ಸಿಟಿ ಬಸ್ ಚಾಲಕ ನೇ*ಣು ಬಿಗಿದ ಸ್ಥಿತಿಯಲ್ಲಿ ಪತ್ತೆ-City bus driver found hanging

 SUDDILIVE || SHIVAMOGGA

ಸಿಟಿ ಬಸ್ ಚಾಲಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ-City bus driver found hanging

Citybus, driver

ಶಿವಮೊಗ್ಗದ ಟಿಪ್ಪು ನಗರದಲ್ಲಿ ಬಸ್ ಚಾಲಕನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಚಾಲಕನ ಆತ್ಮಹತ್ಯೆಗೆ ಕೌಟುಂಬಿಕ ಕಲಹದ ಶಂಕೆ ವ್ಯಕ್ತವಾಗುತ್ತಿದೆ. 

ಟಿಪ್ಪುನಗರ ಎಡಭಾಗದ 5 ನೇ ತಿರುವಿನಲ್ಲಿರುವ ಮನೆಯೊಂದರಲ್ಲಿ ಬಾಬು ಯಾನೆ ಸಯ್ಯದ್ ಮೆಹಬೂಬ್(36) ಎಂಬ ನಗರ ಸಿಟಿ ಬಸ್ ಚಾಲಕ ನೇಣಿಗೆ ಶರಣಾಗಿದ್ದಾನೆ. ಕರ್ಟನ್ ನ್ನೇ ನೇಣು ಮಾಡಿಕೊಂಡು ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡಿರುವುದು ತಿಳಿದು ಬಂದಿದೆ. 


ಈ ಚಾಲಕ ಯಾರು ಎಂಬುದಾದರೆ ಸರಿಸುಮಾರು ಒಂದು ತಿಂಗಳ ಹಿಂದೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಪಘಾತ ಪಡಿಸಿ ಇಬ್ಬರ ಸಾವಿಗೆ ಕಾರಣವಾಗಿದ್ದ ಸಿಟಿ ಬಸ್ ಚಾಲಕನಾಗಿದ್ದಾನೆ.  ನಿನ್ನೆ ಸಂಜೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತನನ್ನ ಅಂಬ್ಯುಲೆನ್ಸ್ ನಲ್ಲಿ ಮೆಗ್ಗಾನ್ ಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

City bus driver found hanging

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close