಪ ಅಧಿಕ್ಷಕರಾದ ಗೋಪಾಲಕೃಷ್ಣ ಟಿ ನಾಯಕ್  ಪ್ರಕರಣದಲ್ಲಿ ನೊಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಹಾಗೂ ಯಾತ್ರಿ ನಿವಾಸ ನಲ್ಲಿ  ತಂಗಲು ಬಂದ ಆರೋಪಿ ಹಾಗೂ  ಅಪ್ರಾಪ್ತ ವಯಸ್ಸಿನ  ಬಾಲಕಿಗೆ ಸಂಬಂಧಿಸಿದ ಯಾವುದೇ ಸೂಕ್ತ ದಾಖಲೆಗಳನ್ನು ಪಡೆಯದೇ ಹಾಗೂ ವಯಸ್ಸನ್ನು ಪರಿಶೀಲಿಸದೆಯೇ ಪದೇ ಪದೇ ಉಳಿದುಕೊಳ್ಳಲು ಅವಕಾಶ ನೀಡಿದ ಅನಧಿಕೃತ ಹೋಂಸ್ಟೇ ನ 58 ವರ್ಷದ ಮಾಲಿಕ ಹಾಗೂ 24 ವರ್ಷದ ರೂಮ್ ಬಾಯ್  ಇಬ್ಬರೂ ಸಹಾ ಅಪ್ರಾಪ್ತ ವಯ್ಯಸ್ಸಿನ ಬಾಲಕಿಯ ವಿರುದ್ಧ ಲೈಂಗಿಕ ದೌರ್ಜನ್ಯವೆಸಗಲು ಸಹಕಾರ ನೀಡಿರುವುದು ತನಿಖೆಯಿಂದ ಕಂಡು ಬಂದಿದೆ. ಮೂರು ಜನರ ವಿರುದ್ಧ ದೋಷಾರೋಪಣ ಪತ್ರವನ್ನು ಡಿವೈಎಸ್ಪಿ ಸಲ್ಲಿಸಿದ್ದರು. 

ಸರ್ಕಾರದ ಪರವಾಗಿ ಶ್ರೀಧರ್ ಸರ್ಕಾರಿ ಅಭೀಯೋಜಕರವರು ವಾದ ಮಂಡಿಸಿರುತ್ತಾರೆ. ಘನ ನ್ಯಾಯಾಲಯದಲ್ಲಿ ಆರೋಪಿತನ ವಿರುದ್ಧ ಆರೋಪವು ಧೃಡಪಟ್ಟ ಹಿನ್ನೆಲೆಯಲ್ಲಿ ಘನ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ FTSC-1 ಶಿವಮೊಗ್ಗ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ  ನಿಂಗನಗೌಡ ಭ ಪಾಟೀಲ್ ರವರು ಮೂವರು ಆರೋಪಿತರಿಗೆ 20 ವರ್ಷ ಸಧಾ ಕಾರಾಗೃಹ ಶಿಕ್ಷೆ ಹಾಗೂ 1ನೇ ಆರೋಪಿಗೆ 71,000/- 2ನೇ ಮತ್ತು 3ನೇ ಆರೋಪಿಗೆ ತಲಾ 10,000/- ರೂ ದಂಡ ವಿಧಿಸಿ ಆದೇಶಿಸಿರುತ್ತಾರೆ.

Three accused sentenced to 20 years in prison for sexual assault of minor

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close