SUDDILIVE || SHIVAMOGGA
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಶಕ್ತಿ ದೇವತೆಗಳ ಸಮಾಗಮ-The gathering of Shakti deities held at the Kote Anjaneya Swamy Temple
ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಶಕ್ತಿ ದೇವತೆಗಳ ಸಮಾಗಮ ನಡೆದಿದೆ. ಪ್ರತಿವರ್ಷದಂತೆ ಈ ವರ್ಷವೂ ಶಕ್ತಿ ದೇವತೆಗಳನ್ನ ಒಂದು ಕಡೆಸೇರಿಸಿ ದೇವತೆಗಳ ದರ್ಶನ ಪಡೆಯುವ ಭಾಗ್ಯ ಕಲ್ಪಿಸಲಾಗಿದೆ.
ಒಟ್ಟು 35 ದೇವತೆಗಳ ಶಕ್ತಿ ದೇವತೆಗಳನ್ನ ತಂದು ಕೂರಿಸಲಾಗಿದೆ, ಮಿಳಘಟ್ಟದಿಂದ ಗಂಗಾಪರಮೇಶ್ವರಿ, ಪಿಳ್ಳಂಗಮ್ಮ ಪ್ಲೇಗಮ್ಮ ದೇವತೆಗಳನ್ನ ಕರೆತಂದಿದ್ದರೆ, ವಿದ್ಯಾನಗರದ ಉಚ್ಚಂಗಮ್ಮ,ಚೌಡೇಶ್ವರಿ, ಬೈಪಾಸ್ ನ ಓಂಶಕ್ತಿ, ಹರಿಗೆ ದುರ್ಗಪರಮೇಶ್ವರಿ, ನಿಧಿಗೆ, ಅಂಗಳಯ್ಯನಕೆರೆ ಗಂಗಪರಮೇಶ್ವರಿ ದೇವತೆಗಳ ಕರೆತರಲಾಗಿತ್ತು.
ಎಳ್ಳು ಅಮಾವಾಸೆ ಪ್ರಯತ್ತ ಶಕ್ತಿ ದೇವತೆಗಳ ಸಮಾಗಮವನ್ನ ಹಮ್ಮಿಕೊಳ್ಳಲಾಗಿದೆ, ಸಂಜೆ ಮಹಿಳೆಯಿರಿಂದ 35 ದೇವತೆಗಳ ಮಡ್ಲಕ್ಕಿ ಅರ್ಪಣೆ ಮಾಡಲಾಗಿದೆ. ಸಂಜೆ 8 ಗಂಟೆಯ ನಂತರ ದೇವತೆಗಳು ಆಯಾ ದೇವಸ್ಥಾನಕ್ಕೆ ವಾಪಾಸ್ ಆಗಲಿದೆ.
ಇಂದು ಬೆಳಿಗ್ಗೆ ಭಜನೆ, ದೇವತೆಗಳಿಗೆ ಮಹಾಮಂಗಳಾರತಿ ನಡೆದಿದೆ. ನಂತರ ಪ್ರಸಾದ ವಿತರಣೆ ನಡೆದಿದೆ. ಶಕ್ತಿ ದೇವತೆಗಳ ಸಮಾಗಮಕ್ಕೆ 6-7 ಸಾವಿರ ಜನ ಸೇರಿ ದೇವರ ದರ್ಶನ ಪಡೆದಿದ್ದಾರೆ. ವಿಶ್ವ ಹಿಂದೂ ಪರಿಷತ್ ವತಿಯಿಂದ ಈ ಕಾರ್ಯಕ್ರಮ ನಡೆದಿದೆ.
The gathering of Shakti deities held at the Kote Anjaneya Swamy Temple
